ಕುನ್ಲುನ್ ಪರ್ವತಗಳು
ಕುನ್ಲುನ್ ಪರ್ವತಗಳು | |
---|---|
崑崙山 | |
Highest point | |
Peak | Liushi Shan |
Elevation | 7,167 m (23,514 ft) |
Naming | |
Native name | Kūnlún Shān |
Geography | |
Country | China |
State/Province | Tibet, Qinghai, Xinjiang |
Range coordinates | 36°N 84°E / 36°N 84°E |
Borders on | Gobi Desert |
ಕುನ್ಲುನ್ ಪರ್ವತಗಳು ಏಷ್ಯ ಖಂಡದ ಅತ್ಯಂತ ಉದ್ದವಾದ ಪರ್ವತ ವ್ಯವಸ್ಥೆ. ಜರ್ಮನಿಯ ಭೂಗೋಳಶಾಸ್ತ್ರಜ್ಞ ಫರ್ಡಿನಾಂಡ್ ವಾನ್ ರಿಚ್ ಥೋಫೇನ್ ಇದನ್ನು ಏಷ್ಯದ ಬೆನ್ನೆಲುಬು ಎಂದು ಕರೆದಿದ್ದಾನೆ.
ಭೌಗೋಳಿಕ
[ಬದಲಾಯಿಸಿ]ಇದು ಡಾರೀಮ್ ನದೀಪ್ರದೇಶದಲ್ಲಿ ದಕ್ಷಿಣದಲ್ಲಿ, ಟಿಬೆಟ್ ಪ್ರಸ್ಥಭೂಮಿಯ ಉತ್ತರದ ಮೇರೆಯಾಗಿ, ಪೂರ್ವ ಅಕ್ಷಾಂಶ 74 ಡಿಗ್ರಿ ಮತ್ತು 103 ಡಿಗ್ರಿ ಗಳಿಗೂ ಉತ್ತರ ಅಕ್ಷಾಂಶ 34 ಡಿಗ್ರಿ ಮತ್ತು 40 ಡಿಗ್ರಿಗಳಿಗೂ ನಡುವೆ ಹಬ್ಬದೆ. ಟ್ಸಿನ್‍ಲಿಂಗ್ ಷಾ ಪರ್ವತ ಇದರ ಪೂರ್ವದ ವಿಸ್ತರಣ. ಆದರೆ ಅದೊಂದು ಪ್ರತ್ಯೇಕ ಪರ್ವತವೆಂದೇ ಸಾಮಾನ್ಯವಾಗಿ ಪರಿಗಣಿತವಾಗಿದೆ. ಡಾರೀಮ್ ನದಿಯ ದಕ್ಷಿಣಕ್ಕಿರುವ ತಾಕ್ಲಾಮಾಕಾನ್ ಮರುಭೂಮಿಗೂ ಟಿಬೆಟ್ ಪ್ರಸ್ಥಭೂಮಿಗೂ ನಡುವೆ, ಪಾಮಿರ್ ಪರ್ವತಗ್ರಂಥಿಯಿಂದ ಕಾರ ಮೂರಾನ್ ದಾರ್ಯ ನದಿಯವರೆಗಿನ ಭಾಗವನ್ನಷ್ಟೆ ಕುನ್‍ಲುನ್ ಎಂದು ಪರಿಭಾವಿಸುವುದೂ ಉಂಟು. ಆದರೆ ಇದು ವಾಸ್ತವವಾಗಿ ಕುನ್‍ಲುನ್ ಪರ್ವತ ವ್ಯವಸ್ಥೆಯ ಪಶ್ಚಿಮ ಭಾಗ ಮಾತ್ರ. ಇದರ ಪೂರ್ವ ಭಾಗ ಟ್ಸೈ ಡಾಂ ತಗ್ಗು ಪ್ರದೇಶದ ವರೆಗೂ ಹಬ್ಬಿದೆ. ಪೂರ್ವದಿಂದ ಪಶ್ಚಿಮಕ್ಕೆ ಈ ವ್ಯವಸ್ಥೆಯ ಉದ್ದ 1,800 ಮೈ. ಪಶ್ಚಿಮದಲ್ಲಿ ಈ ಪರ್ವತ ಭಾಗಗಳು ಬಹಳವಾಗಿ ಮಡಿಸಿ ಮುದುರಿಕೊಂಡಿವೆ. ಆದರೆ ಪೂರ್ವಭಾಗದಲ್ಲಿ ಹೀಗಿಲ್ಲ. ಈ ಪರ್ವತ ವ್ಯವಸ್ಥೆಯ ಮಧ್ಯಕ ಎತ್ತರ 20,000'. ಇದರಲ್ಲಿ ಕೆಲವು ಉನ್ನತ ಶಿಖರಗಳಿವೆ. ಇವುಗಳಲ್ಲಿ ಊಲೂ ಮುeóïತಾ ಅತ್ಯಂತ ಎತ್ತರವಾದ್ದು (25,338'). ಕುನ್‍ಲುನ್ ಪರ್ವತಗಳ ಪಶ್ಚಿಮದ ತುದಿಯಲ್ಲಿ, ಕಾಷಾಗಾರ್ ಶ್ರೇಣಿಯಲ್ಲಿ ಇರುವ ಎರಡು ಉನ್ನತ ಶಿಖರಗಳು ಕುಂಗರ್ (25,324') ಮತ್ತು ಮೂಸ್‍ಟಾ ಆಟಾ (24,7571').
ಪಶ್ಚಿಮ ಕುನ್‍ಲುನ್ ಪರ್ವತಗಳಲ್ಲಿ ಒಂದೇ ಬಗೆಯ ಎರಡು ಶ್ರೇಣಿಗಳಿವೆ. ಇವುಗಳ ನಡುವೆ ಕಿರಿದಾದ ಹಾಗೂ ಆಳವಾದ ಕಣಿವೆಗಳಿವೆ. ಪೂರ್ವ ಕುನ್‍ಲುನ್ ಪರ್ವತಗಳಲ್ಲೂ ಟಿಬೆಟ್ ಪ್ರಸ್ಥಭೂಮಿಯಲ್ಲೂ ಇದೇ ಬಗೆಯ ಕಣಿವೆಗಳುಂಟು. ಇವುಗಳ ನಡುವೆ ಆಳದಲ್ಲಿ ಸರೋವರಗಳಿರುವುದು ಇಡೀ ಟಿಬೆಟ್ ಪ್ರದೇಶದ ಒಂದು ವೈಶಿಷ್ಟ್ಯ. ಯಾರ್ ಕಂಡದ ಪೂರ್ವಕ್ಕೆ ಕುನ್‍ಲುನ್ ಪರ್ವತಗಳು ಕ್ರಮೇಣ ಹೆಚ್ಚು ಅಗಲವಾಗುತ್ತವೆ. ಇವುಗಳ ಉತ್ತರದ ಕವಲುಗಳಿಗೆ ಅನುಕ್ರಮವಾಗಿ ಟಿeóïನಾಥ್. ಸಾಂಜುಟಾ ಮತ್ತು ಕಾರಂಘು ಎಂಬ ಹೆಸರುಗಳಿವೆ. ದಕ್ಷಿಣದ ಕವಲುಗಳು ರಾಸ್ ಕೆಮ್, ಕಾರ್‍ಲಿಕ್ ತಾ ಮತ್ತು ಸುಗೆಟ್ ತಾ. ಇವು ಪಶ್ಚಿಮದಿಂದ ಪೂರ್ವದ ಕಡೆಗೆ ತಗ್ಗುತ್ತ ಸಾಗುತ್ತವೆ. ಆದರೆ ಅವುಗಳ ಮಹೌನ್ನತ್ಯ 19,000'. ಕೆಲವು ಶಿಖರಗಳು 21,000'ಗಳವರೆಗೂ ಉಂಟು. ಉತ್ತರದ ಪರ್ವತಗಳು ಹೆಚ್ಚು ಕಡಿದಾಗಿವೆ. ಕಣಿವೆ ದಾರಿಗಳಾದ ಕಾರ್ಲಿಕ್, ಸುಗೇಟ್ ಮತ್ತು ಹಿಂದೂ ಟಾಷ್‍ಗಳ ಎತ್ತರ 16,000'ಗಿಂತ ಹೆಚ್ಚು. ಯಾಂಗಿ ಕಣಿವೆದಾರಿ 19,000' ಗಿಂತಲೂ ಎತ್ತರದಲ್ಲಿದೆ.
