ಕಾಸ್ಟಿಂಗ್ ಕೌಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಪೋರ್ನ್ ವೆಬ್‌ಸೈಟ್ ಬ್ಯಾಕ್‌ರೂಮ್ ಕಾಸ್ಟಿಂಗ್ ಕೌಚ್‌ನ ಫಿಲ್ಮ್ ಸೆಟ್‌ನಲ್ಲಿ ಭೌತಿಕ ಕಾಸ್ಟಿಂಗ್ ಕೌಚ್

ಕಾಸ್ಟಿಂಗ್ ಕೌಚ್ ಎಂಬುದು ಮನರಂಜನಾ ಕ್ಷೇತ್ರದಲ್ಲಿ, ಅದರಲ್ಲೂ ಸಿನೆಮಾ ಮುಂತಾದವುಗಳಲ್ಲಿ ನಟನೆಯ ಅವಕಾಶಗಳನ್ನು ಒದಗಿಸುವಲ್ಲಿ[೧] ಅದಕ್ಕೆ ಬದಲಾಗಿ ಆ ಉದ್ಯೋಗದ ಆಕಾಂಕ್ಷಿಗಳಿಂದ ಲೈಂಗಿಕ ಸುಖವನ್ನು ಕೋರುವ ಅಭ್ಯಾಸವನ್ನು ತಿಳಿಸಲು ಸೂಚಕವಾಗಿ ಬಳಸಲಾಗುವ ಒಂದು ಪದ. ಮುಖ್ಯವಾಗಿ ಪುರುಷ ಕಾಸ್ಟಿಂಗ್ ನಿರ್ದೇಶಕರು ಮತ್ತು ಚಲನಚಿತ್ರ ನಿರ್ಮಾಪಕರು ಕಾಸ್ಟಿಂಗ್ ಕೌಚ್ ಅನ್ನು ಹಾಲಿವುಡ್, ಬಾಲಿವುಡ್, [೨] [೩] ಬ್ರಾಡ್ವೇ ಮುಂತಾದ ಉದ್ಯಮದ ಕ್ಷೇತ್ರಗಳಲ್ಲಿ ಆಕಾಂಕ್ಷಿ ನಟಿಯರಿಂದ ಲೈಂಗಿಕಸುಖ ಪಡೆಯಲು ಬಳಸುತ್ತಾರೆ. ಕಾಸ್ಟಿಂಗ್ ಕೌಚ್ ಎಂಬ ಪದವು ಮೂಲತಃ ಕಾಸ್ಟಿಂಗ್ ಆಫೀಸಿನಲ್ಲಿ ಇಡಲಾಗುವ ಭೌತಿಕ ಮಂಚಗಳನ್ನು ಉಲ್ಲೇಖಿಸುತ್ತಿತ್ತು. ಆದರೆ ಈಗ ಇದು ಒಟ್ಟಾರೆ ಈ ರೀತಿಯ ವಿದ್ಯಮಾನದ ಒಂದು ಸೂಚಕ ಪದವಾಗಿದೆ. ಕಾಸ್ಟಿಂಗ್ ಕೌಚ್ ಲೈಂಗಿಕ ಮುಖಾಮುಖಿಗಳ ಚಿತ್ರಣಗಳು ಪೋರ್ನೋಗ್ರಫಿಯ ಪ್ರಕಾರವಾಗಿಯೂ ಮಾರ್ಪಟ್ಟಿವೆ.


ಪದೋತ್ಪತ್ತಿ[ಬದಲಾಯಿಸಿ]

ದ ಅಟ್ಲಾಂಟಿಕ್‌ ಪತ್ರಿಕೆಯಲ್ಲಿ, ಭಾಷಾಶಾಸ್ತ್ರಜ್ಞ ಬೆನ್ ಜಿಮ್ಮರ್ ಅವರು ಕಾಸ್ಟಿಂಗ್ ಕೌಚ್ ಅನ್ನು "ಮನರಂಜನಾ ಕ್ಷೇತ್ರದ ಕೆಟ್ಟ ಲೈಂಗಿಕ ರಾಜಕೀಯದ ಒಂದು ಸೂಚಕಪದ" ಎಂದು ವಿವರಿಸಿದ್ದಾರೆ. ಇದು ಹಾಲಿವುಡ್ ಸಿನಿಮಾ ಮತ್ತು ಬ್ರಾಡ್‌ವೇ ಥಿಯೇಟರ್‌ನಲ್ಲಿ ಅಧಿಕಾರಯುತ ಸ್ಥಾನಗಳನ್ನು ಹೊಂದಿರುವ ಲೈಂಗಿಕವಾಗಿ ಆಕ್ರಮಣಕಾರಿ ಪುರುಷರ ಪ್ರಾಬಲ್ಯದಿಂದಾಗಿ ಕ್ಲೀಷೆಯಾಗಿ ಸಾಮಾನ್ಯೀಕರಿಸಲ್ಪಟ್ಟಿದೆ.[೪]

