ಕಲಾಮಂಡಲಂ ಬಿಂದುಲೇಖಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಾಮಂಡಲಂ ಬಿಂದುಲೇಖಾ
Born
ಬಿಂದುಲೇಖಾ (ದಿನಾಂಕ:೧೮ ಅಕ್ಟೋಬರ್ ೧೯೭೮)
Occupation(s)ಭಿತ್ತಿಚಿತ್ರಕಾರ, ನೃತ್ಯಗಾರ್ತಿ
Years active೨೦೦೧ ಇಂದಿನವರೆಗೂ

ಕಲಾಮಂಡಲಂ ಬಿಂದುಲೇಖಾ ಅವರು ಚಿತ್ರ ಕಲಾವಿದೆ ಮತ್ತು ಅವರು ಭಾರತದ ಕೇರಳ ರಾಜ್ಯದ ಭರತನಾಟ್ಯ ಹಾಗೂ ಮೋಹಿನಿಯಾಟ್ಟಂ ನೃತ್ಯಗಾರ್ತಿ. [೧]ಕೇರಳ ರಾಜ್ಯದ ದೇವಾಲಯದ ರೇಖಾಚಿತ್ರದಲ್ಲಿ ಮೊದಲ ಮಹಿಳಾ ಮ್ಯೂರಲ್ ಪೇಂಟರ್ ಇವರಾಗಿದ್ದಾರೆ. [೨]

ಆರಂಭಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

ಕಲಾಮಂಡಲಂ ಬಿಂದುಲೇಖಾ ಅವರು ಮೋಹಿನಿಯಾಟ್ಟಂ ಮತ್ತು ಭರತನಾಟ್ಯದಲ್ಲಿ ಡಿಪ್ಲೊಮಾ ಮತ್ತು ಕೇರಳ ಕಲಾಮಂಡಲಂನಿಂದ ಪದವಿ ಪಡೆದಿದ್ದಾರೆ. ಮಮ್ಮಿಯೂರ್ ಕೃಷ್ಣನ್ ಕುಟ್ಟಿ ನಾಯರ್ [೩] ಅವರ ಶಿಷ್ಯರಾದ ತನ್ನ ಸೋದರ ಮಾವ ಸದಾನಂದನ್ ಅವರ ಕೆಲಸದಿಂದ ಆಕರ್ಷಿತರಾದ ನಂತರ ಅವರು ಚಿತ್ರಗಳನ್ನು ಕೈಗೆತ್ತಿಕೊಂಡು ಆರು ವರ್ಷಗಳ ಕಾಲ ತರಬೇತಿ ಪಡೆದರು.

ಕಲಾ ವೃತ್ತಿ[ಬದಲಾಯಿಸಿ]

ತ್ರಿಶ್ಶೂರ್‌ನ ತಿರೂರ್ ವಡಕುರುಂಬಕಾವು ದೇವಸ್ಥಾನದಲ್ಲಿ ಅವರ ಚೊಚ್ಚಲ ಕೆಲಸವು ಕೇರಳದ ದೇವಸ್ಥಾನದಲ್ಲಿ ಮಹಿಳಾ ಕಲಾವಿದರಿಂದ ಮಾಡಿದ ಮೊದಲ ಚಿತ್ರ ಎಂದು ಪರಿಗಣಿಸಲಾಗಿದೆ. ದೇವಿಯ ಮೂರು ರೂಪಗಳನ್ನು ಒಳಗೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸಲು ಎರಡು ವರ್ಷಗಳನ್ನು ತೆಗೆದುಕೊಂಡಿತು. ಅವು ಸರಸ್ವತಿ (ಬಿಳಿ ಛಾಯೆಗಳಲ್ಲಿ), ಭದ್ರಕಾಳಿ (ಕಡು ನೀಲಿ ಬಣ್ಣದಲ್ಲಿ) ಮತ್ತು ಮಹಾಲಕ್ಷ್ಮಿ (ಕೆಂಪು ಛಾಯೆಗಳಲ್ಲಿ) ಚಿತ್ರಗಳಾಗಿವೆ. ಚಿತ್ರಕಲೆ "ರಜಸ್ ತಮಸ್ ಸತ್ವ" ಎಂಬ ವಿಷಯವನ್ನು ಆಧರಿಸಿದೆ. [೪]

ಉಲ್ಲೇಖಗಳು[ಬದಲಾಯಿಸಿ]

  1. "Breaking into another male bastion". The Hindu. 2004-10-09. Archived from the original on 2014-12-05. Retrieved 27 November 2014.
  2. "A Dancer's Tryst With Colours". The New Indian Express. 2014-09-19. Archived from the original on 2014-12-08. Retrieved 27 November 2014.
  3. "The mural of the story". Deccan Chronicle. 2013-07-22. Archived from the original on 4 December 2014. Retrieved 27 November 2014.
  4. "Mural artist to display her paintings". The Hindu. 2011-08-11. Retrieved 27 November 2014.