ಕಾವ್ಯಾನಂದ (ಪುಣೇಕರ)

ವಿಕಿಪೀಡಿಯ ಇಂದ
Jump to navigation Jump to search

ಕಾವ್ಯಾನಂದ ಎನ್ನುವ ಕಾವ್ಯನಾಮದಿಂದ ಪ್ರಸಿದ್ಧರಾದವರು ನರಸಿಂಹಾಚಾರ್ಯ ಕಿತ್ತೂರ. ಇವರ ತಾಯಿ ಭಾರತಿಬಾಯಿ; ತಂದೆ ಭೀಮಾಚಾರ್ಯರು. ಕಾವ್ಯಾನಂದರು ೧೮೭೦ರಲ್ಲಿ ರಾಣಿ ಚನ್ನಮ್ಮನ ಕಿತ್ತೂರಿನಲ್ಲಿ ಜನಿಸಿದರು. ಇವರು ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದರು. ಬೆಟಗೇರಿ ಕೃಷ್ಣಶರ್ಮರು ಕಿತ್ತೂರಿನಲ್ಲಿ ಇವರ ಶಿಷ್ಯತ್ವದಲ್ಲಿ ಕೆಲಕಾಲ ಕಳೆದಿದ್ದರು.

ಇವರ ಕೆಲವು ಕೃತಿಗಳು:

  • ಸಭಾರಂಜನ ಶತಕ
  • ಗೃಹವೈದ್ಯಕವು
  • ಬಾಲರಂಜನ
  • ಮಗನಿಗೆ ತಂದೆಯ ಪತ್ರ
  • ಪ್ರಶ್ನೋತ್ತರ ಮಾಲಿಕಾ

ಇವರ ಅನೇಕ ಸಂಶೋಧನಾತ್ಮಕ ಲೇಖನಗಳು ‘ವಾಗ್ಭೂಷಣ’ ಪತ್ರಿಕೆಯಲ್ಲಿ ಪ್ರಕಟವಾಗಿವೆ.(ಉದಾ: ತಾಮ್ರ ಶಾಸನ, ಪ್ರಾಚೀನ ನಾಗರಿಕತೆ, ನಮ: ಪಂಚಮ ರಸಾಯ, ಸಂಗೊಳ್ಳಿ ರಾಯಣ್ಣ ಇತ್ಯಾದಿ.)

ಕಾವ್ಯಾನಂದರು ೧೯೨೯ರಲ್ಲಿ ನಿಧನರಾದರು.