ವಿಷಯಕ್ಕೆ ಹೋಗು

ಕಿರು ಉಡುಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿರು ಉಡುಪು

ಕಿರು ಉಡುಪು (ಶಾರ್ಟ್ ಡ್ರೆಸ್/ಶಾರ್ಟ್ಸ್)

ಪೀಠಿಕೆ

[ಬದಲಾಯಿಸಿ]

ಶಾರ್ಟ್ಸ್ ಎಂದರೆ ಮಂಡಿವರೆಗೆ ಧರಿಸುವ ಉಡುಗೆಯಾಗಿದ್ದು, ಸಂಪೂರ್ಣ ಉದ್ದವನ್ನು ಒಳಗೊಂಡಿರುವುದಿಲ್ಲ, ಈ ರೀತಿಯ ಉಡುಗೆಗಳಿಗೆ ಶಾರ್ಟ್ ಡ್ರೆಸ್, ಶಾರ್ಟ್ ಪ್ಯಾಂಟ್, ಸಿಂಪಲ್ಲಾಗಿ ಶಾರ್ಟ್ಸ್ ಎನ್ನುತ್ತಾರೆ.ಒಂದು ರೀತಿಯಲ್ಲಿ ಪ್ಯಾಂಟ್‍ನ ಸಂಕ್ಷಿಪ್ತ ರೂಪವಾಗಿದೆ. ಸೆಕೆಗಾಲದಲ್ಲಿ, ಹೆಚ್ಚು ಬೆಚ್ಚಗಿನ ವಾತಾವರಣದಲ್ಲಿ, ಕಿರುಉಡುಪುಗಳನ್ನು ಸಾಮಾನ್ಯವಾಗಿ ಧರಿಸಲಾಗುತ್ತದೆ. ಕಡಲು ತೀರ ಪ್ರದೇಶಗಳಲ್ಲಿ, ಕ್ರೀಡೆಯ ಸಂಧರ್ಭದಲ್ಲಿ, ಮನೋರಂಜನಾ ಚಟುವಟಿಕೆ ಸಂದರ್ಭದಲ್ಲಿ ಹೆಚ್ಚಾಗಿ ಕಿರು ಉಡುಪುಗಳನ್ನು ಬಳಸಲಾಗುತ್ತದೆ.[೧]


೧೯೬೦ ರ ದಶಕದವರೆಗೆ ಫ್ಯಾಷನ್ ಪ್ರೌವೃತ್ತಿಯಾಗಿದ್ದ ಸಣ್ಣ ಸ್ಕರ್ಟ್‍ಗಳು ಧೀರ್ಘಕಾಲದವರೆಗೆ ಅಸ್ತಿತ್ವದಲ್ಲಿದ್ದವು ಹಾಗೂ ಇವುಗಳನ್ನು ಮಿನಿ ಎಂದು ಕರೆಯಲಾಗುತಿತ್ತು. ಮಿನಿ ಸ್ಕರ್ಟ್‍ಗಳನ್ನು ಹೋಲುವ ವಿವಿಧ ಉಡುಪುಗಳನ್ನು ಇತಿಹಾಸಕಾರರು ೧೩೯೦-೧೩೭೦ರಲ್ಲೇ ಚಿತ್ರಿಸಿದ್ದರು. ೧೯೬೬ರ ಹೊತ್ತಿಗೆ ಕೆಲವು ವಿನ್ಯಾಸಗಳು ಮೇಲ್ಭಾಗದ ತೊಡೆಯ ಬಳಿ ಇದ್ದವು. ವಿಶೇಷವಾಗಿ ಕಿರಿಯ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರಿಗಾಗಿ ವಿನ್ಯಾಸ ಮಾಡಲಾದ ಮಿನಿಸ್ಕರ್ಟ್‍ಗಳ ಜನಪ್ರಿಯ ಸ್ವೀಕಾರವು ೧೯೬೬ರ “ಸ್ವಿಂಗಿಂಗ್ ಲಂಡನ್”ನಲ್ಲಿ ಉತ್ತುಂಗಕ್ಕೇರಿತ್ತು. ಇದಕ್ಕೂ ಮೊದಲು ಸಣ್ಣ ಸ್ಕರ್ಟ್‍ಗಳು ಕ್ರೀಡೆ ಮತ್ತು ನೃತ್ಯದ ಉಡುಪುಗಳಲ್ಲಿ ಮಾತ್ರ ಕಂಡು ಬರುತಿದ್ದವು, ಉದಾಹರಣೆಗೆ ಟೆನ್ನಿಸ್ ಆಟಗಾರರು. ೨೦ನೇ ಶತಮಾನದ ಕಾದಂಬರಿಗಳಲ್ಲಿ ಈ ಮಿನಿ ಸ್ಕರ್ಟ್‍ಗಳು ಪ್ರಧಾನವಾಗಿದ್ದವು. ಉಡುಪುಗಳು ಔಪಚಾರಿಕ ಅಥವಾ ಅನೌಪಚಾರಿಕವಾಗಿರಬಹುದು, ತೊಡುವ ರೀತಿ ನೀತಿಗಳು ಸಂದರ್ಭಕ್ಕೆ ಮತ್ತು ಸಂಸ್ಕೃತಿಗೆ ಅನುಸಾರವಾಗಿರುತ್ತದೆ.

