ಕವಿತಾ ಕೃಷ್ಣ

ವಿಕಿಪೀಡಿಯ ಇಂದ
Jump to navigation Jump to search

ಕವಿತಾ ಕೃಷ್ಣ ಇವರು ೧೯೪೪ರಲ್ಲಿ ಜನಿಸಿದರು. ಕನ್ನಡ ಪಂಡಿತ ಹಾಗು ಎಮ್.ಏ. ಪದವಿ ಪಡೆದ ಇವರು ಮಣ್ಣೆಯಲ್ಲಿರುವ ಪ್ರೌಢಶಾಲೆಯಲ್ಲಿಕನ್ನಡ ಪಂಡಿತರಾಗಿ ಹಾಗು ಕನ್ನಡ ಭಾಷಾ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರ ತಂದೆ ಯಜಮಾನ ಕಾಳಯ್ಯ.

ಕವಿತಾ ಕೃಷ್ಣರು ಈವರೆಗೆ ೯೫ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ೧೩ ಕವನಸಂಕಲನಗಳು, ೧೫ ನಾಟಕಗಳು, ೧೦ ಶೈಕ್ಷಣಿಕ ಕೃತಿಗಳು, ೭ ಮಕ್ಕಳ ಸಾಹಿತ್ಯಕೃತಿಗಳು, ೧೯ ಚರಿತ್ರಾಕೃತಿಗಳು ಹಾಗು ೨೫ ಇತರ ಕೃತಿಗಳು ಸೇರಿವೆ. ಇವರ ಕೃತಿಗಳಲ್ಲಿ ಕೆಲವು ಇಂತಿವೆ:

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

 • ಕಂದನ ವಾಣಿ
 • ಕನ್ನಡ ಕಹಳೆ
 • ಕನ್ನಡ ಕಿನ್ನರಿ
 • ಕನ್ನಡಾಂಬೆಗಾರತಿ
 • ಕವನ ತರಂಗ
 • ಕವನ ಮಂಜರಿ
 • ಕಾವ್ಯ ಮಂಜರಿ
 • ಕೃಷ್ಣನ ಕೊಳಲು
 • ತೇರನೇರು ಬಾ

ಕಾದಂಬರಿ[ಬದಲಾಯಿಸಿ]

 • ಆವರ್ತನ

ನಾಟಕ[ಬದಲಾಯಿಸಿ]

 • ಚಂಡಶಾಸನ
 • ತ್ಯಾಗಮಯಿ
 • ಬಾಳೆ ಬಂಗಾರ
 • ಮಮತೆಯ ಮನೆ
 • ರಾಧಾನಿವಾಸ
 • ರಾಮರಾಜ್ಯ
 • ವಸ್ತ್ರಾಪಹರಣ
 • ಶಕುಂತಲಾ
 • ಸಂಗೊಳ್ಳಿ ರಾಯಣ್ಣ

ಜೀವನ ಚರಿತ್ರೆ[ಬದಲಾಯಿಸಿ]

 • ನಾದಯೋಗಿ ನಾರಣಪ್ಪ
 • ರುದ್ರಮುನಿ ಚರಿತ

ಸಂಶೋಧನೆ[ಬದಲಾಯಿಸಿ]

 • ಕರ್ನಾಟಕದ ತಿಗಳರು
 • ಗಂಗರ ಮಾನ್ಯಪುರ

ಸಂಪಾದನೆ[ಬದಲಾಯಿಸಿ]

 • ವಿಜಯವಂದನ

ಸಮ್ಮಾನ[ಬದಲಾಯಿಸಿ]

ಕವಿತಾಕೃಷ್ಣರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ. ದೆಹಲಿ ಸಮ್ಮೇಲನದಲ್ಲಿ "ಕರ್ನಾಟಕ ಜ್ಯೋತಿ" ಪ್ರಶಸ್ತಿ ಪಡೆದಿದ್ದಾರೆ. ಭಾರತೀಯ ವಿದ್ಯಾಭವನದ "ಸರ್ವೋತ್ತಮ ಆಚಾರ್ಯ" ಪ್ರಶಸ್ತಿ ಇವರಿಗೆ ಲಭಿಸಿದೆ. ಇವಲ್ಲದೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಫೆಲೋಶಿಪ್, ಆದಿಚುಂಚನಗಿರಿ ಮಠದ "ಚುಂಚಶ್ರೀ",ಗೊರೂರು ಪ್ರಶಸ್ತಿ, ದೆಹಲಿ ಕನ್ನಡ ಸಂಘದ "ಕನ್ನಡ ರತ್ನ" ಪ್ರಶಸ್ತಿ, ಜವಾಹರಲಾಲ ನೆಹರೂ ಅಕಾಡೆಮಿಯ "ವಿದ್ಯಾ ವಾಚಸ್ಪತಿ" ಪ್ರಶಸ್ತಿ ಸಹ ಇವರಿಗೆ ಸಂದಿವೆ.