ಕಿಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರೆಯುವ ಯಂತ್ರಕ್ಕೆ ಹಿಡಿಯಲಾದ ತಿರುಪಿನಿಂದ ಕಿಡಿಗಳು

ಕಿಡಿಯು ಒಂದು ಪ್ರಕಾಶಮಾನ ಕಣ.[೧] ಕಿಡಿಗಳು ಬಾಣಬಿರುಸಿನ ಪ್ರದರ್ಶನ, ಲೋಹಗೆಲಸ, ಅಥವಾ ವಿಶೇಷವಾಗಿ ಸೌದೆಯನ್ನು ಸುಡುವಾಗ, ಬೆಂಕಿಗಳ ಉಪ ಉತ್ಪನ್ನವಾಗಿ ಉತ್ಪತ್ತಿಯಾಗಬಹುದು.

ಬಾಣಬಿರುಸು ಕಲೆಯಲ್ಲಿ, ಕಿಡಿಗಳನ್ನು ಸೃಷ್ಟಿಸಲು ಕಬ್ಬಿಣದ ಉದುರಿದ ಪುಡಿಗಳು ಮತ್ತು ಮ್ಯಾಗ್ನೇಲಿಯಮ್‍ನಂತಹ ಮಿಶ್ರಲೋಹಗಳನ್ನು ಬಳಸಬಹುದು. ಉತ್ಪತ್ತಿಯಾದ ಕಿಡಿಗಳ ಪ್ರಮಾಣ ಮತ್ತು ಶೈಲಿಯು ಲೋಹದ ಸಂಯೋಜನೆ ಮತ್ತು ಜ್ವಲನಶೀಲತೆಯನ್ನು ಅವಲಂಬಿಸಿದೆ ಮತ್ತು ಕಿಡಿ ಪರೀಕ್ಷೆಯಿಂದ ಲೋಹದ ಪ್ರಕಾರವನ್ನು ಗುರುತಿಸಲು ಪರೀಕ್ಷಿಸಬಹುದು. ಕಬ್ಬಿಣದ ವಿಷಯದಲ್ಲಿ, ಕಾರ್ಬನ್ ಉಕ್ಕಿನಲ್ಲಿರುವಂತೆ ಇಂಗಾಲದ ಇರುವಿಕೆಯು ಅಗತ್ಯವಿರುತ್ತದೆ - ದೊಡ್ಡ ಕಿಡಿಗಳಿಗೆ ಸುಮಾರು ೦.೭% ಅತ್ಯುತ್ತಮವಾಗಿರುತ್ತದೆ. ಬಿಸಿ ಕಬ್ಬಿಣದಲ್ಲಿ ಇಂಗಾಲವು ಸ್ಫೋಟಕವಾಗಿ ಸುಡುತ್ತದೆ ಮತ್ತು ಇದು ಸುಂದರ, ಕವಲೊಡೆಯುವ ಕಿಡಿಗಳನ್ನು ಸೃಷ್ಟಿಸುತ್ತದೆ. ಬಾಣಬಿರುಸು ಪ್ರದರ್ಶನದಲ್ಲಿ ಬಳಸಲಾದ ಕಿಡಿಗಳ ಬಣ್ಣವು ಕಿಡಿಗಳನ್ನು ತಯಾರಿಸಲು ಬಳಸಲಾದ ವಸ್ತುವಿನಿಂದ ನಿರ್ಧಾರಿತವಾಗುತ್ತದೆ, ಮತ್ತು ಕಿಡಿಗಳ ಬಣ್ಣಕ್ಕೆ ಮತ್ತಷ್ಟು ಪ್ರಭಾವ ನೀಡಲು ಕೆಲವು ವಸ್ತುಗಳಿಗೆ ಭಿನ್ನ ರಾಸಾಯನಿಕ ಸಂಯುಕ್ತಗಳನ್ನು ಸೇರಿಸುವ ಸಾಧ್ಯತೆ ಇರುತ್ತದೆ. ಒಂದು ಕಿಡಿಯ ಅಸ್ತಿತ್ವದ ಅವಧಿಯು ಕಣದ ಆರಂಭಿಕ ಗಾತ್ರದಿಂದ ನಿರ್ಧಾರಿತವಾಗುತ್ತದೆ, ದೊಡ್ಡ ಗಾತ್ರವು ದೀರ್ಘಾವಧಿಯ ಕಿಡಿಗೆ ಕಾರಣವಾಗುತ್ತದೆ.

