ವಿಷಯಕ್ಕೆ ಹೋಗು

ಕೃಷ್ಣಾ ಭಾರದ್ವಾಜ್ (ಅರ್ಥಶಾಸ್ತ್ರಜ್ಞೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಷ್ಣಾ ಭಾರದ್ವಾಜ್
ಜನನ
ಕೃಷ್ಣಾ ಚಂದಾವರಕರ್

(೧೯೩೫-೦೮-೨೧)೨೧ ಆಗಸ್ಟ್ ೧೯೩೫
ಮರಣ8 March 1992(1992-03-08) (aged 56)
ರಾಷ್ಟ್ರೀಯತೆಭಾರತೀಯರು
ಸಂಗಾತಿರಂಗನಾಥ ಭಾರದ್ವಾಜ್
Alma materರೂಯಾ ಕಾಲೇಜು, ಮುಂಬೈ, ಮುಂಬೈ ವಿಶ್ವವಿದ್ಯಾಲಯ

 

ಕೃಷ್ಣಾ ಭಾರದ್ವಾಜ್ (೨೧ ಆಗಸ್ಟ್ ೧೯೩೫-೮ ಮಾರ್ಚ್ ೧೯೯೨) ಅವರು ಭಾರತೀಯ ಅರ್ಥಶಾಸ್ತ್ರಜ್ಞೆಯಾಗಿದ್ದರು. ಇವರು ಮುಖ್ಯವಾಗಿ ಆರ್ಥಿಕ ಅಭಿವೃದ್ಧಿ ಸಿದ್ಧಾಂತ ಮತ್ತು ಶಾಸ್ತ್ರೀಯ ಅರ್ಥಶಾಸ್ತ್ರದ ವಿಚಾರಗಳ ಪುನರುಜ್ಜೀವನಕ್ಕೆ ಅವರು ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ.[] ಆರ್ಥಿಕ ಸಿದ್ಧಾಂತವು ಗಮನಿಸಬಹುದಾದ ಮತ್ತು ವಾಸ್ತವದ ಅಳತೆಗೆ ಹೊಂದಿಕೊಳ್ಳುವ ಪರಿಕಲ್ಪನೆಗಳನ್ನು ಆಧರಿಸಿರಬೇಕು ಎಂದು ಇವರು ನಂಬಿದ್ದರು.[]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಭಾರದ್ವಾಜ್ ಅವರು ೧೯೩೫ ರ ಆಗಸ್ಟ್ ೨೧ ರಂದು ಕರ್ನಾಟಕದ ಕಾರವಾರದಲ್ಲಿ ಕೊಂಕಣಿ ಕುಟುಂಬವೊಂದರಲ್ಲಿ ಜನಿಸಿದರು. ಸ್ಥಳೀಯ ಕಾಲೇಜಿನ ಶಿಕ್ಷಕ ಎಂ. ಎಸ್. ಚಂದ್ರವರ್ಕರ್ ಮತ್ತು ಅವರ ಪತ್ನಿ ಶಾಂತಾಬಾಯಿಯವರ ಆರು ಮಕ್ಕಳಲ್ಲಿ ಇವರು ಕಿರಿಯರಾಗಿದ್ದರು.

ಕುಟುಂಬವು ೧೯೩೯ ರಲ್ಲಿ ಬೆಳಗಾವಿಗೆ ಸ್ಥಳಾಂತರಗೊಂಡಿತು ಮತ್ತು ಭಾರದ್ವಾಜ್ ಆ ನಗರದಲ್ಲಿನ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತು, ಹದಿನೈದನೇ ವಯಸ್ಸಿನಲ್ಲಿ ಅನೇಕ ಸ್ಥಳೀಯ ಸ್ಪರ್ಧೆಗಳಲ್ಲಿ ಬಾಗವಹಿಸಿ ಬಹುಮಾನ ಪಡೆದುಕೊಳ್ಳುತ್ತಿದ್ದರು. ೧೯೫೨ ರಲ್ಲಿ, ಅವರ ತಂದೆಯ ಮರಣ ಹೊಂದಿದ ನಂತರ, ಕುಟುಂಬದೊಂದಿಗೆ ಮುಂಬೈಗೆ ತೆರಳಿದರು. ಮುಂಬೈನಲ್ಲಿ ಭಾರದ್ವಾಜ್, ರುಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ, ಪ್ರಥಮ ದರ್ಜೆಯಲ್ಲಿ ಅರ್ಥಶಾಸ್ತ್ರ ವಿಷಯದ ಪದವಿ ಪಡೆದರು. ಇವರು ನಂತರ ಸ್ನಾತಕೋತ್ತರ ಪದವಿಯನ್ನು ತೆಗೆದುಕೊಂಡು ಸಾರಿಗೆ ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿ ಪೂರ್ಣಗೊಳಿಸಿದರು. ೧೯೬೦ ರಲ್ಲಿ [] ಆರ್ಥಿಕ ಸಿದ್ಧಾಂತದ ಕಡೆಗೆ ಅವರ ವಿಮರ್ಶಾತ್ಮಕ ದೃಷ್ಟಿಕೋನವು ಡಾಕ್ಟರೇಟ್ ವಿದ್ಯಾರ್ಥಿಯಾಗಿ ಅಭಿವೃದ್ಧಿ ಸಿದ್ಧಾಂತದಲ್ಲಿ ಅವರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾಯಿತು. []

