ವಿಷಯಕ್ಕೆ ಹೋಗು

ಕಿತ್ತನಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ramie
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
B. nivea
Binomial name
Boehmeria nivea

ಕಿತ್ತನಾರು ಚೀನ ಹುಲ್ಲು ಎಂದು ಕರೆಯಲ್ಪಡುವ ನಾರಿನ ಸಸ್ಯ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಅರ್ಟಿಕೇಸೀ ಕುಟುಂಬಕ್ಕೆ ಸೇರಿದ ಬೊಮೀರಿಯ ಎಂಬ ವೈಜ್ಞಾನಿಕ ಹೆಸರಿನ ಒಂದು ಜಾತಿಯ ಸಸ್ಯ.

ಪ್ರಭೇದಗಳು[ಬದಲಾಯಿಸಿ]

ಈ ಜಾತಿಯಲ್ಲಿ ಸುಮಾರು 75 ಪ್ರಭೇದಗಳಿವೆ. ಭಾರತದಲ್ಲಿ 10 ಪ್ರಭೇದಗಳು ಬೆಳೆಯುತ್ತವೆ. ಇವುಗಳಲ್ಲೆಲ್ಲ ಬಹಳ ಸಾಮಾನ್ಯವಾದವೂ ಮುಖ್ಯವಾದವೂ ಇಂತಿವೆ- ಬೊಮೀರಿಯ ನೀವಿಯ, ಬೊ.ಮ್ಯಾಕ್ರೊಫಿಲ ಮತ್ತು ಬೊ.ಮಲಬಾರಿಕ. ನೀವಿಯ ಪ್ರಭೇದ ಅತ್ಯಂತ ಮುಖ್ಯವಾದುದು. ಇದನ್ನು ಚೀನದಲ್ಲೂ ಬೆಳೆಸುತ್ತಾರೆ. ಅಲ್ಲಿ ಇದಕ್ಕೆ ಚೀನಹುಲ್ಲು ಎಂಬ ಹೆಸರಿದೆ.

ಭೌಗೋಳಿಕ ಹರಡುವಿಕೆ[ಬದಲಾಯಿಸಿ]

Worldwide ramie production

ಕಿತ್ತನಾರನ್ನು ಚೀನ, ಜಪಾನ್, ಜಾವ, ಫಾರ್ಮೋಸಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಭಾರತದಲ್ಲಿ ಹಿಮಾಲಯದ ತಪ್ಪಲು ಪ್ರದೇಶ, ಅಸ್ಸಾಂ ಮತ್ತು ಬಂಗಾಲಗಳಲ್ಲಿ ವಿಶೇಷವಾಗಿ ಬೆಳೆಸಲಾಗುತ್ತಿದೆ.

ಲಕ್ಷಣಗಳು[ಬದಲಾಯಿಸಿ]

ಕಿತ್ತನಾರಿನ ಎಲ್ಲ ಪ್ರಭೇದಗಳೂ ಮೂಲಿಕೆ ಅಥವಾ ಪೊದೆ ಸಸ್ಯರೂಪದ ಬಹುವಾರ್ಷಿಕ ಗಿಡಗಳು. ಈ ಸಸ್ಯವನ್ನು ಬೀಜದ ಅಥವಾ ಬೇರು ಮತ್ತು ಕಾಂಡ 10 ತಿಂಗಳುಗಳಲ್ಲಿ ಬಲಿಯುತ್ತದೆ. ಕಾಂಡದ ಬಣ್ಣ ಎಳೆಯದಿದ್ದಾಗ ಹಸಿರಾಗಿದ್ದು ಬಲಿತಂತೆ ಕಂದುಬಣ್ಣಕ್ಕೆ ತಿರುಗುತ್ತದೆ.

ಉಪಯೋಗಗಳು[ಬದಲಾಯಿಸಿ]

ಕಿತ್ತನಾರಿನ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳು ಈ ಕೆಳಗಿನಂತಿವೆ.

ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳು
ಸೆಲ್ಯುಲೋಸ್(wt%) ಲಿಗ್ನಿನ್ (wt%) ಹೆಮಿಸೆಲ್ಯುಲೋಸ್ (wt%) ಪೆಕ್ಟಿನ್ (wt%) ಮೇಣ (wt%) ಮೈಕ್ರೋಫೈಬಿಲಾರ್ ಕೋನ (°) ತೇವಾಂಶ (wt%) ಸಾಂದ್ರತೆ (g/cm3)
68.6 - 76.2 0.6 - 0.7 13.1 - 16.7 1.9 0.3 7.5 8.0 1.50
Source:[೧]
ಸಂಸ್ಕರಿಸದ ನಾರಿನ ಯಾಂತ್ರಿಕ ಗುಣಲಕ್ಷಣಗಳು
Fiber diameter (mm) Fracture load (N) Tensile strength (MPa) Fracture strain (%)
0.034 0.467 560 0.025
Source:[೨]