ಆರ್ಥಿಕ ಆಯಾಮ[ಬದಲಾಯಿಸಿ]

ಅರ್ಥಶಾಸ್ತ್ರಜ್ಞರಾದ ಥಾಮಸ್ ಬೋರ್ಚರ್ಡಿಂಗ್ ಮತ್ತು ಡ್ಯಾರೆನ್ ಫಿಲ್ಸನ್ ಅವರ ಪ್ರಕಾರ, ಹಾಲಿವುಡ್ ಚಿತ್ರರಂಗದಲ್ಲಿ ಹೆಚ್ಚಿನ ನಷ್ಟಸಂಭವ (ರಿಸ್ಕ್) ಮತ್ತು ಆದಾಯವು ಕಾಸ್ಟಿಂಗ್ ಕೌಚ್ ವಿದ್ಯಮಾನಕ್ಕೆ ಎಡೆಮಾಡಿಕೊಡುತ್ತದೆ. ಹೆಚ್ಚಿನ ಆದಾಯದ ಸಾಧ್ಯತೆಯು ಅಸ್ಥಿರ ನಟರಿಗೆ ಪಾತ್ರಗಳಿಗೆ ಬದಲಾಗಿ ಕನಿಷ್ಠ ವೇತನವನ್ನು ಸ್ವೀಕರಿಸಲು ಪ್ರೋತ್ಸಾಹಿಸುತ್ತದೆ. ಕೆಲವು ಅತ್ಯಂತ ಪ್ರತಿಭಾವಂತ ನಟರನ್ನು ಹೊರತುಪಡಿಸಿ, ನಿರ್ಮಾಪಕರು ಅನಿಶ್ಚಿತತೆಯಿಂದಾಗಿ ಬಹುಪಾಲು ಅರ್ಹ ನಟರ ಯೋಗ್ಯತೆಯನ್ನು ಮೌಲ್ಯಮಾಪನ ಮಾಡಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ, ಕೆಲವು ನಟರು ನಿರ್ಮಾಪಕರಿಗೆ ನಟನೆಯ ಪಾತ್ರಗಳನ್ನು ಪಡೆಯುವಲ್ಲಿ ಪ್ರಯೋಜನವನ್ನು ಪಡೆಯಲು ಲೈಂಗಿಕಕಾಮಸುಖವನ್ನು ನೀಡುತ್ತಾರೆ. ಇದು ಪರಿಣಾಮಕಾರಿಯಾಗಿ ಅವರ ವೇತನವನ್ನು ತಗ್ಗಿಸುವ ಪರ್ಯಾಯ ಪಾವತಿಯಂತೆ ಕಾರ್ಯನಿರ್ವಹಿಸುತ್ತದೆ. ನಟನೆಯ ಅವಕಾಶ ಒದಗಿಸಿಕೊಡುವ ನಿರ್ಧಾರದಲ್ಲಿ ಪ್ರತಿಭೆಗಿಂತ ಈ ಲೈಂಗಿಕಸುಖವು ಪರಿಣಾಮಬೀರುತ್ತದೆ.[೫]

Borcherding ಮತ್ತು Filson ಪ್ರಕಾರ ಈ ಕಾಸ್ಟಿಂಗ್ ಕೌಚ್ ವಿದ್ಯಮಾನಗಳು ಕಡಿಮೆಯಾದವು. ಯುನೈಟೆಡ್ ಸ್ಟೇಟ್ಸ್ v. ಪ್ಯಾರಾಮೌಂಟ್ ಪಿಕ್ಚರ್ಸ್, Inc. (1948) ಪ್ರಕರಣದಲ್ಲಿ ಅಲ್ಲಿಯವರೆಗೆ ಹಾಲಿವುಡ್ ಸ್ಟುಡಿಯೋ ವ್ಯವಸ್ಥೆಯ ಮೂಲಕ ಇದ್ದ. ದೀರ್ಘಾವಧಿಯ ಒಪ್ಪಂದಗಳ ಪದ್ದತಿಯನ್ನು ತೆಗೆದುಹಾಕಲಾಯಿತು. ಈ ಪದ್ಧತಿಯು ನಿರ್ಮಾಪಕರಿಗೆ ನಟನಟಿಯರಿಗೆ ಅವಕಾಶಗಳನ್ನು ಕೊಡುವಾಗ ಅವರು ಹೆಚ್ಚಿನ ಚೌಕಾಸಿ ಮಾಡಲು ಸಾಧ್ಯಮಾಡಿಕೊಡುತ್ತಿತ್ತು. ಈ ಮೂಲಕ ಭ್ರಷ್ಟ ನಿರ್ಮಾಪಕರು ನಟಿಯರಿಂದ ಲೈಂಗಿಕಸುಖವನ್ನು ಪಡೆಯಲು ಬಳಸಿಕೊಳ್ಳುತ್ತಿದ್ದರು. [೫]