೧೯ನೇ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಯೂರೋಪ್ ಮತ್ತು ಅಮೇರಿಕಾಗಳಲ್ಲಿ ಹೆಚ್ಚಿನ ಭಾಗಗಳಲ್ಲಿ, ಯುವಕರಿಂದ ಕೇವಲ ಕೆಲವು ಎತ್ತರ ಅಥವಾ ಪರಿಪಕ್ವತೆ ತಲುಪುವವರೆಗೆ ಕಿರು ಉಡುಪುಗಳನ್ನು ಔಟರ್ವೇರ್ ಎಂದು ಧರಿಸಲಾಗುತಿತ್ತು. ಗಂಡುಮಕ್ಕಳಾಗಿದ್ದಾಗ, ಪ್ರಾಯಶಃ ಪ್ರೌಢಾವಸ್ಥೆಯ ಸುತ್ತಲೂ, ಅವರು ತಮ್ಮ ಮೊದಲ ಜೋಡಿ ಉದ್ದವಾದ ಪ್ಯಾಂಟ್‍ಗಳನ್ನು ಪಡೆಯುತ್ತಾರೆ.[೨]ಕಿರು ಉಡುಪುಗಳು ಕೇವಲ ಯುವಕ ಯುವತಿಯರಿಗೆ ಮಾತ್ರವೇ ಎಂಬ ಗ್ರಹಿಕೆಗೆ ಕಾರಣವಾಯಿತು. ಈ ಕಾರಣದಿಂದಾಗಿ ಪುರುಷರು ಕಿರು ಉಡುಪನ್ನು ಧರಿಸುವುದಿಲ್ಲ. ಸಾಮಾಜಿಕ ಸಾಂಪ್ರದಾಯಿಕ ಕಾರಣಗಳಿಂದಾಗಿ, ಹೆಚ್ಚಿನ ಸಂಸ್ಕೃತಿಗಳಲ್ಲಿ ಮಹಿಳೆಯರು ಶಾರ್ಟ್ಸ್ ಧರಿಸುವ ಪದ್ದತಿ ಇರಲಿಲ್ಲ. ಕಾಲ ಮುಂದುವರಿದಂತೆ ಉಡುಪಿನ ರೀತಿನೀತಿಗಳು ಬದಲಾಯಿತು.


