ಕಾಲಾ ಘೋಡ
ಕಾಲಾಘೋಡ,[೧] ಮುಂಬಯಿ ಮಹಾನಗರದ ಐತಿಹಾಸಿಕ ಮಹತ್ವವಿರುವ ಸ್ಥಳಗಳಲ್ಲೊಂದು. ಸುಪ್ರಸಿದ್ಧ"ಕಾಲಾಘೋಡ" ಫೆಸ್ಟಿವಲ್", ಪ್ರತಿವರ್ಷವೂ ಮುಂಬಯಿಯಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತದೆ. ಬ್ರಿಟನ್ನಿನ ರಾಜಕುಮಾರ ೭ನೇ ಎಡ್ವರ್ಡ್ ಚಕ್ರವರ್ತಿ ಕುದುರೆಯಮೇಲೇರಿ ಸವಾರಿ ಮಾಡುತ್ತಿದ್ದ ಒಂದು ಕಪ್ಪು ಕಂಚಿನ ಕುದುರೆಯ ಪ್ರತಿಮೆಯನ್ನು ಸನ್, ೧೮೭೦ ರಲ್ಲೇ ಇಲ್ಲಿನ ತಾಣದಲ್ಲಿ ಸ್ಥಾಪಿಸಿದ್ದ ಕಾರಣಕ್ಕಾಗಿ, ಈ ಪ್ರದೇಶಕ್ಕೆ 'ಕಾಲಾ ಘೋಡಾ' (ಕಪ್ಪು ಕುದುರೆ) ಎಂದೇ ಹೆಸರು ಬಂದಿದೆ. ಸನ್, ೧೮೭೫ ರಲ್ಲಿ 'ಕಿಂಗ್ ಎಡ್ವರ್ಡ್' ರು, ಭಾರತವನ್ನು ಭೆಟ್ಟಿಮಾಡಲು ಬಂದು, ಬೊಂಬಾಯಿನಗರದಲ್ಲಿ ತಂಗಿದ್ದರು.[೨] ಆ ಸಮಯದಲ್ಲಿ ಅವರಿನ್ನೂ ಪ್ರಿನ್ಸ್ ಆಫ್ ವೇಲ್ಸ್ ಪದವಿಯಲ್ಲಿದ್ದರು. ಚಕ್ರವರ್ತಿಯಾಗಿರಲಿಲ್ಲ. ೧೯೬೫ ರಲ್ಲಿ ಡೇವಿಡ್ ಸಸೂನ್ ಲೈಬ್ರೆರಿಯ ಮುಂಬಾಗದಲ್ಲಿ ಸ್ಥಾಪಿಸಲಾಗಿದ್ದ ಈ ಪ್ರತಿಮೆಯನ್ನು ಸ್ಥಳದಿಂದ ಬೇರ್ಪಡಿಸಿ ಹೊರತೆಗೆದು ಬೈಕುಲ್ಲಾ ಉಪನಗರದ ’ಜೀಜಾಮಾತ ಉದ್ಯಾನ’ದಲ್ಲಿರಿಸಲಾಯಿತು. ಈಗಲೂ ಆ ಪ್ರತಿಮೆ ನೋಡಲು ಲಭ್ಯವಿದೆ. ಆದರೆ ಕುದುರೆಯ ಕೆಳಗೆ ನಿರ್ಮಿಸಿದ್ದ ಭಾರಿ ಅಳತೆಯ ಆಡಿಪಾಯವನ್ನು ತೆಗೆದುಹಾಕಲಾಗಿದೆ.[೩]
ಕಾಲಾಘೋಡ ಜಿಲ್ಲೆ[ಬದಲಾಯಿಸಿ]