ಪೋರ್ನೊಗ್ರಫಿ[ಬದಲಾಯಿಸಿ]

ದಿ ಕ್ಯಾಸ್ಟಿಂಗ್ ಕೌಚ್ ನಲ್ಲಿ ನಟಿ ಮತ್ತು ಕಾಸ್ಟಿಂಗ್ ನಿರ್ದೇಶಕರು ( c. 1924)

ಆರಂಭಿಕ ದಿನಗಳಲ್ಲಿ ಕ್ಯಾಸ್ಟಿಂಗ್ ಕೌಚ್ ( c. 1924) ಎಂಬ ಹೆಸರಿನಿಂದ ಬಂದ ಸಿನೆಮಾವು ಸ್ಟಾಗ್ (ಬ್ಲ್ಯೂ) ಫಿಲ್ಮ್ ಪ್ರಕಾರದಲ್ಲಿ [೬] ಕಾಸ್ಟಿಂಗ್ ಕೌಚ್ ನ ಚಿತ್ರಣ ತೋರಿಸಿತು. ನಂತರ ಅದು ಜನಪ್ರಿಯತೆ ಹೆಚ್ಚಾದಂತೆ ಪ್ರಾಪಂಚಿಕವಾಯಿತು. [೭] ಹತ್ತು ನಿಮಿಷದ ಚಲನಚಿತ್ರದಲ್ಲಿ, ಒಂದು ಕಾಸ್ಟಿಂಗ್ ನಿರ್ದೇಶಕನು ಯುವ ನಟಿಗೆ ಆಡಿಷನ್ ಸಮಯದಲ್ಲಿ ಈಜುಡುಗೆ ಧರಿಸುವಂತೆ ಹೇಳುತ್ತಾನೆ. ಅವಳು ಬೇರೆ ಕೋಣೆಯಲ್ಲಿ ಬಟ್ಟೆ ಬಿಚ್ಚುವ ಸಮಯದಲ್ಲಿ ಅವಳನ್ನು ಕದ್ದುನೋಡುತ್ತಾನೆ ಮತ್ತು ಅವಳಿಂದ ಲೈಂಗಿಕತೆಯನ್ನು ಕೋರಲು ಕೋಣೆಗೆ ಪ್ರವೇಶಿಸುತ್ತಾನೆ. ನಟಿ ಆರಂಭದಲ್ಲಿ ಅಸಹ್ಯದಿಂದ ಆತನನ್ನು ತಿರಸ್ಕರಿಸಿಸುತ್ತಾಳೆ, ಆದರೆ How to Become a Movie Star ಎಂಬ ಪುಸ್ತಕವನ್ನು ನೋಡಿದ ನಂತರ ನಿರ್ದೇಶಕರ ಬಳಿಗೆ ಮರಳುತ್ತಾಳೆ. ಅಲ್ಲಿ ತನ್ನ ನಟನೆಯ ಅವಕಾಶಕ್ಕಾಗಿ ಕಾಮದಾಟವನ್ನು ನಡೆಯುತ್ತಾಳೆ. ಅದು ಕೌಚ್ ಮೇಲೆ ನಡೆಯುತ್ತದೆ. "ಸ್ಟಾರ್ ಆಗಲು ಇರುವ ಏಕೈಕ ಮಾರ್ಗವೆಂದರೆ ಉತ್ತಮ ನಿರ್ದೇಶಕರ ಅಡಿಯಲ್ಲಿ ಮತ್ತು ನಿಮ್ಮ ಹಾದಿಯಲ್ಲಿ ಕೆಲಸ ಮಾಡುವುದು" ಎಂಬ ಸಾಲುಗಳೊಂದಿಗೆ ಮುಕ್ತಾಯಗೊಳ್ಳುತ್ತದೆ. [೬] ಈ ಸಿನೆಮಾವುಕಾಸ್ಟಿಂಗ್ ಕೌಚ್ ಎಂಬ ಪದವನ್ನು ಜನಪ್ರಿಯಗೊಳಿಸಿತೆಂದು ಜಿಮ್ಮರ್ ಅವರು ಮನ್ನಣೆ ನೀಡಿದರು. [೪]