ವೃತ್ತಿಜೀವನ

[ಬದಲಾಯಿಸಿ]

೧೯೬೦ರಲ್ಲಿ, ಪಿಯರೋ ಸ್ರಫಾ ಅವರ ಪ್ರೊಡಕ್ಷನ್ ಆಫ್ ಕಮೋಡಿಟಿಸ್ ಬೈ ಮೀನ್ಸ್ ಆಫ್ ಕಮೋಡಿಟಿಸಸ್ ಅನ್ನು ಪ್ರಕಟಿಸಲಾಯಿತು. ಈ ಪುಸ್ತಕವನ್ನು ಪರಿಶೀಲಿಸುವಂತೆ ಅಂದಿನ ಎಕನಾಮಿಕ್ ವಾರ ಪತ್ರಿಕೆ ಸಂಪಾದಕ ಸಚಿನ್ ಚೌಧರಿ ಅವರು ಭಾರದ್ವಾಜ್ ಅವರನ್ನು ಕೇಳಿಕೊಂಡರು. ಅವರು ಈ ಕಾರ್ಯವನ್ನು ಅದ್ಭುತವಾಗಿ ಪರಿಹರಿಸಿದರು, ಇದು ಅವರ ಮುಂದಿನ ವೈಜ್ಞಾನಿಕ ಕಾರ್ಯಕ್ಕೆ ಮುನ್ನುಡಿಯಾಯಿತು.

೧೯೬೧ರಲ್ಲಿ, ಭಾರದ್ವಾಜ್ ಅವರು ವಿಮರ್ಶಾತ್ಮಕ ಗ್ರಹಿಕೆಗಳೊಂದಿಗೆ ಯೋಜನೆ ಮತ್ತು ಅಭಿವೃದ್ಧಿಯ ಸಮಸ್ಯೆಗಳ ಮೇಲೆ ಕೆಲಸ ಮಾಡಲು ಮುಂದಾದರು.[]

೧೯೬೭ರಲ್ಲಿ, ಭಾರದ್ವಾಜ್ ಇವರು ಕೇಂಬ್ರಿಡ್ಜ್‌ಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಸಹವರ್ತಿಯಾಗಿ ಹೋದರು ಮತ್ತು ಪಿಯೆರೊ ಸ್ರಫಾ ಅವರ ಪ್ರಭಾವಕ್ಕೆ ಒಳಗಾಗಿ ಅವರ ಹತ್ತಿರದ ಶಿಷ್ಯರಲ್ಲಿ ಒಬ್ಬರಾದರು.[]

ಬಾರದ್ವಾಜ್ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲದ ಆರ್ಥಿಕ ಅಧ್ಯಯನ ಮತ್ತು ಯೋಜನೆ ಕೇಂದ್ರದಲ್ಲಿ (ಸಿಇಎಸ್ಪಿ) ಶಾಸ್ತ್ರೀಯ, ಮಾರ್ಕ್ಸಿಯನ್, ಕೇನ್ಸೀಯನ್ ಮತ್ತು ವಾಲ್ರಾಸಿಯನ್ ಮುಂತಾದ ವಿವಿಧ ಆರ್ಥಿಕ ವಿಧಾನಗಳ ಬೋಧನೆಯನ್ನು ಉತ್ತೇಜಿಸಿದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಅಧ್ಯಕ್ಷರಾಗಿದ್ದರು. .[][] ಅವರು ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರಜ್ಞ ಪಿಯರೋ ಸ್ರಾಫಾ ಅವರ ಸಂಗ್ರಹಿಸಿದ ಪೇಪರ್‌ಗಳನ್ನು ಸಂಪಾದಿಸಿದ್ದಾರೆ. ಇವರು ಹಲವಾರು ನಿಯತಕಾಲಿಕಗಳು ಮತ್ತು ವೇದಿಕೆಗಳಿಗೆ ಕೊಡುಗೆ ನೀಡಿದ್ದಾರೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರಜ್ಞರಲ್ಲಿ ಪ್ರಮುಖ ಬೆಳಕು ಎಂದು ಪ್ರಸಿದ್ಧರಾಗಿದ್ದಾರೆ.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಅವರ ಮಗಳಾದ ಸುಧಾ ಭಾರದ್ವಾಜ್[] ಸಾಮಾಜಿಕ ಕಾರ್ಯಕರ್ತೆ ಮತ್ತು ಕಾರ್ಮಿಕ ಸಂಘವಾದಿ ಆಗಿದ್ದಳು.[]