ಇದು ಮುಂಬಯಿಯ ಚಿಕ್ಕ ಪ್ರದೇಶ.ಹಿಂದಿನ ಚರಿತ್ರೆಯ ಕೆಲವು ಪುಟಗಳಲ್ಲಿ ನಮೂದಿಸಿರುವ ಚಿತ್ರಗಳಿಂದ, ಅದು ಆಗ ಇದ್ದ ಸ್ಥಳದ ಅರಿವಾಗುತ್ತದೆ. ಅಲ್ಲಿದ್ದ ಕಟ್ಟಡದ ದ್ವಾರದ ಬಳಿ, ಈಗಿರುವ 'ಎಲಿವೇಟರ್,' ನ ಸಮೀಪದಲ್ಲಿ, 'ಕಾಮರ್ಸ್ ಹೌಸ್,' ಕಟ್ಟಡವಿದ್ದ ಜಾಗ. 'ರೋಪ್ ವಾಕ್ ಸ್ಟ್ರೀಟ್ ' ಮತ್ತು 'ಮೆಡೊ ರಸ್ತೆ ' ('ನಾಗಿನ್ ದಾಸ್ ಮಾಸ್ತರ್ ರಸ್ತೆ.'), ಬಿಟ್ಟು 'ವಿ.ಬಿ.ಗಾಂಧಿ ರಸ್ತೆ' ಎಲ್ಲವೂ ಈ ಜಿಲ್ಲೆಯಲ್ಲೇ ಇವೆ. ಇದು, ಮುಂಬಯಿನ ಅತ್ಯಂತ ದುಬಾರಿ ಜಾಗ. ಈ ಭಾಗದ ಜನರು ಪ್ರತಿವರ್ಷವೂ ಕಲೆ, ನೃತ್ಯ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಕಾಲಾಘೋಡ ಪ್ರತಿಮೆಯಿದ್ದ ಜಾಗ[ಬದಲಾಯಿಸಿ]
ನಿಖರವಾಗಿ ಆಗಿನಕಾಲದ ಚಿತ್ರಗಳಲ್ಲಿ ದಾಖಲಿಸಿರುವ ಪ್ರಕಾರ,ಡೇವಿಡ್ ಸಸೂನ್ ಲೈಬ್ರೆರಿ ಕಟ್ಟಡದ ಮುಂದೆ, ಈಗಿನ ರಿದಮ್ ಹೌಸ್ ಅಂಗಡಿಯ ಎದುರಿಗೆ ಮಧ್ಯಬಾಗದಲ್ಲಿ ಬೃಹದ್ ಪ್ರತಿಮೆಯನ್ನು ಸ್ಥಾಪಿಸಿದ್ದರು. ಅದು ದಕ್ಷಿಣ ಉತ್ತರಾಭಿಮುಖವಾಗಿ ಕಾಣಿಸಿಕೊಂಡಿತ್ತು.ಫ್ಲೋರಾ ಫೌಂಟೆನ್ ಕಡೆಗೆ ಮುಖವಾಗಿತ್ತು.[೪]
ಸುಪ್ರಸಿದ್ಧ ವ್ಯಾಟ್ಸನ್ ಹೋಟೆಲ್[ಬದಲಾಯಿಸಿ]
'ಭಾರತದ ಪ್ರಪ್ರಥಮ ಮೂಕಿ ಚಲನಚಿತ್ರ,' ವನ್ನು ಪ್ರದರ್ಶಿಸಿದ ಖ್ಯಾತಿ 'ವ್ಯಾಟ್ಸನ್ ಹೋಟೆಲ್,' ನದು. ಅದು, 'ಕಾಲಾಘೋಡ ಜಾತ್ರೆ' ಗೆ ಸಮೀಪದಲ್ಲಿದೆ. ಸನ್ ೧೮೯೬, ರಲ್ಲಿ ಭಾರತದ ಪ್ರಪ್ರಥಮ ಮೂಕಿ ಚಲನಚಿತ್ರ ವನ್ನು ಈ ಹೋಟೆಲ್ ನಲ್ಲಿ ತಯಾರಿಸಿದ್ದರು. ಪೂರ್ವದಲ್ಲಿ ಮುಂಬಯಿನ ಬಂದರು, ದಕ್ಷಿಣಕ್ಕೆ, 'ರೀಗಲ್ ಸಿನೆಮ', ಚಿತ್ರಮಂದಿರ. 'ಫ್ಲೋರ ಫೌಂಟೆನ್,' ಉತ್ತರದಲ್ಲಿ, ಪಶ್ಚಿಮದಲ್ಲಿ 'ಓವಲ್ ಕ್ರೀಡಾಂಗಣ', ವಿದೆ. ಇವುಗಳೆಲ್ಲದರ ಮಧ್ಯೆ, ಕಾಲಾಘೋಡ ಪ್ರದೇಶ, ಸಿಕ್ಕಿಹಾಕಿಕೊಂಡಂತಿದೆ. ಕಾಲಘೊಡ ದ ಉತ್ತರಕ್ಕೆ, ಫೌಂಟೆನ್ ಜಿಲ್ಲೆ, ಇದೆ. ಇದರ ದಕ್ಷಿಣದಿಕ್ಕಿಗೆ, ಎಲ್ಲರು ಕರೆಯುವ 'ಎಸ್.