ಪೋರ್ನ್ ವೆಬ್‌ಸೈಟ್‌ಗಳು 2007 ರಲ್ಲಿ ಬ್ಯಾಕ್‌ರೂಮ್ ಕ್ಯಾಸ್ಟಿಂಗ್ ಕೌಚ್‌ನಿಂದ ಆರಂಭಗೊಂಡು ಕಾಸ್ಟಿಂಗ್ ಕೌಚ್ ಸನ್ನಿವೇಶವನ್ನು ಬಳಸಿದವು [೮] 2009 ರಿಂದ 2020 ರವರೆಗೆ, ಪೋರ್ನ್ ಕಂಪನಿ ಗರ್ಲ್ಸ್‌ಡೊಪೋರ್ನ್ ಕಾಸ್ಟಿಂಗ್ ಕೌಚ್ ಅಶ್ಲೀಲತೆಯ ನೂರಾರು ವೀಡಿಯೊಗಳನ್ನು ತಯಾರಿಸಿತು.

ಮಹಿಳಾ ಲೈಂಗಿಕ ಶೋಷಣೆ[ಬದಲಾಯಿಸಿ]

ಈ ಪದ್ಧತಿಯು ಯುನೈಟೆಡ್ ಸ್ಟೇಟ್ಸ್ ದೇಶದಲ್ಲಿ ಕಾನೂನುಬಾಹಿರವಾಗಿದ್ದು ಹಲವು ಇತರ ದೇಶಗಳಲ್ಲೂ ಸಹ ಕಾನೂನುಸಮ್ಮತವಲ್ಲದ್ದಾಗಿದೆ. ಕಾಸ್ಟಿಂಗ್ ಕೌಚ್‌ಗೆ ಮೂಲಕ ಬರುವ ನಟಿಯರಿಗೆ ಅವಕಾಶಗಳ ಖಾತರಿ ನೀಡುವುದಿಲ್ಲ. ಪರಸ್ಪರ ಒಪ್ಪಿಗೆಯಿಂದ ನಡೆಯುವ ಲೈಂಗಿಕ ಕ್ರಿಯೆಗಳು ಅಪರಾಧವಾಗಿರುವುದಿಲ್ಲ ಅಥವಾ ಶೋಷಣೆಯಲ್ಲ ಎಂದು ಪರಿಗಣಿಸಲ್ಪಡುತ್ತದೆ. ಆದರೂ ಸಹ ನಟಿಯರಿಗೆ ಅವಕಾಶಗಳನ್ನೊದಗಿಸುವಾಗ ವಿವಿಧ ಆಮಿಷ, ಒತ್ತಾಯ ಅಥವಾ ಭಯವನ್ನು ಸೃಷ್ಟಿಸುವ ಮೂಲಕ ಲೈಂಗಿಕವಾಗಿ ಬಳಸಿಕೊಳ್ಳುವುದರಿಂದ ಇದು ಲೈಂಗಿಕ ಶೋಷಣೆಯಾಗಿರುತ್ತದೆ. ಕಾಸ್ಟಿಂಗ್ ಕೌಚ್‌ ಗೆ ಒಪ್ಪದವರನ್ನು ಅವಕಾಶವಂಚಿತರನ್ನಾಗಿ ಮಾಡುವಂತಹ ಕೆಲಸಗಳೂ ನಡೆಯುತ್ತವೆ.[೫]

ಭಾರತೀಯ ಚಿತ್ರರಂಗದಲ್ಲಿ[ಬದಲಾಯಿಸಿ]