ಕಡಿಮೆ ಉಷ್ಣ ವಾಹಕತೆ ಹೊಂದಿರುವ ಲೋಹಗಳು ಕಿಡಿಗಳನ್ನು ಸೃಷ್ಟಿಸುವಲ್ಲಿ ವಿಶೇಷವಾಗಿ ಉತ್ತಮವಾಗಿರುತ್ತವೆ. ಈ ವಿಷಯದಲ್ಲಿ ಟೈಟೇನಿಯಮ್ ಮತ್ತು ಜಿರ್ಕೊನಿಯಮ್ ವಿಶೇಷವಾಗಿ ಉತ್ತಮವಾಗಿವೆ ಮತ್ತು ಹಾಗಾಗಿ ಈಗ ಇವನ್ನು ಪಟಾಕಿಗಳಲ್ಲಿ ಬಳಸಲಾಗುತ್ತದೆ. ಮತ್ತೊಂದೆಡೆ, ತಾಮ್ರವು ಅಧಿಕ ವಾಹಕತೆಯನ್ನು ಹೊಂದಿರುವುದರಿಂದ ಕಿಡಿಗಳನ್ನು ಸೃಷ್ಟಿಸುವಲ್ಲಿ ಉತ್ತಮವಾಗಿಲ್ಲ. ಈ ಕಾರಣಕ್ಕಾಗಿ, ಅಷ್ಟು ಸುಲಭವಾಗಿ ಕಿಡಿಗಳನ್ನು ಸೃಷ್ಟಿಸದ ಸುರಕ್ಷಾ ಉಪಕರಣಗಳನ್ನು ತಯಾರಿಸಲು ಬೆರಿಲಿಯಮ್ ಕಂಚಿನಂತಹ ತಾಮ್ರದ ಮಿಶ್ರಲೋಹಗಳನ್ನು ಬಳಸಲಾಗುತ್ತದೆ.

ಚಕಮಕಿ ಕಲ್ಲಿನ ತುಂಡು ಮತ್ತು ಉಕ್ಕನ್ನು ಒಟ್ಟಾಗಿ ಹೊಡೆದಾಗ ಸೃಷ್ಟಿಯಾದ ಕಿಡಿಗಳನ್ನು ರಾಬರ್ಟ್ ಹುಕ್ ಅಧ್ಯಯನ ಮಾಡಿದನು. ಕಿಡಿಗಳು ಸಾಮಾನ್ಯವಾಗಿ ಬಿಸಿಯಿಂದ ಕೆಂಪಾದ ಮತ್ತು ಹಾಗಾಗಿ ಗೋಳಕಣಗಳಾಗಿ ಕರಗಿದ ಉಕ್ಕಿನ ಕಣಗಳು ಎಂದು ಅವನು ಕಂಡುಕೊಂಡನು. ಜ್ವಲನ ಪದಾರ್ಥಕ್ಕೆ ಬೆಂಕಿಹೊತ್ತಿಸಲು ಈ ಕಿಡಿಗಳನ್ನು ಬಳಸಬಹುದು ಮತ್ತು ಬೆಂಕಿಯನ್ನು ಆರಂಭಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. National Fire Protection Association (2005), "Glossary", User's manual for NFPA 921, Jones & Bartlett Learning, p. 411, ISBN 978-0-7637-4402-1, archived from the original on 2017-12-16 {{citation}}: Unknown parameter |deadurl= ignored (help)
"https://kn.wikipedia.org/w/index.php?title=ಕಿಡಿ&oldid=888236" ಇಂದ ಪಡೆಯಲ್ಪಟ್ಟಿದೆ