ಕಿನೇಮಾ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Original Kinema-nepal.jpg

ಕಿನೇಮಾ ಕಿಣ್ವಿಸಿದ ಸೋಯಾ ಅವರೆಯ ಒಂದು ಸ್ಥಳೀಯ ಆಹಾರವಾಗಿದೆ. ಇದನ್ನು ಹೆಚ್ಚಾಗಿ ಪೂರ್ವ ಹಿಮಾಲಯ ಪ್ರದೇಶಗಳ (ಪೂರ್ವ ನೇಪಾಳ, ದಾರ್ಜೀಲಿಂಗ್, ಕಾಲಿಂಪಾಂಗ್ ಮತ್ತು ಸಿಕ್ಕಿಂ) (ರಯ್ಯಾಗಳು ಮತ್ತು ಲಿಂಬುಗಳು ಸೇರಿದಂತೆ) ಕಿರಾತಿ ಜನರು ತಯಾರಿಸುತ್ತಾರೆ.[೧]

ಕಿಣ್ವನಕ್ಕೊಳಗಾದ ಈ ಅಂಟಂಟಾದ, ವಾಸನೆಯುಳ್ಳ ಉತ್ಪನ್ನವನ್ನು ಸಾಂಪ್ರದಾಯಿಕವಾಗಿ ಸೂಪ್ ಆಗಿ ತಯಾರಿಸಲಾಗುತ್ತದೆ ಮತ್ತು ಅನ್ನದೊಂದಿಗೆ ತಿನ್ನಲಾಗುತ್ತದೆ. ಆದರೆ ಇದನ್ನು ಉಪ್ಪುಖಾರವುಳ್ಳ ಡಿಪ್ ಆಗಿ ಅಥವಾ ಅನ್ನ ಅಥವಾ ಬ್ರೆಡ್‍ನೊಂದಿಗೆ ತಿನ್ನಬಹುದಾದ ಕಟುವಾದ ಪಕ್ಕಖಾದ್ಯವಾಗಿಯೂ ಮಾರ್ಪಡಿಸಬಹುದು. ಕಿನೇಮಾವನ್ನು ಸಾಂಪ್ರದಾಯಿಕವಾಗಿ ಮನೆಯಲ್ಲಿ ತಯಾರಿಸಲಾಗುತ್ತದೆ, ಆದರೆ ಈಗ ಇದನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮತ್ತು ಆನ್‍ಲೈನ್‍ನಲ್ಲಿ ಒಣ ಉತ್ಪನ್ನವಾಗಿ ಕೂಡ ಮಾರಾಟ ಮಾಡಲಾಗುತ್ತಿದೆ. ಕಿನೇಮಾವನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಕಿಣ್ವನವು ಸಂಕೀರ್ಣ ಪ್ರೋಟೀನ್‍ಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಅಮಿನೊ ಆಮ್ಲ‍ಗಳಾಗಿ ವಿಘಟಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. P.33 Handbook of Indigenous Foods Involving Alkaline Fermentation by Prabir K. Sarkar, M.J. Robert Nout, CRC Press, 23 Jul 2014
"https://kn.wikipedia.org/w/index.php?title=ಕಿನೇಮಾ&oldid=998632" ಇಂದ ಪಡೆಯಲ್ಪಟ್ಟಿದೆ