ವಿಷಯಕ್ಕೆ ಹೋಗು

ಕಾಕರಣೆ ಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಂಡು ಕಾಕರಣೆ ಹಕ್ಕಿ

ಕಾಕರಣೆ ಹಕ್ಕಿ(Harpactes fasciatus) trogon ಕುಟುಂಬದಲ್ಲಿಯ ಒಂದು ಪಕ್ಷಿ. ಇದು ಶ್ರೀಲಂಕಾ ಮತ್ತು ಭಾರತದ ಪರ್ಯಾಯದ್ವೀಪ ಕಾಡುಗಳಲ್ಲಿ ಕಂಡುಬರುತ್ತದೆ.. ಭಾರತದಲ್ಲಿ ಇದನ್ನು ಪ್ರಧಾನವಾಗಿ ಪಶ್ಚಿಮ ಘಟ್ಟಗಳ ಮಧ್ಯ ಬೆಟ್ಟಗಳ ಅರಣ್ಯಗಳಲ್ಲಿ ಮತ್ತು ಪೂರ್ವ ಘಟ್ಟಗಳ ಭಾಗಗಳಲ್ಲಿ ಗುರುತಿಸಲಾಗಿದೆ., ಮೈನಾ ಹಕ್ಕಿ ಗಾತ್ರದ ರಕ್ತಕೆಂಪು ಬಣ್ಣ ಪಧಾನವಾದ ಹಕ್ಕಿ ಇದಾಗಿದ್ದು. ಗಂಡಿನ ಎದೆ ಮತ್ತು ತಲೆ ನೀಲಿ ಗಪ್ಪು ಬಣ್ಣ. ಇದರ ಕೆಳಗೆ ಬಿಳಿಯ ಪಟ್ಟಿ ಇದೆ. ಬೆನ್ನು ಹೊಂಬಣ್ಣ ನೀಳವಾದ ಬಿಳಿಯ ಪಟ್ಟೆಗಳ್ಂತಿರುವ ಬಾಲ, ಹೆಣ್ಣಿನ ಮೈಬಣ್ಣ ಮಾಸಲು ಕಿತ್ತಲೆ ಕಂದು. ಏಕಾಂಗಿಯಾಗಿ ಇಲ್ಲವೆ ಜೊತೆಯಾಗಿ ನಿತ್ಯಹರಿಧ್ವರ್ಣ, ತೇವಭರಿತ ಉದುರೆಲೆ ಕಾಡುಗಳಲ್ಲಿ ಮತ್ತು ಬೆದಿರಿನ ಮೆಳೆಗಳಲ್ಲಿ ಕಾಣಬಹುದು. ಈ ಹಕ್ಕಿಯ ಕೂಗು 'ಕ್ಯು' ಇಲ್ಲವೆ 'ಮ್ಯು' ಎಂದು ಕೇಳಿಸುತ್ತದೆ. ಸಂತಾನ ಋತು ಫೆಬ್ರವರಿ ಇಂದ ಜೂನ್, ಒಂದು ಬಾರಿಗೆ ಸುಮಾರು ೨ ರಿಂದ ೪ ಬಿಳಿಯ ಮೊಟ್ಟೆಗಳನ್ನು ಹಾಕುತ್ತದೆ. ಈ ಹಕ್ಕಿಗೆ ೧೨ ಗರಿಗಳಿದೆ. ಕಿಟಗಳು ಈ ಹಕ್ಕಿಯ ಅಹಾರ. ಈ ಹಕ್ಕಿಯನ್ನು ಹಿಂದಿ ಭಾಷೆಯಲ್ಲಿ ಕಫ್ನಿ ಛುರಿಯಂದು ಕರೆಯುತ್ತಾರೆ.