ಪೂ.ರೇ. 86 ಡಿಗ್ರಿ ಪ್ರದೇಶದಿಂದ ಕುನ್‍ಲುನ್ ಪರ್ವತಗಳು ಅಗಲವಾಗುತ್ತಾ ಹೋಗಿ ಪುನಃ ಎರಡು ಶ್ರೇಣಿಗಳಾಗಿ ಒಡೆಯುತ್ತವೆ. ಉತ್ತರದಲ್ಲಿರುವ ರಷ್ಯನ್, ಆಸ್ಟಿನ್ ಟಾ, ನಾನ್ ಷಾನ್‍ಗಳೂ ದಕ್ಷಿಣದಲ್ಲಿರುವ ಅರ್ಕಾಟಾ, ಕಾಲ್ಟಾಲಾಫಾನ್ ಮತ್ತು ಬೊಕಾಲಿಕ್ ಟಾಗಳೂ ಇವುಗಳ ಕವಲುಗಳು. ಈ ಎರಡು ಪರ್ವತಶ್ರೇಣಿಗಳನ್ನು ಟ್ಸೈಡಾಂ ಕಣಿವೆ ಪ್ರತ್ಯೇಕಿಸುತ್ತದೆ. ಪೂರ್ವದಲ್ಲಿಯ ಮುಖ್ಯ ಶಿಖರಗಳು 23,000' ಗಿಂತ ಎತ್ತರದಲ್ಲಿವೆ. ಉಲೂಮುಜ್ ತಾ ಮತ್ತು ಷಪ್ಕವೋನೋ ಮುಖ ಶಿಖರಗಳು 25,300'ಗಿಂತ ಉನ್ನತವಾದುವು. ಕಾರಾ ಮುರನ್ ರೆಕ್ವಿಯೆಮ್ ಕಣಿವೆಗಳ ಎತ್ತರ ಅನುಕ್ರಮವಾಗಿ 18,300' ಮತ್ತು 17,800'. ಇಲ್ಲಿಯ ಕಣಿವೆಗಳೆಲ್ಲವೂ ಶಿಲಾನಿಚಯಗಳಿಂದ ತುಂಬಿವೆ. ಪರ್ವತಪಾಶ್ರ್ವಗಳು ಮುರಕಲುಗುಪ್ಪೆಗಳಿಂದ ಮುಚ್ಚಿಹೋಗಿರುವುದರಿಂದ ಇಲ್ಲಿ ಸಸ್ಯ ಯಾವುದೂ ಬೆಳೆಯುವುದಿಲ್ಲ.
