ವಿಷಯಕ್ಕೆ ಹೋಗು

ಕಲ್ಪಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲ್ಪಗಳು ಬ್ರಹ್ಮನ ಒಂದು ದಿನ ಪ್ರಮಾಣಕ್ಕೆ ಕಲ್ಪವೆಂದು ಹೆಸರು. ಮನುಷ್ಯಮಾನದಿಂದ ಒಂದು ತಿಂಗಳಾಗುವ ಕಾಲ ಪಿತೃದೇವತೆಗಳ ಮಾನದಲ್ಲಿ ಒಂದು ದಿನ. ಮನುಷ್ಯಮಾನದ ೧೦೦೦ ಚತುರ್ಯುಗಗಳು ಅಥವಾ ದೇವಮಾನದ ೧೦೦೦ ಯುಗಗಳು ಚತುರ್ಮುಖ ಬ್ರಹ್ಮನಿಗೆ ಒಂದು ಹಗಲು. ಚೈತ್ರ ಶುಕ್ಲ ಪಾಡ್ಯ ಭಾನುವಾರ ಪ್ರಥಮ ಕಲ್ಪ ಪ್ರಾರಂಭವಾದ ದಿನ. ಅಂದಿನಿಂದ ಬ್ರಹ್ಮ ಸೃಷ್ಟಿಗೆ ಪ್ರಾರಂಭಿಸಿದ.

೮,೬೪,೦೦,೦೦,೦೦೦ ಸೌರವರ್ಷಗಳು ಕಳೆದರೆ ಬ್ರಹ್ಮನ ಒಂದು ದಿನವಾಗುತ್ತದೆ. ಬ್ರಹ್ಮನ ಒಂದೊಂದು ದಿನಕ್ಕೆ ಒಂದೊಂದು ಹೆಸರಿದೆ. ಅವುಗಳೆಂದರೆ (೧) ಶ್ವೇತವರಾಹ (೨) ನೀಲಲೋಹಿತ (೩) ವಾಸುದೇವ (೪) ರಥಂತರ (೫) ರೌರವ (೬) ಪ್ರಾಣ (೭) ಬೃಹತ್ (೮) ಕಂದರ್ಪ (೯) ಸದ್ಯ ( ೧೦) ಈಶಾನ (೧೧) ವ್ಯಾನ (೧೨) ಸಾರಸ್ವತ (೧೩) ಉದಾನ (೧೪) ಗಾರುಡ (೧೫) ಕೌರ್ಮ (೧೬) ನಾರಸಿಂಹ (೧೭) ಸಮಾನ (೧೮) ಆಗ್ನೇಯ (೧೯) ಸೋಮ (೨೦) ಮಾನವ (೨೧) ತತ್ಪುರುಷ (೨೨) ವೈಕುಂಠ (೨೩) ಲಕ್ಷ್ಮಿ (೨೪) ಸಾವಿತ್ರಿ (೨೫) ಘೋರ (೨೬) ವಾರಾಹ (೨೭) ವೈರಾಜ (೨೮) ಗೌರಿ (೨೯) ಮಾಹೇಶ್ವರ (೩೦) ಪಿತೃ.

ಇವುಗಳಲ್ಲಿ ಮೊದಲ ಹದಿನೈದು ಕಲ್ಪಗಳಿಗೆ ಶುಕ್ಲ ಪಕ್ಷವೆಂದು, ಉಳಿದ ಹದಿನೈದು ಕಲ್ಪಗಳಿಗೆ ಕೃಷ್ಣಪಕ್ಷವೆಂದು ಹೆಸರು. ಈ ಒಟ್ಟು ಮೂವತ್ತು ಕಲ್ಪಗಳು ಕಳೆದರೆ ಬ್ರಹ್ಮನಿಗೆ ಒಂದು ತಿಂಗಳು. ಈ ವಿಧವಾದ ಹನ್ನೆರಡು ತಿಂಗಳು ಕಳೆದರೆ ಒಂದು ವರ್ಷ. ಬ್ರಹ್ಮನಿಗೆ ಈ ಪ್ರಮಾಣದ ನೂರು ವರ್ಷಗಳು ಆಯಸ್ಸು.

ಪ್ರಕೃತ ನಡೆಯುತ್ತಿರುವುದು ಬ್ರಹ್ಮನ ಐವತ್ತೊಂದನೆಯ ವರ್ಷದ (ದ್ವಿತೀಯ ಪರಾರ್ಧದ) ಪ್ರಾರಂಭದಲ್ಲಿ ಮೊದಲನೆಯದಾದ ಶ್ವೇತವರಾಹ ಕಲ್ಪ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಕಲ್ಪಗಳು&oldid=522401" ಇಂದ ಪಡೆಯಲ್ಪಟ್ಟಿದೆ