ಕಾಸರಕ
| ಕಾಸರಕ ಮರದ ಎಲೆ,ಕಾಯಿ | |
|---|---|
| Scientific classification | |
| ಸಾಮ್ರಾಜ್ಯ: | plantae |
| Division: | |
| ವರ್ಗ: | |
| ಗಣ: | |
| ಕುಟುಂಬ: | |
| ಕುಲ: | |
| ಪ್ರಜಾತಿ: | S. nux-vomica |
| Binomial name | |
| ಸ್ಟ್ರಿಕ್ನೋಸ್ ನಕ್ಸ್-ವೊಮಿಕ | |
ಕಾಸರಕ ದಕ್ಷಿಣ ಏಷಿಯಾದ ಕಾಡುಗಳಲ್ಲಿ ಕಂಡು ಬರುವ ಪರ್ಣಪಾತಿ ಮರ.ಇದರ ಬೀಜ ವಾಣಿಜ್ಯಿಕವಾಗಿ ಬೆಲೆಬಾಳುತ್ತದೆ.ಭಾರತ, ಬರ್ಮ, ಥೈಲ್ಯಾಂಡ್, ಇಂಡೋಚೀನ, ಉತ್ತರ ಆಸ್ಟ್ರೇಲಿಯಗಳಲ್ಲಿ ಈ ಗಿಡ ಬೆಳೆಯುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಲೊಗನಿಯಸಿಯೆ ಕುಟುಂಬಕ್ಕೆ ಸೇರಿದ್ದು,ಸ್ಟ್ರಿಕ್ನೋಸ್ ಸಸ್ಯಕುಲದಲ್ಲಿ ಸ್ಟ್ರಿಕ್ನೋಸ್ ನಕ್ಸ್-ವೊಮಿಕ ಎಂದು ಕರೆಯಲ್ಪಡುತ್ತದೆ.ಕನ್ನಡದಲ್ಲಿ ನಂಜಿನಕೊರಡು,ಕಾತರಿಕೆ,ವಿಷಮುಷ್ಠಿ ಎಂದೂ,ತುಳುವಿನಲ್ಲಿ 'ಕಾಯೆರ್' ಎಂದೂ ಕರೆಯುತ್ತಾರೆ. ಇದನ್ನು ಕಾಸರ. ಕಾಸರ್ಕ, ಇಟ್ಟಿ, ಮುಷ್ಟಿ, ಕಾಂಜಿರ ಎನ್ನುವುದೂ ಉಂಟು.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಮಧ್ಯಮ ಪ್ರಮಾಣದ ಮರ.ನುಣುಪಾದ ಎಲೆಗಳಿಂದ ಕೂಡಿದ್ದು ನೋಡಲು ಸುಂದರವಾಗಿದೆ.ಕೇಸರಿ ಬಣ್ಣದ ಹಣ್ಣು ಇದ್ದು ಒಳಗೆ ಗುಂಡಿಗಳಂತಿರುವ ಬೀಜವಿರುತ್ತದೆ.ಬೀಜಗಳು ವಿಷಕಾರಿ.ಹಣ್ಣಿನಲ್ಲಿಯೂ ಸ್ವಲ್ಪ ಪ್ರಮಾಣದ ವಿಷವಸ್ತು ಇದೆ.ದಾರುವು ಗಡುಸಾಗಿದ್ದು ಕಳಪೆ ಗುಣಮಟ್ಟದ್ದಾಗಿದೆ.
ಉಪಯೋಗಗಳು
[ಬದಲಾಯಿಸಿ]ಇದರ ಬೀಜದಿಂದ 'ಸ್ಟ್ರಿಕ್ನಿನ್'(Strychnine)ಮತ್ತು 'ಬ್ರೂಸಿನ್'(Brucine)ಎಂಬ ಸಸ್ಯಕ್ಷಾರ(alkaloids)ನ್ನು ಬೇರ್ಪಡಿಸುತ್ತಾರೆ.ಇದರ ಕೊರಡನ್ನು ಹಳ್ಳಿಮದ್ದಿನಲ್ಲಿ ನಂಜುನಿವಾರಕವಾಗಿ ಬಳಸುತ್ತಾರೆ.[೧] ಹಿಂದೆ ಮದ್ದುಗಳಲ್ಲಿ ಶಕ್ತಿವರ್ಧಕವಾಗಿ ಬಳಕೆಯಲ್ಲಿತ್ತು. ಇದಕ್ಕಾಗಿ ಪ್ರಾಣಿಗಳ ವೈದ್ಯದಲ್ಲಿ ಮಾತ್ರ ಈಗಲೂ ಕೊಡುವುದುಂಟು. ಬಟ್ಟುಗಳಂತಿರುವ ಇದರ ಬೀಜಗಳಲ್ಲಿ ಮುಖ್ಯವಾಗಿ ಸ್ಟ್ರಿಕ್ನೀನ್, ಬ್ರೂಸೀನ್ ಸಸ್ಯಕ್ಷಾರ (ಆಲ್ಕಲಾಯಿಡ್ಸ್) (ಸುಮಾರು 1-2% ಪ್ರಮಾಣ). ಇವೆರಡರ ಗುಣಗಳೂ ಒಂದೇ ಆದರೂ ಮೊದಲಿನದು ಜೋರಿನದು. ಪ್ರಯೋಗ ಪ್ರಾಣಿಗೆ ಕೊಟ್ಟು ನೋಡಿದರೆ ಇದರ ಪ್ರಭಾವ ಮುಖ್ಯವಾಗಿ ಬೆನ್ನುಹುರಿಯ ಮೇಲೆ ತೋರುತ್ತದೆ. ಯಾವುದೇ ತಿನ್ನುವ ಬೀಜವೆಂದು ಮಕ್ಕಳು ಸೇವಿಸಿ ವಿಷವೇರಿದಾಗ ಎದೆಬಿಗಿದಂತಾಗಿ ಇದ್ದಕ್ಕಿದ್ದಹಾಗೆ ಸೆಟೆತ (ಕ್ರಾನಿಕ್ ಕನ್ವಲ್ಷನ್) ಬಿಟ್ಟು ಬಿಟ್ಟು ಬರುತ್ತಿದ್ದು ರೋಗಿ ಸುಸ್ತಾಗುವನು. ಸೆಟೆಬೇನೆಯಲ್ಲೂ (ಟೆಟನಸ್, ಧನುರ್ವಾಯು) ಹೀಗೇ ಸೆಳವು ಇರುವುದಾದರೂ ಇದರಲ್ಲಿ ಗಾಯ, ಶಸ್ತ್ರಕ್ರಿಯೆ ಆಗಿರದು; ಅಲ್ಲದೆ, ಸೆಳವು ಬಿಟ್ಟು ಬಿಟ್ಟು ಬರುವುದು. ದವಡೆÉಬೀಗು (ಲಾಕ್ ಜಾ) ಕೊನೆಯ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಕಾಜವಾರ ಕಹಿಯಾದ್ದರಿಂದ ಕೆಲವೇಳೆ ಹಸಿವನ್ನು ಹುಟ್ಟಿಸಲು ಮದ್ದಾಗಿ ಕೊಡುವುದು ರೂಢಿ.
ಆಧಾರ ಗ್ರಂಥಗಳು
[ಬದಲಾಯಿಸಿ]- ↑ ವನಸಿರಿ (ಪುಸ್ತಕ): ಅಜ್ಜಂಪುರ ಕೃಷ್ಣಸ್ವಾಮಿ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
