ವಿಷಯಕ್ಕೆ ಹೋಗು

ಕಲ್ಯಾಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲ್ಯಾಣ್ : ಮಹಾರಾಷ್ಟ್ರದ ಠಾಣ ಜಿಲ್ಲೆಯ ಒಂದು ಪಟ್ಟಣ. ಮುಂಬಯಿಯ ಈಶಾನ್ಯಕ್ಕೆ ೫೨ ಕಿಮೀಗಳ ದೂರದಲ್ಲಿ ಉಲ್ಹಾಸ್ ನದಿಯ ದಡದಲ್ಲಿದೆ. ಮಧ್ಯ ರೈಲ್ವೆಯ ಪ್ರಮುಖ ಕೂಡುನಿಲ್ದಾಣ.

ಇಲ್ಲಿಂದ ಈಶಾನ್ಯಕ್ಕೊಂದು, ಆಗ್ನೇಯಕ್ಕೊಂದು ಮುಖ್ಯ ರೈಲುಮಾರ್ಗಗಳಿವೆ. ಮುಂಬಯಿಗೆ ಸಮೀಪದಲ್ಲಿರುವುದರಿಂದ ಇಲ್ಲೂ ಕೈಗಾರಿಕೆ ಬಹುಬೇಗ ಹಬ್ಬಿತು. ತತ್ಪರಿಣಾಮವಾಗಿ ಜನಸಂಖ್ಯೆ ತ್ರೀವ್ರಗತಿಯಿಂದ ಹೆಚ್ಚಿತು; ರೇಷ್ಮೆ ನೈಲಾನುಗಳ ನೆಯ್ಗೆಗೆ ಈ ಪಟ್ಟಣ ಬಲು ಪ್ರಸಿದ್ಧ. ಬತ್ತದಿಂದ ಅಕ್ಕಿ ತಯಾರಿಕೆ, ಇಟ್ಟಿಗೆ ಮತ್ತು ಹೆಂಚುಗಳ ಕೈಗಾರಿಕೆ ಮುಖ್ಯವಾದವು. ಸುತ್ತಣ ಪ್ರದೇಶದ ಗಣಿಗಳಲ್ಲಿ ಒಳ್ಳೆಯ ಕಲ್ಲು ದೊರಕುತ್ತದೆ. ಕಲ್ಯಾಣದಿಂದ ಸುಮಾರು ೨ ಕಿಮೀ ದೂರದಲ್ಲಿ ನಿರಾಶ್ರಿತರಿಗಾಗಿ ಉಲ್ಹಾಸ್ ನಗರವನ್ನು ಸ್ಥಾಪಿಸಲಾಗಿದೆ.

ಇತಿಹಾಸ

[ಬದಲಾಯಿಸಿ]

ಪ್ರಸಕ್ತಶಕದ ಆರಂಭಕಾಲದಲ್ಲಿ ಕಲ್ಯಾಣ್ ಒಂದು ರಾಜ್ಯದ ರಾಜಧಾನಿಯಾಗಿದ್ದು ಸಮುದ್ರವ್ಯಾಪಾರಕೇಂದ್ರವಾಗಿತ್ತು. ಇಲ್ಲಿ ದೊರಕಿದ ೧-೨ನೆಯ ಶತಮಾನಕ್ಕೆ ಸೇರಿದ ಶಾಸನಗಳಿಂದ ಈ ಅಂಶ ವ್ಯಕ್ತವಾಗುತ್ತದೆ. ೧೪ನೆಯ ಶತಮಾನದಲ್ಲಿ ಈ ಪಟ್ಟಣ ಮುಸಲ್ಮಾನರ ಕೈಗೆ ಸೇರಿತ್ತು. ೧೫೩೬ರಲ್ಲಿ ಇದನ್ನು ಫ್ರೆಂಚರು ವಶಪಡಿಸಿಕೊಂಡರು. ಮುಂದೆ ಇದು ೧೬೬೨ರಲ್ಲಿ ಮರಾಠರಿಗೂ ೧೭೮೦ರಲ್ಲಿ ಇಂಗ್ಲಿಷರಿಗೂ ಸೇರಿತ್ತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಲ್ಯಾಣ್&oldid=1206413" ಇಂದ ಪಡೆಯಲ್ಪಟ್ಟಿದೆ