ಪುಸ್ತಕಗಳು ಮತ್ತು ಪತ್ರಿಕೆಗಳು

[ಬದಲಾಯಿಸಿ]
  • ೧೯೬೦: ಟೆಕ್‌ನಿಕ್ಸ್ ಆಫ್ ಟ್ರಾನ್ಸ್‌ಪೋರ್ಟೇಷನ್ ಪ್ಲಾನಿಂಗ್, ವಿತ್ ಸ್ಪೆಷಲ್ ರೆಫರೆನ್ಸಸ್ ಟು ರೈಲ್‌ವೇಸ್
  • ೧೯೮೯ ರ ಪ್ರಬಂಧಗಳ ಸಂಗ್ರಹವನ್ನು ಆಸ್ಟ್ರೇಲಿಯನ್ ಎಕನಾಮಿಕ್ ಪೇಪರ್ಸ್ ಮತ್ತು ಕೇಂಬ್ರಿಡ್ಜ್ ಜರ್ನಲ್ ಆಫ್ ಎಕನಾಮಿಕ್ಸ್ನಲ್ಲಿ ಮುದ್ರಿಸಲಾಯಿತು.[]
  • ಕಾರ್ಮಿಕ ಮಾರುಕಟ್ಟೆಗಳು, ಉದ್ಯೋಗ ನೀತಿಗಳು ಮತ್ತು ಅಭಿವೃದ್ಧಿಯ ಚಲನಶೀಲತೆ.
  • ಭಾರತೀಯ ಕೃಷಿಯಲ್ಲಿ ರಚಿತವಾದ ಉತ್ಪಾದನಾ ಪರಿಸ್ಥಿತಿಗಳು ಕೃಷಿ ನಿರ್ವಹಣಾ ಸಮೀಕ್ಷೆಗಳ ಆಧಾರದ ಮೇಲೆ ಒಂದು ಅಧ್ಯಯನ (ಅನ್ವಯಿಕ ಅರ್ಥಶಾಸ್ತ್ರ ವಿಭಾಗ ಸಾಂದರ್ಭಿಕ ಪ್ರಬಂಧಗಳು)
  • ಸಂಗ್ರಹಣೆ, ವಿನಿಮಯ ಮತ್ತು ಅಭಿವೃದ್ಧಿ ಭಾರತೀಯ ಆರ್ಥಿಕತೆಯ ಮೇಲೆ ಪ್ರಬಂಧಗಳು
  • ಬಂಡವಾಳಶಾಹಿಯ ಕುರಿತಾದ ದೃಷ್ಟಿಕೋನಗಳು ಮಾರ್ಕ್ಸ್, ಕೀನ್ಸ್, ಚಂಪೀಟರ್ ಮತ್ತು ವೆಬರ್, ಸುದೀಪ್ತಾ ಕವಿರಾಜ್ ಅವರೊಂದಿಗೆ.
  • ಮೌಲ್ಯ ಮತ್ತು ವಿತರಣೆಯ ವಿಷಯಗಳು-ಶಾಸ್ತ್ರೀಯ ಸಿದ್ಧಾಂತ ಮರುಮೌಲ್ಯಮಾಪನ. ಲಂಡನ್, ೧೯೮೯
  • ಪಿಯೆರೊ ಸ್ರಫಾ ಅವರ ಗೌರವಾರ್ಥ ಪ್ರಬಂಧಗಳು. (ಬರ್ಟ್ರಾಮ್ ಷೆಫೋಲ್ಡ್ರೊಂದಿಗೆ. ೨ ನೇ ಎಡಿ. ರೂಟ್ಲೆಡ್ಜ್ ಲಂಡನ್ ೧೯೯೨  ಐಎಸ್‌ಟಿಎನ್ 0-04-445254-3

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Krishna Bharadwaj". www.hetwebsite.net. Retrieved 2017-11-04.
  2. ೨.೦ ೨.೧ "Krishna Bharadwaj: The Ideal Economist | Undergraduate Economist". www.alexmthomas.com (in ಅಮೆರಿಕನ್ ಇಂಗ್ಲಿಷ್). Retrieved 2017-11-04.
  3. Arestis, Sawyer, ed. (1992). "Krishna BHARADWAJ (1935–1992)". A Biographical Dictionary of Dissenting Economists (2nded ed.). Edward Elgar. pp. 55–56. ISBN 1 85898 560 9.
  4. ೪.೦ ೪.೧ Arestis, Philip; Sawyer, Malcolm C. (2001-01-01). A Biographical Dictionary of Dissenting Economists (in ಇಂಗ್ಲಿಷ್). Edward Elgar Publishing. ISBN 9781843761396.
  5. ೫.೦ ೫.೧ "Krishna Bharadwaj | The University Press Limited". www.uplbooks.com. Retrieved 2017-11-04.
  6. ೬.೦ ೬.೧ "Row in JNU after Dean replaces speaker invited by centre for economic studies". The Indian Express. 7 March 2018. Retrieved 28 August 2018.
  7. "Krishna Bharadwaj, A Sraffian Economist". robertvienneau.blogspot.in. 28 May 2008. Retrieved 2017-11-04.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]