ಕಾರ್ಲ್ ವಿಲ್ಹೆಮ್ ಶೀಲೆ
ಗೋಚರ
(ಕಾರ್ಲ್ ವಿಲ್‌ಹೆಲ್ಮ್ ಶೇಯ್ಲ ಇಂದ ಪುನರ್ನಿರ್ದೇಶಿತ)
ಕಾರ್ಲ್ ವಿಲ್ಹೆಮ್ ಶೀಲೆ(ಡಿಸೆಂಬರ್ 9, 1742 – ಮೇ 21, 1786)ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ. ಇವರು ಕ್ಲೋರಿನ್ ಮೂಲಧಾತುವನ್ನು ಕಂಡುಹಿಡಿದರು. ಇದಲ್ಲದೆ ಹಲವಾರು ರಸಾಯನಿಕಗಳನ್ನು,ಮಾಲಿಬ್ಡಿನಮ್ ಮೂಲಧಾತುವನ್ನು ಕೂಡ ಕಂಡುಹಿಡಿದವರು.[೧]ಆಮ್ಲಜನಕವನ್ನು ಮೊದಲಿಗೆ ಇವರೇ ಕಂಡುಹಿಡಿದರೂ ಸಕಾಲದಲ್ಲಿ ಪ್ರಕಾಶಿಸದಿದ್ದುದರಿಂದ ಇದರ ಗೌರವ ಜೋಸೆಫ್ ಪ್ರೀಸ್ಟ್ಲೆ ಯವರ ಪಾಲಾಯಿತು. ಇವರು ಜರ್ಮನಿಯಲ್ಲಿ ಜನಿಸಿದರು.ನಂತರ ಸ್ವೀಡನ್ ದೇಶದ ಕೊಪಿಂಗ್ ಎಂಬಲ್ಲಿ ರಾಸಾಯನಿಕಗಳ ಅಂಗಡಿ ತೆರೆದರು ಹಾಗೂ ತನ್ನೆಲ್ಲಾ ಸಂಶೋಧನೆಗಳನ್ನು ಅಲ್ಲಿಯೇ ಕೈಗೊಂಡರು.
ಉಲ್ಲೇಖಗಳು
[ಬದಲಾಯಿಸಿ]