ಇದರ ಕಾಂಡದ ಒಳತೊಗಟೆಯಿಂದ ಉತ್ತಮ ದರ್ಜೆಯ ನಾರು ದೊರೆಯುತ್ತದೆ. ಇದು ಸಸ್ಯ ನಾರುಗಳಲ್ಲಿಯೇ ಅತ್ಯಂತ ಉದ್ದವು (1-5 ಮೀ.)ಬಾಳಿಕೆ ಬರುವಂಥದೂ ರೇಷ್ಮೆಯಂತೆ ಹೊಳಪು ಮತ್ತು ಮೃದುವಾದದ್ದೂ ಆಗಿರುತ್ತದೆ. ಆದರೆ ಎಳೆಗಳಿಗೆ ಸ್ಥಿತಿಸ್ಥಾಪಕಗುಣವಿಲ್ಲ. ಬೇಕಾದ ಹಾಗೆ ಮಣಿಸಲೂ ಬರುವುದಿಲ್ಲ. ಈ ನಾರು ವಾಯುಗುಣದ ವೈಪರೀತ್ಯ, ರಾಸಾಯನಿಕ ವಸ್ತುಗಳು, ಸಮುದ್ರದ ನೀರು ಮುಂತಾದವುಗಳಿಂದ ಏನೂ ಧಕ್ಕೆಗೊಳ್ಳುವುದಿಲ್ಲ. ಆದ್ದರಿಂದಲೇ ಇದು ನೀರಿನಲ್ಲಿ ನೆನೆಸಿದಾಗ ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ನಾರನ್ನು ಹತ್ತಿ, ಉಣ್ಣೆ ಅಗಸೆನಾರುಗಳಿಗೆ ಬದಲಿ ವಸ್ತುವಾಗಿಯೂ ಸುಕ್ಕದ ಮತ್ತು ಕೊಳೆಯದ ಬಟ್ಟೆಗಳ ತಯಾರಿಕೆಗೂ ಬಳಸುತ್ತಾರೆ. ಜಮಖಾನೆಗಳೂ, ಗ್ಯಾಸ್ ಮ್ಯಾಂಟಲ್‍ಗಳೂ, ಜರಿ ಮತ್ತು ಕರೆನ್ಸಿ ಹಾಳೆಗಳ ತಯಾರಿಕೆಗಳಿಗೆ ಇದರ ಬಳಕೆ ಹೆಚ್ಚು. ಅಸ್ಸಾಂ ಮತ್ತು ಬಂಗಾಳದಲ್ಲಿ ಇದನ್ನು ಒಂದು ವಿಶಿಷ್ಟ ಬಟ್ಟೆಯ (ಗ್ಲಾಸ್ ಕ್ಲಾತ್) ತಯಾರಿಕೆಗೂ ಬಳಸುತ್ತಾರೆ.

ನಾರು ತೆಗೆಯುವ ವಿಧಾನ[ಬದಲಾಯಿಸಿ]

ಗಿಡ ಬಲಿಯುವ ಹಾಗೂ ಹೂಬಿಡುವ ಮುನ್ನವೇ ಕಾಂಡವನ್ನು ಕತ್ತರಿಸಿ ಅದರಿಂದ ನಾರನ್ನು ತೆಗೆಯುತ್ತಾರೆ. ಸಾಮಾನ್ಯವಾಗಿ ಎಲ್ಲ ಪ್ರಭೇದಗಳಿಂದಲೂ ನಾರನ್ನು ತೆಗೆಯಬಹುದು. ಆದರೆ ನಾರು ತೆಗೆಯುವುದು ಬಹಳ ಕಷ್ಟ. ಅಲ್ಲದೇ ಇದಕ್ಕೆ ಹೆಚ್ಚು ವೆಚ್ಚ ತಗಲುವುದರಿಂದ, ನೇರವಾಗಿ ನೇಯ್ಗೆ ಕೈಗಾರಿಕೆಯಲ್ಲಿ ಉಪಯೋಗಿಸುವಷ್ಟು ಹೆಚ್ಚು ಪ್ರಾಮಾಣದಲ್ಲಿ ನಾರನ್ನು ತೆಗೆಯಲಾಗುವುದಿಲ್ಲ. ಉಣ್ಣೆ, ರೇಷ್ಮೆ, ಹತ್ತಿ, ಜೊತೆ ನೇಯ್ಗೆ ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. A. K. Mohanty, M. Misra, G. Hinrichsen. (2000). "Biofibers, biodegradable polymers and biocomposites: An overview". Macromol. Mater. Eng. 276–277 (1): 1–24. doi:10.1002/(SICI)1439-2054(20000301)276:1<1::AID-MAME1>3.0.CO;2-W.{{cite journal}}: CS1 maint: multiple names: authors list (link)
  2. Koichi Goda, MS Sreekala, Alexandre Gomes, Takeshi Kaji, Junji Ohgi (2006). "Improvement of plant based natural fibers for toughening green composites -- Effect of load application during mercerization of ramie fibers". Composites, Part A: Applied Science and Manufacturing. 37: 2213–2220. doi:10.1016/j.compositesa.2005.12.014.{{cite journal}}: CS1 maint: multiple names: authors list (link)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]