ಕಾಡುಗುಂಬಳ
Mallotus (plant) nudiflorus | |
---|---|
Flowers | |
Fruit | |
Scientific classification | |
Unrecognized taxon (fix): | Mallotus (plant) |
ಪ್ರಜಾತಿ: | M. nudiflorus
|
Binomial name | |
Mallotus nudiflorus | |
Synonyms[೧] | |
List
|
ಕಾಡುಗುಂಬಳ ಮಲ್ಲೋಟಸ್ ನುಡಿಫ್ಲೋರಸ್ (ಸಿನ್. ಟ್ರೆವಿಯಾ ನುಡಿಫ್ಲೋರಾ), ಸುಳ್ಳು ಬಿಳಿ ತೇಗ, ಯುಫೋರ್ಬಿಯೇಸಿ ಕುಟುಂಬದಲ್ಲಿ ಹೂಬಿಡುವ ಸಸ್ಯದ ಜಾತಿಯಾಗಿದೆ.[೨] ಇದು ಭಾರತೀಯ ಉಪಖಂಡ, ದಕ್ಷಿಣ ಚೀನಾ, ಆಗ್ನೇಯ ಏಷ್ಯಾ, ಪಶ್ಚಿಮ ಇಂಡೋನೇಷಿಯಾ ಮತ್ತು ಫಿಲಿಪೈನ್ಸ್‌ಗೆ ಸ್ಥಳೀಯವಾಗಿದೆ[೧].ಇದು ಮಧ್ಯಮ ಗಾತ್ರದ ಮರವಾಗಿದೆ, ಸಾಮಾನ್ಯವಾಗಿ 10-20 ಮೀ (33-66 ಅಡಿ) ಎತ್ತರವಿದೆ.[೨] ತುಳು ಭಾಷೆಯಲ್ಲಿ ಇದನ್ನು ಬಾಳೆಮರ ಎಂದು ಕರೆಯುತ್ತಾರೆ.
ಸಸ್ಯ ವಿವರಣೆ
[ಬದಲಾಯಿಸಿ]ಮಧ್ಮಮ ಪ್ರಮಾಣದ, ಹರಡಿನ ಕೊಂಬೆಗಳ, ಅಸ್ಥಿರ ಪರ್ಣದ ಮರ. ಬಿಸಿಲಿನ ಆಸೆ ಹೆಚ್ಚು. ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ ಕೊಡಗು ಜಿಲ್ಲೆಗಳ ತೇವಮಯ ಪ್ರದೇಶಗಳಲ್ಲಿ, ನದೀದಡಗಳಲ್ಲಿ ಕಾಣಬರುತ್ತದೆ. ಅನುಕೂಲ ವಾತಾವರಣದಲ್ಲಿ ಕಾಂಡ ನೇರವಾಗಿಯೂ ಎತ್ತರವಾಗಿಯೂ ಬೆಳೆಯುತ್ತದೆ. ಬುಡದಲ್ಲಿ ಆನಿಕೆಗಳಿವೆ. ಪರಸ್ಪರಾಭಿಮುಖವಾದ ಎಲೆಗಳಿಗೆ ಉದ್ದನೆಯ ತೊಟ್ಟಿದೆ. ಎಲೆಗಳು ಹೃದಯಾಕಾರದಲ್ಲಿದ್ದು ಶಿವನ್ನಿ ಮರದ ಎಲೆಗಳನ್ನು ಹೋಲುತ್ತವೆ. ಡಿಸೆಂಬರ್ ತಿಂಗಳ ಸುಮಾರಿಗೆ ಎಲೆ ಉದುರಿ, ಜನವರಿ ಮಾರ್ಚಿಯಲ್ಲಿ ಹೊಸ ಚಿಗುರು ಬರುವುದು. ಕಾಯಿ ಜುಲೈನಲ್ಲಿ ಮಾಗುವುದು. ಬೀಜ ಪ್ರಸಾರ ನೀರಿನ ಮೂಲಕ.
ಪ್ರಸರಣ
[ಬದಲಾಯಿಸಿ]ಬೀಜ ಬಿತ್ತಿ ಸಸ್ಯವನ್ನು ಬೆಳೆಸಬಹುದು. ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಬೇರುಸಸ್ಯಗಳು ಹುಟ್ಟುವುದರ ಮೂಲಕವೂ ಸಂತಾನಾಭಿವೃದ್ದಿ ಆಗುತ್ತದೆ, ಚೌಬೀನೆಯ ಬಣ್ಣ ಕೆನೆಮಿಶ್ರ ಬಿಳುಪು. ಕೆಚ್ಚು ಎದ್ದುಕಾಣುವುದಿಲ್ಲ, ಹದಮಾಡಲು ಸುಲಭ. ಸೀಳುವುದಾಗಲೀ ಡೊಂಕಾಗುವುದಾಗಲೀ ಇಲ್ಲ. ಹಸಿಮರ ಬೂಷ್ಟು, ಅಣಬೆ, ಕೀಟಪೀಡೆಗಳಿಗೆ ಬೇಗ ತುತ್ತಾಗುವುದು. ಬಲಿತ ಗಿಡವೂ ಅಷ್ಟು ಶಕ್ತಿಯುತವಲ್ಲ. ಒಟ್ಟಿನಲ್ಲಿದು ಬಾಳಿಕೆ ಮರವಲ್ಲ. ಆದರೆ ರಕ್ಷಣೆ ಸುಲಭ. ಕೊಯ್ತವೂ ಸುಲಭ. ತೆಳುಪದರವನ್ನು ಸುಲಭವಾಗಿ ತೆಗೆಯಬಹುದು.
ಉಪಯೋಗಗಳು
[ಬದಲಾಯಿಸಿ]ಮರ ಹಗುರವಾಗಿರುವುದರಿಂದ ಭಾಂಗಿಪೆಟ್ಟಿಗೆ, ಬೆಂಕಿಕಡ್ಡಿ ತಯಾರಿಕೆಗೆ ಉಪಯುಕ್ತ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ಟೆಂಪ್ಲೇಟು:Cite POWO
- ↑ ೨.೦ ೨.೧ "False White Teak". Flowers of India. 2022. Retrieved 4 May 2022.