ಕುಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
6) ಕುಡ

ಕೃಷಿಯಲ್ಲಿ, ಕುಡವು ನೇಗಿಲಿನ ಒಂದು ಘಟಕ. ಇದು ಮೋಲ್ಡ್‌ಬೋರ್ಡ್‌ನ ಕತ್ತರಿಸುವ ಅಥವಾ ಅಗ್ರದ ಅಂಚು ಮತ್ತು ಉಳುಮೆ ಮಾಡುವಾಗ ಮುಂಗತ್ತಿಬಿಲ್ಲೆಯನ್ನು (ಒಂದು ಅಥವಾ ಹೆಚ್ಚು ನೆಲ ಕೊರೆಯುವ ಶಲಾಕೆಗಳು) ನಿಕಟವಾಗಿ ಅನುಸರಿಸುತ್ತದೆ. ಸ್ವತಃ ಕುಡವು ಹಲವುವೇಳೆ ಮೂಲಭೂತ ಮೋಲ್ಡ್‌ಬೋರ್ಡ್ ಒಳಗೆ ತೂರಿಸಿ (ಕಮ್ಮಾರನು) ಸಿದ್ಧಪಡಿಸಲಾದ ಗಟ್ಟಿಯಾಗಿಸಿದ ಅಲಗು ಆಗಿರುತ್ತದೆ. ಹಾಗಾಗಿ ಕುಡ ಮತ್ತು ಮೋಲ್ಡ್‌ಬೋರ್ಡ್‌ನ ಸಂಯುಕ್ತ ಸಂಯೋಜನೆಯು ತಯಾರಾಗುತ್ತದೆ. ಈ ಇಡೀ ಸಂಯೋಜನೆಯು ನೆಲದಲ್ಲಿನ ಸೀಳಿನಲ್ಲಿ ಪ್ರವೇಶಿಸಲು ಮತ್ತು ಮಣ್ಣನ್ನು ಬುಡಮೇಲಾಗಿಸುವುದಕ್ಕೆ ಜವಾಬ್ದಾರವಾಗಿರುತ್ತದೆ. ಚೆನ್ನಾಗಿ ಉತ್ತಿದ ಭೂಮಿಯಲ್ಲಿ ಕುಡವು ಮುಂದೆ ಮುಂಗತ್ತಿಬಿಲ್ಲೆಯು ಇರದೇ ಕೆಲಸ ಮಾಡಬಹುದು. ಆಧುನಿಕ ನೇಗಿಲುಗಳಲ್ಲಿ ಸವೆದು ಜೀರ್ಣವಾದ ಅಥವಾ ಕೆಟ್ಟುಹೋದ ಮುಂಗತ್ತಿಬಿಲ್ಲೆ ಮತ್ತು ಕುಡ ಎರಡನ್ನೂ ಪ್ರತ್ಯೇಕಿಸಬಹುದು. ಇದರಿಂದ ಇವನ್ನು ಸುಲಭವಾಗಿ ಬದಲಿಸಬಹುದು. ತ್ರಿಕೋನಾಕಾರದ ಕಲ್ಲಿನ ಕುಡಗಳು ಕ್ರಿ.ಪೂ. ೩೫೦೦ರ ಕಾಲಮಾನದ ಚೀನಾದ ಮಾಜಿಯಾಬಾಂಗ್ ಸಂಸ್ಕೃತಿಯ ತಾಣಗಳಲ್ಲಿ ಟಾಯಿ ಕೆರೆಯ ಸುತ್ತ ಕಂಡುಬಂದವು.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಕುಡ&oldid=1136970" ಇಂದ ಪಡೆಯಲ್ಪಟ್ಟಿದೆ