೧೮೯೦ರ ದಶಕದಲ್ಲಿ, ಮೊಣಕಾಲಿನ ಪ್ಯಾಂಟ್‍ಗಳು (ಮುಂಚಿನ ರೀತಿಯ ಸಣ್ಣ ಪ್ಯಾಂಟ್‍ಗಳು) ಅಮೆರಿಕನ್ ಹುಡುಗರಿಗಾಗಿ ಪ್ರಮಾಣಿತ ಉಡುಗೆಗಳಾಗಿ ಮಾರ್ಪಟ್ಟವು. ೧೮೯೦ ರ ದಶಕದ ಅನೇಕ ನಗರ ಶಾಲಾ ಚಿತ್ರಣಗಳು ಮೊಣಕಾಲುವರೆಗಿನ ಪ್ಯಾಂಟ್ ಧರಿಸಿರುವುದನ್ನ ತಿಳಿಸುತ್ತದೆ. ಉತ್ತರ ಅಮೆರಿಕನ್ ಹುಡುಗರು ಸಾಮಾನ್ಯವಾಗಿ ಮೊಣಕಾಲಿನ ಪ್ಯಾಂಟ್‍ಗಳನ್ನು ಸಣ್ಣ ಸ್ಟಾಕಿಂಗ್ಸ್ನೊಂದಿಗೆ ಧರಿಸುತಿದ್ದರು. ೧೯೦೦ರ ದಶಕದ ಉತ್ತರಾರ್ಧದಲ್ಲಿ ಉತ್ತರ ಅಮೆರಿಕಾದ ಉಡುಗರು ನಿಕರ್ಬಾಕರ್ಗಳನ್ನು ಧರಿಸಲು ಆರಂಭಿಸಿದಾಗ ಜನರು ಬದಲಾಗಲಾರಂಭಿಸಿದರು, ಆದರೆ ಯೂರೋಪ್ ನಲ್ಲಿ ಸಣ್ಣ ಪ್ಯಾಂಟ್ ಹೆಚ್ಚು ಜನಪ್ರಿಯವಾಯಿತು. ೧೯೩೦ ರ ದಶಕದಲ್ಲಿ ಪುರುಷರು ಮತ್ತು ಮಹಿಳೆಯರು ಕ್ಯಾಶುಯಲ್ ಸೌಕರ್ಯಗಳಿಗೆ ( ಉದಾ: ಹೊರಾಂಗಣ ಮತ್ತು ಅಥ್ಲೆಟಿಕ್ ಚಟುವಟಿಕೆಗಳು) ಕಿರು ಉಡುಪುಗಳನ್ನು ಧರಿಸಲಾರಂಭಿಸಿದರು.

ಬದಲಾವಣೆಯ ಹಂತಗಳು

[ಬದಲಾಯಿಸಿ]

೨೦ನೇ ಶತಮಾನದ ಆರಂಭದಲ್ಲಿ ಮಹಿಳೆಯರು ತಮ್ಮ ಉಡುಪುಗಳನ್ನು ಒಂದು ‘ತುಂಡು’ ಅಥವಾ ಶರ್ಟಾಯಿಸ್ಟ್ ಎಂದು ಹೇಳಿದರೆ ಅದು ಸ್ಕರ್ಟ್ ಮತ್ತು ಕುಪ್ಪಸವನ್ನು ಹೊಂದಿರುತಿತ್ತು. ೧೯೧೦ರ ಹೊತ್ತಿಗೆ ಫ್ರೆಂಚ್ ಡಿಸೈನರ್ ಪಾಲ್‍ಪೊಯರೆಟ್ ಆ ಸಮಯದದಲ್ಲಿ ಭಾರಿ ಪ್ರಭಾವವನ್ನು ಬೀರಿದ್ದನು. ಈತ ಅಭಿವೃದ್ಧಿ ಪಡಿಸಿದ ವಿನ್ಯಾಸಗಳು ಎರಡು ಈಗಲೂ ಲಭ್ಯವಿದೆ. ೧೯೭೦ರ ದಶಕದಿಂದಲೂ ಫ್ಯಾಶನ್ ನಿಯತಕಾಲಿಕೆಗಳು ಸಣ್ಣ ಮತ್ತು ಮಂಡಿವರೆಗಿನ ಶೈಲಿಗಳು ಬಳಕೆಯಲಿದ್ದು ಹೆಚ್ಚಿನ ಆದ್ಯತೆ ಪಡೆದಿತ್ತು.

