ಕೃತಿ ಕರಬಂಧ
Kriti Kharbanda | |
---|---|
ಜನನ | Kriti Kharbanda ೨೯ ಅಕ್ಟೋಬರ್ ೧೯೮೮[೧] ನವ ದೆಹಲಿ, India |
ರಾಷ್ಟ್ರೀಯತೆ | Indian |
ವೃತ್ತಿs |
|
ಸಕ್ರಿಯ ವರ್ಷಗಳು | 2009 – present |
ಪೋಷಕ | Ashwani Kharbanda (Father) Rajni Kharbanda (Mother) |
ಕೃತಿ ಕರಬಂಧ (ಜನನ 29 ಅಕ್ಟೋಬರ್ 1988) ಹಿಂದಿ, ತೆಲುಗು ಮತ್ತು ತಮಿಳು ಚಲನಚಿತ್ರಗಳೊಂದಿಗೆ ಪ್ರಧಾನವಾಗಿ ಕನ್ನಡದಲ್ಲಿ ಕೆಲಸ ಮಾಡುವ ಭಾರತೀಯ ಚಲನಚಿತ್ರ ನಟಿ. ರೂಪದರ್ಶಿಯಾಗಿ ವೃತ್ತಿಜೀವನ ಪ್ರವೇಶಿಸಿದ ಅವರು ತೆಲುಗಿನ ಬೋನಿ (2009) ಸಿನಿಮಾದಲ್ಲಿ ನಟಿಸುವ ಮೂಲಕ ಚಲನಚಿತ್ರ ರಂಗದ ಪ್ರವೇಶ ಮಾಡಿದರು. ತರುವಾಯ ಅವರು ಕನ್ನಡದಲ್ಲಿ ಅಗ್ರ ನಟಿಯರಲ್ಲಿ ಒಬ್ಬರಾದರು. ಅವರು ಇತ್ತೀಚೆಗೆ ತಮಿಳು ಮತ್ತು ಹಿಂದಿ ಚಲನಚಿತ್ರ ರಂಗಕ್ಕೆ ಕಾಲಿಟ್ಟಿದ್ದಾರೆ.
2015 ರಲ್ಲಿ ಅವರು ಬೆಂಗಳೂರು ಟೈಮ್ಸ್ ನ ಮೋಸ್ಟ್ ಡಿಸೈರಬಲ್ ವುಮೆನ್ ಪ್ರಶಸ್ತಿ ಪಡೆದರು. '
ಜೀವನ
[ಬದಲಾಯಿಸಿ]ಕೃತಿ ಕರಬಂಧ ದೆಹಲಿಯ ಅಶ್ವನಿ ಕರಬಂಧ ಮತ್ತು ರಜನಿ ಕರಬಂಧರ ಪುತ್ರಿ. ಅವರ ತಂಗಿ ಇಷಿತಾ ಕರಬಂಧ ಮತ್ತು ತಮ್ಮ ಪೇಪರ್ ಪ್ಲೇನ್ ಪ್ರೊಡಕ್ಷನ್ಸಿನ ಸಹ-ಸಂಸ್ಥಾಪಕರಾದ ಜೈವರ್ಧನ್ ಕರಬಂಧ. ಅವರು ತಮ್ಮ ಕುಟುಂಬದೊಂದಿಗೆ 1990ರ ಆರಂಭದಲ್ಲಿ ಬೆಂಗಳೂರಿಗೆ ಬಂದರು. ಬಾಲ್ಡ್ವಿನ್ ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಾಲೆ ಮುಗಿಸಿ, ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಪದವಿ ಪಡೆದರು. ಅವರು ಆಭರಣ ವಿನ್ಯಾಸದಲ್ಲಿ ಡಿಪ್ಲೊಮಾವನ್ನು ಹೊಂದಿದ್ದಾರೆ.[೨]