ಟ್ಸಿೈಡಾಂ ತಗ್ಗುನೆಲದ ಈಶಾನ್ಯಕ್ಕಿರುವ ಮುಖ್ಯ ಶ್ರೇಣಿಗಳು ವಾಯವ್ಯದಿಂದ ಆಗ್ನೇಯಕ್ಕೆ ಹಬ್ಬಿವೆ. ಇವುಗಳಲ್ಲಿ ರಿಚ್‍ಥೋಪೇನ್ ಹಂಬೋಲ್ಟ್, ದಕ್ಷಿಣ ಟ್ಸಿಂಗ್ ಹೃ ಮತ್ತು ಮುಷ್ಕೆಟೋವ್ ಶ್ರೇಣಿಗಳು ಪ್ರಮುಖವಾದವು. ಮಷ್ಕೆಟೋವ್ ಶ್ರೇಣಿ ದಕ್ಷಿಣದಲ್ಲಿ ಲಾಂಚೌ ವರೆಗೂ ಹಬ್ಬಿದೆ. ಈ ಶ್ರೇಣಿಗಳ ಪ್ರದೇಶದಲ್ಲಿಯ ಕಣಿವೆಗಳು ಸಮತಟ್ಟಾಗಿದ್ದು ಅಗಲವಾಗಿವೆ. ಈ ಕಣಿವೆಗಳೆಲ್ಲವೂ 10,000'-12,000' ಎತ್ತರದಲ್ಲಿವೆ. ಈ ಪ್ರದೇಶದಲ್ಲಿ ಬಾರಾ ನೂರ್ ಸಿಹಿ ನೀರಿನ ಸರೋವರ ಮತ್ತು ಕೋಕೊ ನಾರ್ ಉಪ್ಪು ನೀರಿನ ಸರೋವರ ಇವೆ. ಕೋಕೊ ನಾರ್ 10,515' ಎತ್ತರದಲ್ಲಿದೆ. ಇದರ ವಿಸ್ತೀರ್ಣ 1,630 ಚ.ಮೈ. ಇದರಲ್ಲಿ ಮೀನುಗಳು ಹೇರಳವಾಗಿವೆ. ಆದರೆ ಇದು ನವೆಂಬರಿನಿಂದ ಮಾರ್ಚಿಯ ವರೆಗೆ ಹೆಪ್ಪುಗಟ್ಟಿರುತ್ತದೆ.
ನಾನ್ ಷಾನ್ ಪ್ರಸ್ಥಭೂಮಿಯ ಎತ್ತರ 12,000'-14,000'. ಇದರ ಅನೇಕ ಭಾಗಗಳಲ್ಲಿ ಎತ್ತರವಾದ ಪರ್ವತಶ್ರೇಣಿಗಳಿವೆ. ಇವು 8 ರಿಂದ 17 ಮೈ. ಅಗಲವಾಗಿವೆ. ಪಾಮಿರ್ ಬಳಿಯಿರುವ ಪಶ್ಚಿಮ ಕುನ್‍ಲುನ್ ಪರ್ವತಗಳು ಹಾಗೂ ಉತ್ತರದ ತುದಿಯಲ್ಲಿರುವ ಆಸ್ಟಿನ್ ಟಾ ಮತ್ತು ನಾನ್ ಷಾನ್ ಪರ್ವತಗಳ 14,000'-14,700' ಎತ್ತರದಲ್ಲಿ ಹಿಮರೇಖೆ ಸಾಗುತ್ತವೆ. ಆದರೆ ದಕ್ಷಿಣಕ್ಕಿರುವ ಶ್ರೇಣಿಗಳಲ್ಲಿ ಹಿಮರೇಖೆ ಸಾಗಿರುವುದು 20,000 ಎತ್ತರದಲ್ಲಿ.