ಪಿ.ಮುಕರ್ಜಿ ಚೌಕ್' ('ಹಿಂದಿನ 'ವೆಲ್ಲಿಂಗ್ಡನ್ ಸರ್ಕಲ್'), ('ಪ್ರಿನ್ಸ್ ಆಫ್ ವೇಲ್ಸ್') ಮ್ಯೂಸಿಯಮ್, ಹಾಗೂ 'ರೀಗಲ್ ಸಿನೆಮ' ಕಾಣಿಸುತ್ತದೆ. ಉತ್ತರ ಪೂರ್ವದಲ್ಲಿ 'ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ ' ಇಲಾಖೆ, ಶೋಭಾಯಮಾನವಾಗಿ, ಗೋಚರಿಸುತ್ತದೆ. ಇದು 'ದಲಾಲ್ ರಸ್ತೆ,' ಯಲ್ಲಿದೆ.
'ಕಾಲಾಘೋಡ,' ಇಲಾಖೆಯ ಹತ್ತಿರವಿರುವ, ಪ್ರಮುಖ ಸ್ಥಳಗಳು[ಬದಲಾಯಿಸಿ]
- ಪುರಾತನ, ಇಂದು ಶಿಥಿಲವಾದ ಅವಸ್ಥೆಯಲ್ಲಿರುವ 'ಎಸ್ ಪ್ಲನೇಡ್ ಮ್ಯಾನ್ ಷನ್'- ಒಂದಾನೊಂದು ಕಾಲದಲ್ಲಿ ವ್ಯಾಟ್ಸನ್ಸ್ ಹೋಟೆಲ್ ಎಂದು ಪ್ರಖ್ಯಾತವಾಗಿತ್ತು. ಬರಿಯ ಬಿಳಿಯರಿಗಾಗಿಯೇ ಮೀಸಲಾಗಿದ್ದ ಈ ಹೋಟೆಲಿಗೆ ,ಒಂದು ಐತಿಹ್ಯದ ಪ್ರಕಾರ,ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ ಒಬ್ಬ ಬಿಳಿಯ ಸ್ನೇಹಿತನ ಜೊತೆ ಹೋದಾಗ, ಸ್ನೇಹಿತನನ್ನು ಆಹ್ವಾನಿಸಿದ ಪೇದೆ, ಟಾಟರವರನ್ನು ಒಳಗೆ ಬಿಡಲಿಲ್ಲ. ಈ ಘಟನೆಯಿಂದ ನೊಂದ ಅವರು , ಭಾರತೀಯರಿಗೆ ಮುಕ್ತ ಪ್ರವೇಶವಿರುವ ಹೋಟೆಲ್ ಕಟ್ಟಬೇಕೆಂದು ನಿರ್ಧರಿಸಿದರು. ಆ ನಿರ್ಧಾರದ ಫಲವೇ ಮುಂಬಯಿಯ ಪ್ರಸಿದ್ಧ ತಾಜಮಹಲ್ ಹೋಟೆಲ್. ಮುಂದೆ 'ತಾಜಮಹಲ್ ಹೋಟೆಲ್' ಪ್ರಖ್ಯಾತವಾದಂತೆ, 'ವ್ಯಾಟ್ಸನ್ ಹೋಟೆಲ್' ಅವನತಿಯ ದಾರಿ ಹಿಡಿಯಿತು. ಇಂದು ಈ ಕಟ್ಟಡದಲ್ಲಿ ಹೋಟೆಲ್ ಇಲ್ಲ. ಕೆಲವು ಅಂಗಡಿಗಳು, ಮತ್ತು ಕೆಲ ಬಾಡಿಗೆದಾರರು ಮಾತ್ರಾ ಇದ್ದಾರೆ.