ಅವರು ಶಾಲಾ-ಕಾಲೇಜಿನಲ್ಲಿದ್ದಾಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದರು. ಚಿಕ್ಕಂದಿನಿಂದಲೂ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದು, ಓದುವಾಗಲೂ ಜಾಹಿರಾತುಗಳಲ್ಲಿ ಕೆಲಸ ಮಾಡಿದ್ದರು. ಟಿ.ವಿ ಕಮರ್ಷಿಯಲ್ ಗಳಲ್ಲಿ ಕಾಣಿಸಿಕೊಳ್ಳೋದು ಅವರಿಗೆ ಬಹಳ ಇಷ್ಟವಂತೆ. ಕಾಲೇಜು ದಿನಗಳಲ್ಲಿ ಅವರು ಭೀಮಾ ಜ್ಯುವೆಲ್ಲರ್ಸ್, ಸ್ಪಾರ್, ಮತ್ತು ಫೇರ್ ಅಂಡ್ ಲವ್ಲಿ ಜಾಹಿರಾತುಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ ರಾಜ್ ಪಿಪ್ಪಾಲ್ಲಾ ತಮ್ಮ ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿರುವಾಗ ಸ್ಪಾರ್ ಬಿಲ್ಬೋರ್ಡಿನಲ್ಲಿ ಕೃತಿಯವರ ಫೋಟೋ ನೋಡಿ ಮೆಚ್ಚಿ ಕೃತಿಯವರಿಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡಿದರು. ನಟಿಯಾಗುವ ಯೋಜನೆಯೇ ಇಲ್ಲದ ಇವರಿಗೆ ಅಮ್ಮನ ಬೆಂಬಲ ಸಿಕ್ಕಿ ನಟನೆಯನ್ನು ಗಂಭೀರವಾಗಿ ತೆಗೆದುಕೊಂಡರು.
ವೃತ್ತಿಜೀವನ
[ಬದಲಾಯಿಸಿ]ಚಿತ್ರರಂಗದ ಪ್ರವೇಶ (2009-12)
[ಬದಲಾಯಿಸಿ]ಸ್ಪಾರ್ ಬಿಲ್ಬೋರ್ಡ್ನಲ್ಲಿ ಕಾಣಿಸಿಕೊಂಡ ಕೃತಿ ತೆಲುಗಿನ ಬೋನಿ ಚಿತ್ರದಲ್ಲಿ ಸುಮಂತ್ ರ ಜೊತೆ ನಾಯಕಿಯಾಗಿ ಅಭಿನಯಿಸಿದರು. ಬೋನಿ ಸಿನಿಮಾ ಹೆಚ್ಚು ಸದ್ದುಮಾಡದಿದ್ದರೂ ಕೃತಿಯವರ ಅಭಿನಯ ಮೆಚ್ಚುಗೆ ಪಡೆಯಿತು. ಚೊಚ್ಚಲ ಸಿನಿಮಾವಾದರೂ ಧೈರ್ಯ ಮತ್ತು ವಿಶ್ವಾಸದಿಂದ ಅಭಿನಯಿಸಿದ್ದಾರೆಂದು ವಿಮರ್ಶಕರು ಕೊಂಡಾಡಿದರು. ಮೊದಲ ಚಿತ್ರ ಉತ್ತಮ ಪ್ರದರ್ಶನ ಕಾಣದಿದ್ದರೂ, ಪವನ್ ಕಲ್ಯಾಣರ ತೀನ್ ಮಾರ್ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ನಂತರ, ಕನ್ನಡದ ಚಿರು ಸಿನಿಮಾದಲ್ಲೂ ನಟಿಸುವ ಅವಕಾಶ ಪಡೆದುಕೊಂಡರು.
ಯಶಸ್ಸು ಮತ್ತು ಪ್ರಶಂಸೆ(2013-15)
[ಬದಲಾಯಿಸಿ]ಯಶ್ ಜೊತೆ ಗೂಗ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡ ಕೃತಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಗೂಗ್ಲಿ ಸಿನಿಮಾ 15 ಕೋಟಿ ಗಳಿಸಿತು. ಬೆಂಗಳೂರು ಟೈಮ್ಸ್ ನ ಮೋಸ್ಟ್ ಡಿಸೈರಬಲ್ ವುಮೆನ್ ಪ್ರಶಸ್ತಿ 2013 ಇವರಿಗೆ ಸಿಕ್ಕಿತು.