ಪ್ರಸ್ತುತತೆ

[ಬದಲಾಯಿಸಿ]

ಮೊದಲನೆ ಜಾಗತಿಕ ಯುದ್ಧದ ಸಂದರ್ಭದಲ್ಲಿ, ಅನೇಕ ಸೈನಿಕರು ಉಷ್ಣವಲಯ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ಈ ಕಿರು ಉಡುಪನ್ನು ಧರಿಸುತಿದ್ದರು.ಆದರೆ ಕಿರಿಯರಿಗೆ ಮಾತ್ರ ಈ ಶಾಟ್ರ್ಸ್ ಮೇಲಿರುವ ಗ್ರಹಿಕೆ ಬದಲಾಗಲು ಹಲವು ದಶಕಗಳೇ ಆದವು. 20 ನೇ ಶತಮಾನದ ಅಂತ್ಯದ ವೇಳೆಗೆ ಕಿರು ಉಡುಪುಗಳು ಕ್ಯಾಶುವಲ್ ಡ್ರೆಸ್ ಆಗಿ ಧರಿಸುವುದು ಸಾಮಾನ್ಯವಾಯಿತು. ಪ್ರಸ್ತುತ ಬೆಳವಣಿಗೆಯನ್ನು ಅವಲೋಕಿಸಿದರೆ ಶಾಟ್ರ್ಸ್ ಧರಿಸುವುದು ಸರ್ವೇಸಾಮಾನ್ಯವಾಗಿದೆ. ಟ್ರೆಂಡ್ ಆಗಿ ಬದಲಾಗಿದೆ ಎಂದರೆ ತಪ್ಪಾಗಲಾರದು. ಯುವಜನತೆ ಹೆಚ್ಚಾಗಿ ಶಾಟ್ರ್ಸ್‍ಗೆ ಪ್ರಾಶಸ್ತ್ಯ ನೀಡುತಿದ್ದಾರೆ.[೩] ಈ ಕಾರಣಗಳಿಂದ ವಿವಿಧ ಮಾದರಿಯ ಕಿರುತೊಡುಗೆಗಳು ಮಾರ್ಕೆಟ್‍ಗೆ ಲಗ್ಗೆ ಇಟ್ಟಿದೆ. ಅದರಲ್ಲೂ ಜೀನ್ಸ್ ಶಾಟ್ರ್ಸಗಳೊಂತು ಬಹಳ ಪ್ರಸಿದ್ದವಾಗಿದೆ.

ವಿಧಗಳು

[ಬದಲಾಯಿಸಿ]
  1. ಶಾರ್ಟ್ ಪ್ಯಾಂಟ್,
  2. ಶಾರ್ಟ್ ಸ್ಕಟ್ರ್ಸ್,
  3. ಶಾರ್ಟ್ ಫ್ರಾಕ್ಸ್,
  4. ಶಾರ್ಟ್ ಸ್ಪೋಟ್ಸ್‍ವೇರ್,
  5. ಡೆನಿಮ್ ಶಾಟ್ರ್ಸ್ ಅಥವಾ ಜಾಟ್ರ್ಸ್ ,
  6. ಕಾರ್ಗೋ ಶಾಟ್ರ್ಸ್ ,
  7. ಸ್ವಿಮ್ಮಿಂಗ್ ಶಾಟ್ರ್ಸ್,
  8. ಮಿಝೂನು ಶಾರ್ಟ್ ಪ್ಯಾಂಟ್ ,
  9. ಆಕ್ಟೀವ್ ಶಾರ್ಟ್ ,
  10. ಸಿಕ್ವಿನ್ಸ್ ಶಾಟ್ರ್ಸ್ ಮುಂತಾದವು.

ಉಲ್ಲೇಖಗಳು

[ಬದಲಾಯಿಸಿ]
  1. https://en.oxforddictionaries.com/definition/short_trousers[ಶಾಶ್ವತವಾಗಿ ಮಡಿದ ಕೊಂಡಿ]
  2. https://books.google.co.in/books?id=qZCuAwAAQBAJ&pg=PA203&redir_esc=y#v=onepage&q&f=false
  3. https://books.google.co.in/books?id=h_HWFpjacQQC&pg=PA16&redir_esc=y#v=onepage&q&f=false