- ಜಹಾಂಗೀರ್ ಆರ್ಟ್ ಗ್ಯಾಲರಿ-'ಮುಂಬಯಿಯ ಪ್ರಸಿದ್ಧ ಕಲಾ ಪ್ರದರ್ಶನಾಲಯ'ಗಳಲ್ಲಿ ಒಂದು. ಇಲ್ಲಿ ಪ್ರವೇಶ ಉಚಿತ. ಇದರ ಪ್ರಾಂಗಣದಲ್ಲಿಯ 'ಸಮೋವಾರ್,'ಎಂಬ ರೆಸ್ಟೋರಂಟ್ ಪ್ರಸಿದ್ಧವಾದದ್ದು.
- ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್ ಈಗಿನ ಹೆಸರು, ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್,ಮುಂಬಯಿ
- ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ (National Gallery of Modern Art)
- ಎಲ್ಫಿನ್ ಸ್ಟನ್ ಕಾಲೇಜು
- ರಿದಮ್ ಹೌಸ್
- ಮ್ಯಾಕ್ಸ್ ಮ್ಯುಲ್ಲರ್ ಭವನ್- ಇಂಡೊ ಜರ್ಮನ್ ಸಂಸ್ಕೃತಿ ಕೇಂದ್ರ* ಆರ್ಮಿ ಎಂಡ್ ನೇವಿ ಬಿಲ್ಡಿಂಗ್
- ಡೇವಿಡ್ ಸಸೂನ್ ಪುಸ್ತಕ ಭಂಡಾರ
- ರೋಪ್ ವಾಕ್ ಸ್ಟ್ರೀಟ್
- ಯಹೂದ್ಯರ ದೇವಾಲಯ -ನೆಸೆತ್ ಎಲಿಯಾಹೂ ಸಿನಗೋಗ್
- ಸೇಂಟ್ ಆನ್ ಡ್ರ್ಯೂ ಚರ್ಚ್
- ಲಯನ್ ಗೇಟ್
- ಕೆ.ಆರ್. ಕಾಮಾ ಓರಿಯಂಟಲ್ ಇನ್ಸ್ಟಿಟ್ಯೂಟ್ -ಏಶಿಯದ ಅತ್ಯಂತ ಪುರಾತನ ಸಂಶೋಧನಾ ಕೇಂದ್ರ. 'ಪುಸ್ತಕ ಭಂಡಾರ' ಹಾಗೂ ಹಳೆಯ ಸಂಗ್ರಹಗಳಿವೆ. ಪ್ರಮುಖವಾಗಿ ನೋಡಬೇಕಾದದ್ದು, ಇಂಡೊ-ಇರಾನಿಯನ್ ಮತ್ತು ಝೊರಾಷ್ಟ್ರಿಯನ್ ವಿಭಾಗಗಳನ್ನು.
- ಮುಂಬಯಿ ವಿಶ್ವವಿದ್ಯಾಲಯ
- ಸಿವಿಲ್ ಮತ್ತು ಸೆಶನ್ಸ್ ಕೋರ್ಟ್
- ಈಗ ಶಿಥಿಲವಾಗಿರುವ, ಗ್ರೇಟ್ ವೆಸ್ಟರ್ನ್ ಬಿಲ್ಡಿಂಗ್(ಮೊದಲು ಇದರ ಹೆಸರು,'ಅಡ್ಮಿರಾಲ್ಟಿ ಹೌಸ್' ಎಂದಿತ್ತು)
ತಿಂಡಿ -ತಿನಸುಗಳಿಗಾಗಿ, ಹೋಟೆಲ್ ಗಳು[ಬದಲಾಯಿಸಿ]
- 'Copper Chimney' ಕಾಪರ್ ಚಿಮಿನಿ).
- 'Noodle Bar'(ನೂಡಲ್ ಬಾರ್)
- 'Gelato'(ಗೆಲೆಟೊ)
- 'Joss' (ಜೋಸ್)
- 'Silk Route' (ಸಿಲ್ಕ್ ರೂಟ್)
- 'Chetana' (ಚೇತನ)
ಉಲ್ಲೇಖಗಳು[ಬದಲಾಯಿಸಿ]
- ↑ MUMBAI FABLES By Gyan Prakash
- ↑ King Edward VII visited Mumbai in 1875
- ↑ Mumbai Memoirs 3: Artistic Mumbai! Feb,15,2014 B-C-ing-u
- ↑ King Edward’s Statue (Kala Ghoda) (Code: 032)