ಭಾರತದ ಹಲವು ಚಿತ್ರರಂಗಗಳಲ್ಲೂ ಸಹ ಕಾಸ್ಟಿಂಗ್ ಕೌಚ್ ಮೂಲಕ ನಟಿಯರ ಶೋಷಣೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ತಮಿಳು, ತೆಲುಗು, ಹಿಂದಿ ಮುಂತಾದ ಚಿತ್ರರಂಗಗಳಲ್ಲಿ ಇದು ನಡೆಯುತ್ತಿದೆ ಎಂದು ಕೆಲವು ನಟಿಯರು ಹೇಳಿದ್ದಾರೆ.[೯][೧೦]ಪ್ರೀತಿ ಜೈನ್ ಎಂಬ ನತಿಯು ಪ್ರಸಿದ್ಧ ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್ ಮೇಲೆ ಲೈಂಗಿಕ ಕಿರುಕಳ ಅಪಾದನೆಯನ್ನು ಮಾಡಿದ್ದರು. ನಟಿ ಕಂಗನಾ ರನಾವತ್ ಕೂಡ ತಮ್ಮ ಅನುಭವ ಹೇಳಿಕೊಂಡಿದ್ದರು.[೧೧] ತೆಲುಗು ಚಿತ್ರನಟಿ ಶ್ತ್ರೀ ರೆಡ್ಡಿ ತಾನು ಅನುಭವಿಸಿದ ಕಾಸ್ಟಿಂಗ್ ಕೌಚ್ ವಿರುದ್ಧ ಹೈದರಾಬಾದಿನಲ್ಲಿ ಪ್ರತಿಭಟನೆ ನಡೆಸಿದ್ದರು.[೧೨]. ಕಾಸ್ಟಿಂಗ್ ಕೌಚ್ ಅನ್ನು ಬೆದರಿಕೆಯ ತಂತ್ರವಾಗಿ ದುರುಪಯೋಗ ಮಾಡಲಾಗುತ್ತಿದೆ ಎಂಬ ಸಂಶಯಗಳೂ ಚರ್ಚೆಗೊಳಗಾಗಿವೆ.[೧೩]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Adams, Thelma (2017). "Casting-Couch Tactics Plagued Hollywood Long Before Harvey Weinstein". Variety. Retrieved 17 November 2019.
 2. "Bollywood: The reality of sexual harassment". BBC. 28 April 2018. Retrieved 7 December 2019.
 3. Mohamed, Khalid (7 September 2018). "Why It Has Been Raining Boys on Bollywood's Casting Couch". The Quint. Retrieved 7 December 2019.
 4. ೪.೦ ೪.೧ Zimmer, Ben (16 October 2017). "'Casting Couch': The Origins of a Pernicious Hollywood Cliché". The Atlantic. Retrieved 17 November 2019.
 5. ೫.೦ ೫.೧ ೫.೨ Borcherding, Thomas E.; Filson, Darren (1 November 2001). "Conflicts of Interest in the Hollywood Film Industry: Coming to America - Tales from the Casting Couch, Gross and Net, in a Risky Business". In Davis, Michael; Stark, Andrew (eds.). Conflict of Interest in the Professions. Oxford University Press. pp. 268–274. ISBN 978-0-19-512863-5. Cite error: Invalid <ref> tag; name "Borcherding" defined multiple times with different content Cite error: Invalid <ref> tag; name "Borcherding" defined multiple times with different content
 6. ೬.೦ ೬.೧ Williams, Linda (1999). "The Stag Film". Hard Core: Power, Pleasure, and the "Frenzy of the Visible", Expanded Edition (in ಇಂಗ್ಲಿಷ್). University of California Press. pp. 68–69. ISBN 9780520219434. Retrieved 17 November 2019.
 7. Hay, Mark (5 April 2018). "Porn from the 1920s Was More Wild and Hardcore Than You Could Imagine". Vice. Retrieved 17 November 2019.
 8. Cole, Samantha (9 October 2018). "Re-Examining 'Casting Couch' Porn in the Age of #MeToo". Vice. Retrieved 6 January 2020.
 9. ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಬಗ್ಗೆ ರಣ ವಿಕ್ರಮನ ಬೆಡಗಿ ಅದಾ ಶರ್ಮಾ ಹೇಳಿದ್ದೇನು?, ಕನ್ನಡಪ್ರಭ, ೦೮ ಮೇ ೨೦೨೦
 10. Prachi Desai Opens Up on Casting Couch Experience, ನ್ಯೂಸ್ 18, ೦೮ ಏಪ್ರಿಲ್ ೨೦೨೧
 11. https://digitalkannada.com/2016/10/14/book-acting-smart-talks-about-casting-couch-in-cinema/
 12. ನಟಿ ಟಾಪ್ ಲೆಸ್ ಪ್ರತಿಭಟನೆ, ಉದಯವಾಣಿ, ೦೮ ಏಪ್ರಿಲ್ ೨೦೧೮
 13. Casting couch in Bollywood: Reality or misuse?, ಹಿಂದುಸ್ಥಾನ್ ಟೈಮ್ಸ್, ೧೮ ಜುಲೈ ೨೦೨೧