ಕಲಿಕೆ (ಸಂಸ್ಥೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಕಲಿಕೆ
ಪ್ರಕಾರ: ಸಾರ್ವಜನಿಕ ಸಂಸ್ಥೆ
ಸ್ಥಾಪನೆ: ೨೦೧೨
ಕೇಂದ್ರ ಸ್ಥಳ: ಬೆಂಗಳೂರು, ಕರ್ನಾಟಕ, ಭಾರತ
ಮುಖ್ಯವಾದ ಸಿಬ್ಬಂದಿ:ಬುರ್ಝಿಸ್ ಎಸ್. ತಾರಾಪೊರೆವಾಲ
ಅಂತರ್ಜಾಲ:kalike.org

ಕಲಿಕೆ ಒಂದು ಸರಕಾರೇತರ ಸಂಸ್ಥೆಯಾಗಿದ್ದು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯನಿರತವಾಗಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಸರ‍್ ರತನ್ ಟಾಟಾ ಟ್ರಸ್ಟ್ ಮತ್ತು ನವಾಜ್ ಬಾಯಿ ರತನ್ ಟಾಟಾ ಟ್ರಸ್ಟ್ Archived 2013-05-04 at the Wayback Machine. ಇವುಗಳ ನೆರವಿನಿಂದ ಈ ಸಂಸ್ಥೆ ಕೆಲಸ ಮಾಡುತ್ತದೆ. ಬಡಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಕಾರ್ಯನಿರತವಾಗಿದೆ.

ಕಲಿಕೆಯ ವಿಭಾಗಗಳು[ಬದಲಾಯಿಸಿ]

ಶಿಕ್ಷಣ[ಬದಲಾಯಿಸಿ]

  • ಚಿಗುರು - ಈ ವಿಭಾಗದಲ್ಲಿ ೬ ವರ್ಷದ ಒಳಗಿನ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಕಡೆ ಗಮನ ಹರಿಸಲಾಗುತ್ತಿದೆ. ಅಂಗನವಾಡಿ ಮತ್ತು ಪೋಷಕರ ಮೂಲಕ ಅದರಲ್ಲೂ ತಾಯಂದಿರಿಗೆ ಸೂಕ್ತ ತರಗೇತಿ ನೀಡುವ ಮೂಲಕ ಮಕ್ಕಳನ್ನು ಅಭಿವೃದ್ಧಿಪಡಿಸಲು ಶ್ರಮಿಸಲಾಗುತ್ತಿದೆ[೧].
  • ಕಲಿಕಾಚೇತನ - ಈ ವಿಭಾಗದಲ್ಲಿ ೩ರಿಂದ ೫ ನೆ ತರಗತಿಯ ಮಕ್ಕಳಲ್ಲಿ ಕನ್ನಡದ ಕಲಿಕೆಯ ತೊಡಕುಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತದೆ. ಕನ್ನಡದ ಕಲಿಕೆಯು ಸುಧಾರಿಸಿದರೆ ಇತರೆ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜ ಇತ್ಯಾದಿಗಳ ಕಲಿಕೆಯೂ ಸುಧಾರಿಸುತ್ತದೆ. ಶಾಲೆಯ ಸಮಯದ ನಂತರ ಕಲಿಕೆಯ ತಂಡದವರು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಾರೆ.
  • ಸ್ಫೂರ್ತಿ - ಈ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಅಧ್ಯಾಪಕರು ಮಾಡುವ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಕೆಲಸವನ್ನು ಅವರು ಬೆಂಗಳೂರಿನ ಐಟಿ ಫಾರ್ ಚೇಂಜ್ ಸಂಸ್ಥೆಯ ಜೊತೆಗೂಡಿ ಮಾಡುತ್ತಿದ್ದಾರೆ. ಮಕ್ಕಳಿಗೆ ವಿಕಿಪೀಡಿಯವನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಸಲು ಹಾಗೂ ಕಲಿಕೆಯ ತಂಡದವರು ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸಲು ತರಬೇತಿಯನ್ನೂ ಪಡೆದಿದ್ದಾರೆ[೨].
ವಿಕಿಪೀಡಿಯ ತರಬೇತಿಯಲ್ಲಿ ಕಲಿಕೆಯ ತಂಡ

ಇವಲ್ಲದೆ ಸಂಜೀವನಿ ಹೆಸರಿನ ಓದುಗರ ಕ್ಲಬ್, ಚಿಣ್ಣರ ಚೇತನ ಹೆಸರಿನ ಮಕ್ಕಳ ಕೂಟ, ಇತ್ಯಾದಿಗಳನ್ನು ಕೂಡ ಶಿಕ್ಷಣ ವಿಭಾಗದಲ್ಲಿ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಶಾಲೆಯ ಬಗ್ಗೆ ಮತ್ತು ಶಾಲೆಯ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳೋತ್ಸವ ಎಂಬ ಕಾರ್ಯಕ್ರಮವನ್ನು ನಡೆಸಲಾಗುತ್ತದೆ[೩].

ಆರೋಗ್ಯ[ಬದಲಾಯಿಸಿ]

ಹಳ್ಳಿಗಳಲ್ಲಿ ಶೌಚಾಲಯಗಳ ಕೊರತೆ ಇದೆ ಮಾತ್ರವಲ್ಲ ಹಳ್ಳಿಗಳ ಬಹುತೇಕ ಜನರಿಗೆ ಅವುಗಳ ಅಗತ್ಯವನ್ನು ತಿಳಿಹೇಳಬೇಕಾಗಿದೆ. ಶಾಳೆಯಲ್ಲಿ ಮಕ್ಕಳಿಗೆ ಶೌಚಾಲಯದ ಅಗತ್ಯವನ್ನು ಕಲಿಕೆಯ ತಂಡ ಮತ್ತು ಅವರ ಸಮುದಾಯ ಸಹಯೋಗ ಕಾರ್ಯಕ್ರಮದ ಭಾಗಿಗಳು ತಿಳಿಸುತ್ತಾರೆ. ಮಕ್ಕಳು ತಮ್ಮ ಮನೆಗಳಿಗೆ ಹೋಗಿ ಅವರ ಪೋಷಕರುಗಳಿಗೆ ತಿಳಿಸುತ್ತಾರೆ. ಈ ಮೂಲಕ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಜಾಸ್ತಿಯಾಗುತ್ತದೆ[೪], ಕಲಿಕೆ ತಂಡ ಇದಲ್ಲದೆ ಆರೋಗ್ಯ ಸುಧಾರಣೆಗಾಗಿ ಮಳೆ ನೀರಿನ ಕುಯ್ಲು ಬಗೆಗೂ ಜನರಲ್ಲಿ ಅರಿವು ಮೂಡಿಸುತ್ತಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://www.kannadaprabha.com/districts/gulbarga/ಕಲಿಕೆ-ಕಾರ್ಯಕ್ರಮ-ಸದುಪಯೋಗಕ್ಕೆ-ಕರೆ/77952.html
  2. https://commons.wikimedia.org/wiki/Category:Kannada_Wikipedia_Workshop_for_Kalike
  3. http://www.kannadaprabha.com/districts/raichur/ಮಕ್ಕಳಿಗೆ-ಹೊರ-ಜಗತ್ತಿನ-ಅನಾವರಣ/209943.html
  4. http://vijaykarnataka.indiatimes.com/district/yadagiri/-/articleshow/45229319.cms