ಮಾನವ ಚಟುವಟಿಕೆ
[ಬದಲಾಯಿಸಿ]ಕುನ್‍ಲುನ್ ಪರ್ವತ ಪ್ರದೇಶದಲ್ಲಿ ಕಬ್ಬಿಣದ ಅದುರು, ತಾಮ್ರ, ಚಿನ್ನ ಮತ್ತು ಕಲ್ಲದ್ದಲು ನಿಕ್ಷೇಪಗಳು ಅಲ್ಪ ಪ್ರಮಾಣದಲ್ಲಿ ಅಲ್ಲಲ್ಲಿವೆ. ತಾಮ್ರ ಮತ್ತು ಲವಣಗಳು ಉತ್ತರ ಕುನ್‍ಲುನ್‍ನ ತಪ್ಪಲುಗಳಲ್ಲಿ, ಯಾರ್‍ಕಂಡ್ ಮತ್ತು ಖೋಟಾನ್‍ಗಳ ನಡುವಣ ಪ್ರದೇಶದಲ್ಲಿ ಕಂಡು ಬರುತ್ತದೆ. ಯಾರ್‍ಕಂಡ್ ಒಂದು ಮುಖ್ಯ ವಾಣಿಜ್ಯ ಕೇಂದ್ರ. ಅದರ ಜನಸಂಖ್ಯೆ 80,000. ಖೋಟಾನ್ ಜಿಲ್ಲೆಯಲ್ಲಿ ಸತು ದೊರಕುತ್ತದೆ. ಕ್ವಾಟ್ರ್ಸ್ ಕಲ್ಲನ್ನು ಗಣಿಯಿಂದ ತೆಗೆಯುತ್ತಾರೆ. ಕುನ್‍ಲುನ್ ಪ್ರದೇಶದಲ್ಲಿ ಜನಸಂಖ್ಯೆ ಅತ್ಯಂತ ವಿರಳ. ಉಯಿಗರ್ಸ್ ಜನ ಮುಖ್ಯವಾಗಿ ಅಲೆಮಾರಿ ಪಶುಪಾಲಕರು. ಅಲ್ಪಸ್ವಲ್ಪ ಕೃಷಿ ಮಾಡುವುದೂ ಉಂಟು. ಪಶ್ಚಿಮ ಕುನ್‍ಲುನ್ ಮತ್ತು ಪೂರ್ವ ನಾನ್ ಷಾನ್ ಪ್ರದೇಶಗಳಲ್ಲಿ ಸಾಕಷ್ಟು ನೀರಿನ ಆಸರೆಯುಂಟು. ಇಲ್ಲಿ ಹುಲ್ಲುಗಾವಲುಗಳೂ ಮೊನಚು ಎಲೆ ಮರಗಳ ಕಾಡುಗಳೂ ಇವೆ. ಪಶ್ಚಿಮ ಭಾಗದಲ್ಲಿ ಅನೇಕ ಚಿಕ್ಕಪುಟ್ಟ ನದಿಗಳು ಕಡಿದಾದ ಕಣಿವೆಗಳಲ್ಲಿ ಬಹು ವೇಗವಾಗಿ ಹರಿಯುತ್ತವೆ. ಕುನ್‍ಲುನ್‍ನ ಕಣಿವೆಗಳಲ್ಲಿ ಪ್ರಾಣಿಗಳ ಮೂಲಕ ಮಾತ್ರ ಸಂಚಾರ ಸಾಧ್ಯ. ಲಾನ್‍ಚಾನಿಂದ ಕಾಷ್‍ಗರ್ ವರೆಗೆ ಒಂದು ಮೋಟಾರ್ ರಸ್ತೆಯುಂಟು. ಕ್ರಿ. ಪೂ. 100 ರಿಂದಲೂ ಈ ಮಾರ್ಗವನ್ನು ಚೀನೀಯರು ರೇಷ್ಮೆ ವ್ಯಾಪಾರಕ್ಕಾಗಿ ಉಪಯೋಗಿಸುತ್ತಿದ್ದರು.
ಛಾಯಾಂಕಣ
[ಬದಲಾಯಿಸಿ]-
Karakash River in the Western Kunlun Shan, seen from the Tibet-Xinjiang highway
-
Peak in Kunlun range
-
The Kunlun Pass
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- China Tibet Information Centre Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ.
- Chinaculture.org Archived 2007-04-08 ವೇಬ್ಯಾಕ್ ಮೆಷಿನ್ ನಲ್ಲಿ.