ಕಾಬೂಲಿ ಬಾಗ್ ಮಸೀದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಬೂಲಿ ಬಾಗ್ ಮಸೀದಿ, ಪಾಣಿಪತ್, ಹರಿಯಾಣ

ಕಾಬೂಲಿ ಬಾಗ್ ಮಸೀದಿಯು ಹರಿಯಾಣ ರಾಜ್ಯದ ಪಾಣಿಪತ್‌ನಲ್ಲಿರುವ ಒಂದು ಮಸೀದಿಯಾಗಿದ್ದು ಇದನ್ನು 1527 ರಲ್ಲಿ ಮೊದಲ ಪಾಣಿಪತ್ ಕದನದಲ್ಲಿ ಸುಲ್ತಾನ್ ಇಬ್ರಾಹಿಂ ಲೋಧಿ ವಿರುದ್ಧ ಜಯಗಳಿಸಿದ್ದಕ್ಕಾಗಿ 1527 ರಲ್ಲಿ ಚಕ್ರವರ್ತಿ ಬಾಬರ್ ನಿರ್ಮಿಸಿದ. ಪಾಣಿಪತ್‌ನಲ್ಲಿರುವ ಈ ಮಸೀದಿಗೆ ಬಾಬರ್‌ನ ಪತ್ನಿ ಕಾಬುಲಿ ಬೇಗಮ್‍ನ ಹೆಸರಿಡಲಾಗಿದೆ.[೧][೨]

ವಾಸ್ತುಕಲೆ[ಬದಲಾಯಿಸಿ]

ಇದರ ವಾಸ್ತುಕಲೆಯು ಸ್ವಲ್ಪ ಮಟ್ಟಿಗೆ ದೊಡ್ಡ ಕಮಾನುಳ್ಳ ಗುಮ್ಮಟಗಳನ್ನು ಹೊಂದಿರುವ ಸಮರ್‌ಕಂದ್‌ನಲ್ಲಿರುವ ರಾಜಯೋಗ್ಯ ಮಸೀದಿಗಳ ಪ್ರತಿರೂಪವಾಗಿದೆ. ಈ ರೀತಿಯ ವಾಸ್ತುಕಲೆಯನ್ನು ರಚಿಸುವಲ್ಲಿ ತರಬೇತಿ ಪಡೆದ ಕುಶಲಕರ್ಮಿಗಳು ಮತ್ತು ಎಂಜಿನಿಯರ್‌ಗಳು ಭಾರತದಲ್ಲಿ ಲಭ್ಯವಿಲ್ಲದ ಕಾರಣ ಬಾಬರ್‌ಗೆ ತೈಮೂರ್‌ನಂತಹ ವಾಸ್ತುಕಲೆಯನ್ನು ಸಂಪೂರ್ಣವಾಗಿ ನಕಲು ಮಾಡಲು ಸಾಧ್ಯವಾಗಲಿಲ್ಲ.[೩]

ವೈಶಿಷ್ಟ್ಯಗಳು[ಬದಲಾಯಿಸಿ]

ಒಂದು ಸಂಯುಕ್ತ ಗೋಡೆಯೊಳಗೆ ಇಟ್ಟಿಗೆ ಮತ್ತು ಗಾರೆ ಪ್ಲ್ಯಾಸ್ಟರ್‌ನಿಂದ ನಿರ್ಮಿಸಲ್ಪಟ್ಟ ಮಸೀದಿಯು ಉತ್ತರದತ್ತ ಮುಖ ಮಾಡಿದೆ. ಮಸೀದಿಯ ಮೂಲೆಗಳಲ್ಲಿ ವಾಯವ್ಯ ಮತ್ತು ನೈಋತ್ಯ ದಿಕ್ಕುಗಳಲ್ಲಿ ಅಷ್ಟಭುಜಾಕೃತಿ ಆಕಾರದ ಗೋಪುರಗಳಿವೆ.[೪]

ಇಟ್ಟಿಗೆಗಳು ಮತ್ತು ಕೆಂಪು ಮರಳುಗಲ್ಲಿನಿಂದ ನಿರ್ಮಿಸಲ್ಪಟ್ಟ ಇದರ ಪ್ರವೇಶ ದ್ವಾರವು ಸುತ್ತುವರಿಯಲ್ಪಟ್ಟ "ನಾಗಂದಿಗೆಯಂತಹ ಉತ್ತರಂಗ" ರಂಧ್ರವನ್ನು ಹೊಂದಿದೆ. ಇದು ದೊಡ್ಡ ಕಮಾನಿನಂತಹ ಆಕಾರದಲ್ಲಿದೆ; ಇದರ ಎಡೆಗಳು ಅಲಂಕಾರಿಕತೆಯನ್ನು ಹೊಂದಿದ್ದು, ಕಮಾನುಳ್ಳ ಕುಹರಗಳು ಇರುವ ಆಯತಾಕಾರದ ಫಲಕಗಳೊಳಗೆ ಕೂಡಿಸಲ್ಪಟ್ಟಿವೆ.[೧] ಪ್ರಾರ್ಥನಾ ಮಂದಿರವು ದೊಡ್ಡದಾಗಿದ್ದು 53.75 by 16.5 metres (176 by 54 ft) ಯಷ್ಟು ಅಳತೆ ಹೊಂದಿದೆ ಮತ್ತು ದೊಡ್ಡ ಗುಮ್ಮಟದಿಂದ ಮುಚ್ಚಲ್ಪಟ್ಟಿದೆ.[೪]

ಹೊರಗಿನ ಚಿತ್ರಶಾಲೆಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Kabuli Bagh Mosque, Panipat". Official web site of Haryana tourism Department. Retrieved 17 November 2015.
  2. "Kabuli Bagh Mosque". C.P.R. Environment Education Centre, Chennai. Retrieved 17 November 2015.
  3. Asher & Talbot 2006.
  4. ೪.೦ ೪.೧ Asher 1992.

ಗ್ರಂಥಸೂಚಿ[ಬದಲಾಯಿಸಿ]