ಗೂಗ್ಲಿ ಸಿನಿಮಾದ ಯಶಸ್ಸಿನ ನಂತರ ಇವರಿಗೆ ಬಹಳ ಬೇಡಿಕೆ ಬಂದಿತು. 2014ರಲ್ಲಿ ಉಪೇಂದ್ರ ಅವರ ಜೊತೆ ಸೂಪರ್ ರಂಗ, ಶಿವರಾಜ್ ಕುಮಾರ್ ಜೊತೆ ಬೆಳ್ಳಿ, ಮತ್ತು ತೆಲುಗಿನ ವೆಂಕಟಾದ್ರಿ ಎಕ್ಸ್ ಪ್ರೆಸ್ ರೀಮೇಕ್ ಚಿತ್ರವಾದ ತಿರುಪತಿ ಎಕ್ಸ್ ಪ್ರೆಸ್ ನಲ್ಲಿ ಅಭಿನಯಿಸಿ ಬಹಳ ಮೆಚ್ಚುಗೆ ಪಡೆದುಕೊಂಡರು. ಸೂಪರ್ ರಂಗ ಸಿನಿಮಾದ ಅಭಿನಯಕ್ಕೆ ಕ್ರಿಟಿಕ್ಸ್ ಉತ್ತಮ ನಟಿ ಪ್ರಶಸ್ತಿ ಸಿಕ್ಕಿತು ಮತ್ತು ದಕ್ಷಿಣ ಭಾರತದ ಫಿಲ್ಮ್ ಫೇರಿನ ಉತ್ತಮ ನಟಿ ಪ್ರಶಸ್ತಿಗೆ ಇವರನ್ನು ಸೂಚಿಸಲಾಗಿತ್ತು. ಇತ್ತೀಚೆಗೆ 2015ರಲ್ಲಿ ತೆರೆಕಂಡ ಮಿಂಚಾಗಿ ನೀನು ಬರಲು ಚಿತ್ರಕ್ಕೂ ಉತ್ತಮ ಪ್ರಶಂಸೆ ಸಿಕ್ಕಿತು.
ಸಂಜು ವೆಡ್ಸ್ ಗೀತಾ-2 ಸಿನಿಮಾದಲ್ಲಿ ಕುರುಡಿಯ ಪಾತ್ರ ಮಾಡಲಿದ್ದಾರೆ. ದಳಪತಿ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಜೊತೆ ನಟಿಸಲಿದ್ದಾರೆ.
ಇತ್ತೀಚೆಗೆ ತೆಲುಗಿನ ಬ್ರೂಸ್ಲಿ-ದ ಫೈಟರ್ ಸಿನಿಮಾದಲ್ಲಿ ರಾಮ್ ಚರಣ್ ತೇಜರ ಜೊತೆ ನಟನೆ ಮಾಡಿದ್ದಾರೆ.
2017ರಲ್ಲಿ ಗೆಸ್ಟ್ ಇನ್ ಲಂಡನ್ ಮತ್ತು ಶಾದಿ ಮೆ ಜರೂರ್ ಆನಾ ಸಿನಿಮಾದಲ್ಲಿ ನಟಿಸಿದ್ದರು, ಆದರೆ ಇವು ಹೆಚ್ಚು ಸದ್ದು ಮಾಡಲಿಲ್ಲ.
ಈಗ ಕೃತಿಯವರು ಹಿಂದಿಯ ರಾಜ್ ರಿಬೂಟ್ ಸಿನಿಮಾದಲ್ಲಿ ಇಮ್ರಾನ್ ಹಷ್ಮಿ ಜೊತೆ ನಟನೆ ಮಾಡುತ್ತಿದ್ದಾರೆ. ಈ ಚಿತ್ರದ ಹೆಚ್ಚಿನ ಭಾಗವನ್ನು ರೊಮ್ಯಾನಿಯಾದಲ್ಲಿ ಚಿತ್ರಿಸಿದ್ದಾರೆ.
[೩]
References
[ಬದಲಾಯಿಸಿ]- ↑ "Kriti Kharbanda's birthday confusion". ಟೈಮ್ಸ್ ಆಫ್ ಇಂಡಿಯ. 30 October 2013. Retrieved 29 May 2014.
Well my parents told me I was born on the 29th of October! I think I'll stick to that.
"Kriti Kharbanda dating her co-star?". ಟೈಮ್ಸ್ ಆಫ್ ಇಂಡಿಯ. 24 January 2017.Mirror has learnt that the 27-year-old actress...
- ↑ M. L. Narasimham (1 October 2010). "Angling for the entertainer tag". The Hindu. Retrieved 29 May 2014.
- ↑ "I'm married to movies, but I'm having an affair: Kriti Kharbanda". The Times of India.