ಕವಿತಾ ಷಾ(ವಿಜ್ಞಾನಿ)
ಗೋಚರ
| ಕವಿತಾ ಷಾ | |
|---|---|
| ಜನನ | ೬ ನವೆಂಬರ್ ೧೯೬೮ ವಾರಣಾಸಿ |
| ರಾಷ್ಟ್ರೀಯತೆ | ಭಾರತೀಯ |
| ಕಾರ್ಯಕ್ಷೇತ್ರ | ಬಯೊಟೆಕ್ನಾಲಜಿ |
| ಪ್ರಸಿದ್ಧಿಗೆ ಕಾರಣ | ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ - ಆಧಾರಿತ ಸಂವೇದಕದ ರಚನೆ, ಬಯೋ ಸೆನ್ಸಾರ್, ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದ್ದಕ್ಕೆ. |
| ಗಮನಾರ್ಹ ಪ್ರಶಸ್ತಿಗಳು | ವಿಮೆನ್ ಸೈಂಟಿಸ್ಟ್ ಅವಾರ್ಡ್ -೨೦೧೧ |
| ಸಂಗಾತಿ | ಮುಕುಲ್ ಕುಮಾರ್ ಷಾ |
ಕವಿತಾ ಷಾ (೬ ನವೆಂಬರ್ ೧೯೬೮) ರವರು ಎನ್ವಿರಾನ್ಮೆಂಟಲ್ ಅಂಡ್ ಸಸ್ಟೈನೇಬಲ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ [೧][೨] ಭಾರತೀಯ ಪರಿಸರ ಜೈವಿಕ ತಂತ್ರಜ್ಞರಾಗಿದ್ದಾರೆ. ಅವರು ಆರು ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಮಹಿಳಾ ನಿರ್ದೇಶಕರಾಗಿದ್ದಾರೆ(ಬಿಎಚ್ಯು). ಅವರು ಪರಿಸರೀಯ ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ ತಮ್ಮ ಪಾತ್ರಕ್ಕೆ ಗಮನಾರ್ಹರಾಗಿದ್ದಾರೆ ಹಾಗೂ ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ ಆಧಾರಿತ ಸಂವೇದಕದ ರಚನೆ ಮತ್ತು ಬಯೋ ಸೆನ್ಸಾರ್, ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದಕ್ಕಾಗಿ ಪ್ರಸಿದ್ಧಿ ಪಡೆದರು.
ಜನನ
[ಬದಲಾಯಿಸಿ]ಕವಿತಾರವರು ಭಾರತದ ವಾರಣಾಸಿಯಲ್ಲಿ ನವೆಂಬರ್ ೬, ೧೯೬೮ ರಂದು ಜನಿಸಿದರು.[೩]
ವೈಯಕ್ತಿಕ ಜೀವನ
[ಬದಲಾಯಿಸಿ]ಕವಿತಾ ರವರ ತಂದೆ - ರಾಯ್ ಸುಶೀಲ್ ಕುಮಾರ್, ತಾಯಿ - ಶುಭಾ ಅಗರ್ವಾಲ್. ಕವಿತಾ ರವರು ಮುಕುಲ್ ಕುಮಾರ್ ಷಾ ರವರನ್ನು ಜನವರಿ ೨೫, ೧೯೯೧ ರಂದು ವಿವಾಹವಾದರು.[೪]
ಶಿಕ್ಷಣ
[ಬದಲಾಯಿಸಿ]- ಬ್ಯಾಚುಲರ್ ಆಫ್ ಸೈನ್ಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೮೯.
- ಮಾಸ್ಟರ್ ಆಫ್ ಸೈನ್ಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೯೧.[೫]
- ಬ್ಯಾಚುಲರ್ ಆಫ್ ಎಜುಕೇಷನ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ,೧೯೯೨.
- ಡಾಕ್ಟರ್ ಆಫ್ ಫಿಲಾಸಫಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೯೫.[೬]
ವೃತ್ತಿಜೀವನ
[ಬದಲಾಯಿಸಿ]- ಜೂನಿಯರ್ ಸಂಶೋಧನಾ ಸಹವರ್ತಿ ಜೀವರಸಾಯನಶಾಸ್ತ್ರ, ಬನಾರಸ್ ಹಿಂದೂ ಯುನಿವರ್ಸಿಟಿ, ೧೯೯೩-೧೯೯೫.
- ಸೀನಿಯರ್ ರಿಸರ್ಚ್ ಫೆಲೋ, ಬನಾರಸ್ ಹಿಂದೂ ಯುನಿವರ್ಸಿಟಿ, ೧೯೯೫-೧೯೯೬.
- ೧೯೯೬ ರಿಂದ ಸಂಶೋಧನಾ ಸಹಾಯಕಿ, ಬನಾರಸ್ ಹಿಂದೂ ಯುನಿವರ್ಸಿಟಿ.
- ೧೯೯೮ ರಿಂದ ಪೋಸ್ಟ್ ಡಾಕ್ಟೋರಲ್ ಸಂಶೋಧನಾ ಸಹವರ್ತಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್, ಟೋಕಿಯೋ.
- ಪರಿಸರ ಸಲಹೆಗಾರರ ಸಚಿವಾಲಯ, ಭಾರತ.
ಸದಸ್ಯತ್ವ
[ಬದಲಾಯಿಸಿ]- ೧೯೮೪-೧೯೮೮ ತನಕ ಭಾರತೀಯ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ ನೊಂದಿಗೆ ಸೇವೆ ಸಲ್ಲಿಸಿದರು.
- ಸದಸ್ಯೆ - ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ (ಜೀವನ).
- ಜೈವಿಕ ರಸಾಯನಶಾಸ್ತ್ರಜ್ಞರ ಸೊಸೈಟಿ.
ಪ್ರಶಸ್ತಿಗಳು
[ಬದಲಾಯಿಸಿ]- ವಿಮೆನ್ ಸೈಂಟಿಸ್ಟ್ ಅವಾರ್ಡ್ -೨೦೧೧, ಬಯೋಟೆಕ್ ರಿಸರ್ಚ್ ಸೊಸೈಟಿ.[೭]
ಸಾಧನೆಗಳು
[ಬದಲಾಯಿಸಿ]- ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ - ಆಧಾರಿತ ಸಂವೇದಕದ ರಚನೆ.[೮]
- ಬಯೋ ಸೆನ್ಸಾರ್ ಮತ್ತು ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ BHU
- ↑ https://scholar.google.co.in/citations?user=aacPjd4AAAAJ&hl=en
- ↑ https://thelifeofscience.com/2016/04/04/kavita-environmentalbiotech/
- ↑ research gate
- ↑ https://www.revolvy.com/page/Kavita-Shah-%28scientist%29
- ↑ https://prabook.com/web/kavita.shah/117793
- ↑ "ಆರ್ಕೈವ್ ನಕಲು". Archived from the original on 2019-03-29. Retrieved 2019-03-29.
- ↑ "ಆರ್ಕೈವ್ ನಕಲು". Archived from the original on 2019-03-29. Retrieved 2019-03-29.