ವಿಷಯಕ್ಕೆ ಹೋಗು

ಕಾಕ್ಸೀಡಿಯ ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಕಕೋಶ ಜೀವಿಗಳ ವಂಶದ ಕಾಕ್ಸೀಡಿಯ ವರ್ಗಕ್ಕೆ ಸೇರಿದ ಪರಾವಲಂಬಿ ಜೀವಿಗಳು, ಮೊಲ, ಕೋಳಿ ಮುಂತಾದ ಪ್ರಾಣಿಗಳನ್ನು ಹೊಕ್ಕು, ಆ ಪ್ರಾಣಿಗಳಲ್ಲಿ ಉತ್ಪತ್ತಿ ಮಾಡುವ ರೋಗ ಕಾಕ್ಸಿಡಿಯೋಸಿಸ್. ಈ ಪರಾವಲಂಬಿಗಳು ಆಶ್ರಯದಾತ ಪ್ರಾಣಿಯ ಸಣ್ಣ ಕರುಳಿನ ಉಪಲೇಪಕ ಅಂಗಾಂಶದ (ಎಪಿತೀಲಿಯಲ್ ಟಿಶ್ಯು) ಜೀವಕೋಶಗಳಲ್ಲಿ ಜೀವಿಸುತ್ತವೆ. ಬೆಳೆವಣಿಗೆಯ ಸ್ಥಿತಿಯಲ್ಲಿದ್ದಾಗ ಟ್ರೋಫೋಜûೂಆಯ್ಟ್ ಎಂದೂ ಪುನರುತ್ಪತ್ತಿ ಸ್ಥಿತಿಯಲ್ಲಿದ್ದಾಗ ಸ್ಕಿಜಾóಂಟ್ ಎಂದೂ ಹೆಸರು. ಸ್ಕಿಜಾóಂಟ್ ಸ್ಥಿತಿಯಲ್ಲಿ ನ್ಯೂಕ್ಲಿಯಸ್ ಹಲವು ಭಾಗಗಳಾಗಿ ವಿಭಜನೆ ಹೊಂದಿ ಮೀರೋeóÉೂೀಯ್ಟ್ ಎಂಬ ಮರಿಗಳು ಉತ್ಪತಿಯಾಗುತ್ತದೆ. ಪ್ರತಿಯೊಂದು ಮೀರೋeóÉೂೀಯ್ಟ್ ಪುನಃ ಟ್ರೋಫೊಜûೂಆಯ್ಟ್, ಆಗಿ ಬೆಳೆಯುತ್ತದೆ. ಈ ತರದ ನಿರ್ಲಿಂಗ ವಂಶಾಭಿವೃದ್ಧಿ ಅನೇಕ ಪೀಳಿಗೆಗಳವರೆಗೆ ನಡೆಯಬಹುದು. ರೋಗ ಉಲ್ಬಣಿಸುವುದಕ್ಕೆ ಈ ಬಗೆಯ ವಂಶಾಭಿವೃದ್ಧಿ ಕಾರಣ.[]

ಆಶ್ರಯದಾತ ಜೀವಿಯಲ್ಲಿ ಈ ಪರಾವಲಂಬಿಗಳ ವಿರುದ್ಧವಾಗಿ ಏರ್ಪಡುವ ರಕ್ಷಣೆಯ ಪ್ರತಿಕ್ರಿಯೆಯಿಂದಾಗಿ ಮೀರೋeóÉೂೀಯ್ಟ್‍ಗಳು ಸ್ಕಿeóÁಂಟ್‍ಗಳಾಗಿ ಬೆಳೆಯದೆ ಗಂಡು, ಹೆಣ್ಣು ಜೀವಿಗಳಾಗಿ ಪರಿಣಮಿಸುತ್ತವೆ. ಗಂಡಾಗಿ ರೂಪಗೊಂಡ ಸೂಕ್ಷ್ಮ ಪ್ರಜನನ ಜೀವಿ (ಮೈಕ್ರೊಗ್ಯಾಮಿಟೊಸೈಟ್) ಅನೇಕ ಭಾಗಗಳಾಗಿ ವಿಭಜನೆ ಹೊಂದಿ ಸೂಕ್ಷ್ಮ ಸಂಯೋಗಿ ಕಣಗಳಾಗುತ್ತವೆ (ಮೈಕ್ರೊಗ್ಯಾಮೀಟ್ಸ್). ಹೆಣ್ಣಾಗಿ ರೂಪಗೊಂಡ ಸ್ಥೂಲ ಪ್ರಜನನ ಜೀವಿಯಿಂದ (ಮ್ಯಾಕ್ರೋಗ್ಯಾಮಿಟೊಸೈಟ್) ಕೇವಲ ಒಂದು ಸ್ಥೂಲ ಸಂಯೋಗಿಕರಣ (ಮ್ಯಾಕ್ರೋಗ್ಯಾಮೀಟ್) ಉದ್ಭವಿಸುತ್ತದೆ. ಒಂದೊಂದು ಸ್ಥೂಲ ಮತ್ತು ಸೂಕ್ಷ್ಮ ಸಂಯೋಗಿ ಕಣಗಳ ಸಂಯೋಗದಿಂದ ಒಂದು ಯುಗ್ಮಕಣ (eóÉೈಗೋಟ್) ಉತ್ಪತ್ತಿಯಾಗುತ್ತದೆ. ಇದು ತನ್ನ ದೇಹದ ಸುತ್ತಲೂ ರಕ್ಷಣಾ ಕವಚವನ್ನು ರೂಪಿಸಿಕೊಂಡು ಊಸಿಸ್ಟ್ ಆಗಿ ಪರಿಣಮಿಸುತ್ತದೆ. ಇಂಥ ಅನೇಕ ಊಸಿಸ್ಟ್‍ಗಳು ಆಶ್ರಯದಾತ ಜೀವಿಯ ಮಲದ ಮೂಲಕ ಹೊರಬಿದ್ದು, ಆಮೇಲೆ ಅನೇಕ ಸ್ಪೋರೊeóÉೂೀಯ್ಟ್‍ಗಳನ್ನು ಉತ್ಪಾದಿಸಿ ಕೆಲವು ದಿನಗಳಲ್ಲಿ ಪ್ರಬುದ್ಧ ಸ್ಥಿತಿಗೆ ಬರುತ್ತವೆ. ಇಂಥ ಊಸಿಸ್ಟ್‍ಗಳು ಆಹಾರದಲ್ಲಿ ಅಥವಾ ಕುಡಿಯುವ ನೀರಿನಲ್ಲಿ ಬೆರೆತು ಮತ್ತೊಂದು ಆಶ್ರಯದಾತ ಜೀವಿಯನ್ನು ಸೇರುತ್ತವೆ. ಕರುಳಿನಲ್ಲಿ ಊಸಿಸ್ಟ್ ಒಡೆದು, ಸ್ಪೈರೊeóÉೂೀಯ್ಟ್‍ಗಳು ಹೊರಬಂದು ಉಪಲೇಪಕ ಅಂಗಾಂಶವನ್ನು ಪ್ರವೇಶಿಸಿ ನಿರ್ಲಿಂಗ ರೀತಿ ಜೀವನ ಚರಿತ್ರೆಯನ್ನು ಪ್ರಾರಂಭಿಸುತ್ತವೆ.

ಉಲ್ಲೇಖನೆಗಳು:

[ಬದಲಾಯಿಸಿ]
  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಕಾಕ್ಸೀಡಿಯ_ರೋಗ