ಕುಮಾರ ಪರ್ವತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕುಮಾರ ಪರ್ವತವು ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ಹತ್ತಿರ ಇದೆ. ಕುಮಾರ ಪರ್ವತವು ಸಮುದ್ರ ಮಟ್ಟದಿಂದ ಸುಮಾರು ೧೭೧೨ಮೀ ಎತ್ತರದಲ್ಲಿದೆ ಹಾಗು ಸುಬ್ರಮಣ್ಯ ದೇವಸ್ಥಾನದಿಂದ ಸುಮಾರು ೧೩ ಕಿ.ಮೀ ದೂರದಲ್ಲಿದೆ. ಕುಮಾರ ಪರ್ವತವು ದಕ್ಷಿಣ ಕನ್ನಡ ಜಿಲ್ಲೆ(ಮಂಗಳೂರು) ಮತ್ತು ಕೊಡಗು ಜಿಲ್ಲೆಗಳ ಗಡಿಯಲ್ಲಿ ಇದೆ.

ಕುಮಾರ ಪರ್ವತವು ಚಾರಣಿಗರ ಪಾಲಿಗೆ ಒಂದು ಸವಾಲು ಎಸೆಯುವ ತಾಣವಾಗಿದೆ. ಕುಮಾರ ಪರ್ವತಕ್ಕೆ ಹೋಗಲು ಕುಕ್ಕೆ ಸುಬ್ರಮಣ್ಯ ಮತ್ತು ಸೊಂಅವಾರಪೇಟೆ ತಾಲೂಕಿನ ಬೀದಳ್ಳಿ ಗ್ರಾಮದ ಕಡೆಯಿಂದ ದಾರಿಗಳಿವೆ.

ಕುಕ್ಕೆ ಸುಬ್ರಮಣ್ಯದ ಕಡೆಯಿಂದ ಹೋದರೆ ಮೊದಲು ಸುಮಾರು ೪-೫ ಕಿ.ಮೀಗಳ ದೂರ ದಟ್ಟವಾದ ಅರಣ್ಯವಿದೆ. ಅದರ ನಂತರ ಮುಂದೆ ಹೋದರೆ ಒಬ್ಬರು ಭಟ್ಟರ ಮನೆಯನ್ನು ಕಾಣಬಹುದು. ಹಾಗೆಯೆ ಮುಂದುವರೆದರೆ ಸ್ವಲ್ಪ ದೂರದಲ್ಲಿ ಅರಣ್ಯ ಇಲಾಖೆಯ ತಪಾಸಣೆ ಕೇಂದ್ರವಿದೆ. ಇಲ್ಲಿ ಹಣವನ್ನು ಪಾವತಿಸಿ ಅನುಮತಿಯನ್ನು ಪಡೆದು ಮುಂದುವರೆದರೆ ಕಲ್ಲಿನ ಮಂಟಪವನ್ನು ತಲುಪಬಹುದು. ಇಲ್ಲಿ ಒಂದು ಸಣ್ಣ ಗುಂಡಿಯಲ್ಲಿ ಸದಾ ನೀರು ಉಕ್ಕುತ್ತದೆ. ಇಲ್ಲಿಂದ ಮುಂದುವರೆದರೆ ಬೆಟ್ಟಕ್ಕೆ ಮೊದಲು ಕಡಿದಾದ ಬಂಡೆಯನ್ನು ಹತ್ತಬೇಕು.

ಕುಮಾರ ಪರ್ವತದ ಮೇಲೆ ಸ್ಥಳೀಯವಾಗಿ ಸಿಗುವ ಕಲ್ಲುಗಳಿಂದ ಒಂದು ಸಣ್ಣ ಗುಡಿಯನ್ನು ನಿರ್ಮಿಸಿದ್ದಾರೆ. ಬೆಟ್ಟದ ಮೇಲೆ ಉಳಿದುಕೊಳ್ಳಬೇಕಾದರೆ ಸರಿಯಾದ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಸಂಜೆಯಿಂದ ಬೆಳಗಿನ ಜಾವದವರೆಗೆ ಬಲವಾದ ಗಾಳಿ ಬೀಸುವ ಅಪಾಯವಿದೆ.

ಸೋಮವಾರಪೇಟೆಯಿಂದ ಬೀದಳ್ಳಿಗೆ ಬಸ್ಸಿನಲ್ಲಿ ಬಂದ ಮೇಲೆ ಇಲ್ಲಿಂದ ಹೊಲ ಗದ್ದೆಗಳನ್ನು ದಾಟಿ ಬಂದರೆ ಒಂದು ಪುರಾತನವಾದ ಶಿವನ ದೇವಾಲಯ ಕಾಣುತ್ತದೆ. ಇಲ್ಲಿಯವರೆಗೆ ರಸ್ತೆಯಿದೆ. ಶಿವನ ದೇವಾಲಯದ ಹತ್ತಿರ ಪುರಾತನವಾದ ಹಾಗು ಬಹಳ ದೊಡ್ಡದಾದ ಸಂಪಿಗೆ ಮರವಿದೆ. ಇಲ್ಲಿಂದ ಕಾಲುದಾರಿಯಲ್ಲಿ, ದಟ್ಟವಾದ ಅರಣ್ಯದಲ್ಲಿ ಸುಮಾರು ೧೦ ಕಿ.ಮೀ ಕ್ರಮಿಸಿದರೆ ಕುಮಾರ ಪರ್ವತ ತಲುಪಬಹುದು.

Panoramic view, trek to Kumara Parvatha (ಕುಮಾರ ಪರ್ವತದ ಒಂದು ವಿಹಂಗಮ ನೋಟ)