ಕಾಯಿಧೂಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಯಿ ಧೂಪ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
C. strictum
Binomial name
Canarium strictum


ಕಾಯಿಧೂಪ ಪಶ್ಚಿಮ ಘಟ್ಟಗಳ 5000' ಎತ್ತರದಲ್ಲಿನ ದಟ್ಟವಾದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಮರ[೧]. ಇಂಗ್ಲಿಷಿನಲ್ಲಿ ಇದರ ಹೆಸರು ಬ್ಲಾಕ್ ಡಮ್ಮಾರ್ ಟ್ರೀ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಕೆನೇರಿಯಮ್ ಸ್ಟ್ರಿಕ್ಟಮ್ ಎಂಬ ಶಾಸ್ತ್ರೀಯ ಹೆಸರುಳ್ಳ ದೊಡ್ಡಗಾತ್ರದ ಚೆಲುವಾದ ಮರ. ಬರ್ಸೆರೇಸೀ ಕುಟುಂಬಕ್ಕೆ ಸೇರಿದೆ[೨]. ಮಂಡಧೂಪ ಇದರ ಪರ್ಯಾಯ ನಾಮ.

ಲಕ್ಷಣಗಳು[ಬದಲಾಯಿಸಿ]

ಇದರ ಕಾಂಡ ನೇರ. ಬಣ್ಣ ಬಿಳಿ. ಎಲೆಗಳು ಸಂಯುಕ್ತಮಾದರಿಯವು; ಜೋಡಣೆ ಪರ್ಯಾಯ ಮಾದರಿಯದು. ಎಲೆಗಳು ಎಳೆಯವಾಗಿದ್ದಾಗ ಅಚ್ಚಹಳದಿ ಬಣ್ಣದವಾಗಿದ್ದು ಬರಬರುತ್ತ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಹೂಗಳು ಭಿನ್ನಲಿಂಗಿಗಳು ಅಥವಾ ದ್ವಿಲಿಂಗಿಗಳು ; ಎಲೆಗಳ ಕಂಕುಳಲ್ಲೋ ಇಲ್ಲವೆ ರೆಂಬೆಗಳ ತುದಿಯಲ್ಲೋ ಇರುವ ಸಂಕೀರ್ಣಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪತ್ರಗಳು 3, ದಳಗಳು 3, ಕೇಸರುಗಳು 6. ಅಂಡಾಶಯ ಉಚ್ಚಸ್ಥಾನದ್ದು. ಫಲ ಅಷ್ಟಿಫಲ ಮಾದರಿಯದು.

ಉಪಯೋಗಗಳು[ಬದಲಾಯಿಸಿ]

ಕಾಯಿಧೂಪದ ಕಾಂಡದಿಂದ ಒಂದು ಬಗೆಯ ಹೊಳೆಯುವ ಕಪ್ಪುಬಣ್ಣದ ರಾಳ ಒಸರುತ್ತದೆ. ಇದನ್ನು ಮೆರುಗೆಣ್ಣೆ, ಸೀಸೆಗಳ ಮುಚ್ಚಳವನ್ನು ಬಂಧಿಸುವ ಅರಗು ಮುಂತಾದವುಗಳ ತಯಾರಿಕೆಯಲ್ಲೂ ದೋಣಿಗಳ ಹಲಗೆಗಳ ಸಂದನ್ನು ನೀರು ಸೋರದಂತೆ ಮುಚ್ಚಲೂ ಉಪಯೋಗಿಸುತ್ತಾರೆ. ಕಾಂಡದ ಮೇಲೆ ಚಾಕುವಿನಿಂದ ಗಾಯಮಾಡಿ, ಮರದ ಬುಡದ ಸುತ್ತ ಬೆಂಕಿಯಿಡುತ್ತಾರೆ. ಇದರಿಂದ ತೊಗಟೆ ಮತ್ತು ಹೊರಪದರ ಸುಟ್ಟುಹೋಗಿ ಸುಮಾರು 2 ವರ್ಷಗಳ ಅನಂತರ ಗಾಯಮಾಡಿದ ಸ್ಥಳದಿಂದ ರಾಳ ಒಸರಲಾರಂಭಿಸುತ್ತದೆ.[೩][೪][೫] ಪ್ರತಿವರ್ಷವೂ ಸುಮಾರು 6 ತಿಂಗಳು ಕಾಲ ಈ ರಾಳ ಹೊರಬರುತ್ತದೆ. ಒಂದು ಮರದಿಂದ 10 ವರ್ಷಕಾಲ ರಾಳವನ್ನು ಪಡೆಯಬಹುದು. ಗಾಳಿಯ ಸಂಪರ್ಕಕ್ಕೆ ಬಂದ ಒಡನೆ ಇದು ಅರೆಪಾರದರ್ಶಕವಾದ ಹೊಳೆಯುವ ಕಪ್ಪುಬಣ್ಣದ ಗಾಜಿನಂಥ ಗಟ್ಟಿವಸ್ತುವಾಗುತ್ತದೆ. ಕಾಯಿಧೂಪದ ಚೌಬೀನೆ ಸಾಧಾರಣ ಗಟ್ಟಿಯಾದುದೂ ಭಾರವಾದುದೂ ಆಗಿದೆ. ಇದರ ಬಣ್ಣ ಹೊಳೆಯುವ ಬೂದಿ ಮಿಶ್ರಿತ ಬಿಳುಪು, ಕೊಯ್ಯಲು ಸುಲಭ. ಆದರೆ ಹೆಚ್ಚು ಬಾಳಿಕೆ ಬರುವುದಿಲ್ಲ. ಇದನ್ನು ಬೆಂಕಿಪೆಟ್ಟಿಗೆ, ಹಲಗೆಗಳು, ಪ್ಲೈವುಡ್ ಮುಂತಾದವನ್ನು ಮಾಡಲು ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Genus: Burseraceae (Copal family)".
  2. Varghese, Anita; Ticktin, Tamara. "Regional Variation in Non-Timber Forest Product Harvest Strategies, Trade, and Ecological Impacts: the Case of Black Dammar (Canarium strictum Roxb.) Use and Conservation in the Nilgiri Biosphere Reserve, India". Ecology and Society. 13 (2).
  3. "Canarium strictum (Dammar)". RESET,Iboga, Shamanic tools, Arts & Info.
  4. Meena, Desha; Binaibabu, Nagarajan; Doss, Jesubalan (Jul–Sep 2012). "Future Prospects For The Critically Endangered Medicinally Important Species, Canarium Strictum Roxb. A Review" (PDF). International Journal of Conservation Science. IJCS. 3 (3): 231–237.
  5. ND, Namsa; Tag, Hui; Mandal, M.; Kalita, P.; Das, A.K.; et al. (Sep 7, 2009). "An ethnobotanical study of traditional anti-inflammatory plants used by the Lohit community of Arunachal Pradesh, India". Journal of EthnoPharmacology. 125 (2): 234–245. doi:10.1016/j.jep.2009.07.004. PMID 19607898.

ಹೆಚ್ಚಿನ ಓದು[ಬದಲಾಯಿಸಿ]

  • Karthikeyan, V., and Samuel S. Gnanamanickam. "Seedling mortality in two vulnerable tree species in the sacred groves of Western Ghats, South India." Current Science 88.3 (2005): 350.
  • Mohan, V. R., et al. "Ethnomedicinal Plants of the Tirunelveli District, Tamil Nadu, India." Ethnobotanical leaflets 12 (2008): 79-95.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಾಯಿಧೂಪ&oldid=684769" ಇಂದ ಪಡೆಯಲ್ಪಟ್ಟಿದೆ