ಕಲಾಬಾವಿ

ವಿಕಿಪೀಡಿಯ ಇಂದ
Jump to navigation Jump to search

ಕಲಾಬಾವಿ: ಜಿಲ್ಲೆ ಸಂಪಗಾಂವ ತಾಲ್ಲೂಕಿನ ಒಂದು ಗ್ರಾಮ. ಬೈಲಹೊಂಗಲದಿಂದ ೧೮ಕಿಮೀ ದೂರದಲ್ಲಿದೆ. ಇದು ಪ್ರಾಚೀನ ಕುಮ್ಮುದವಾಡ ಎಂದು ಪಿs್ಲೕಟರು ಗುರುತಿಸಿದ್ದಾರೆ. ಇಲ್ಲಿರುವ ಬಸದಿ ಆದಿನಾಥ ತೀರ್ಥಂಕರನದು. ಇದೊಂದು ಸಾಮಾನ್ಯ ಕಟ್ಟಡ. ಕಲ್ಯಾಣಿ ಚಾಳುಕ್ಯ ಶೈಲಿಯಲ್ಲಿರುವ ಆದಿನಾಥನ ಮೂರ್ತಿ ಕುಳಿತ ಭಂಗಿಯಲ್ಲಿದ್ದು ಎರಡು ಮೀಟರ್ ಎತ್ತರವಾಗಿದೆ. ಇಲ್ಲಿರುವ ೮೧೪ರ ಗಂಗರ ಕಾಲದ ಶಾಸನವೊಂದು ಗಂಗರ ಶಿವಮಾರನುಒಂದನೆಯ ಅಮೋಘವರ್ಷನ ಕಾಲದಲ್ಲಿ ಕಾದರವಳ್ಳಿ-೩೦ರಲ್ಲಿರುವ ಕುಮ್ಮುದವಾಡ ಜಿನಾಲಯಕ್ಕೆ ಕೊಟ್ಟ ದಾನ - ದತ್ತಿಯನ್ನು ಹೇಳುತ್ತದೆ.ರಾಮಲಿಂಗ, ಕಲ್ಮೇಶ್ವರ, ದ್ಯಾಮವ್ವ, ಮಾರುತಿ ಮತ್ತು ಇತ್ತೀಚೆಗೆ ನಿರ್ಮಿಸಿದ ವಿಠಲ ದೇವಾಲಯ ಇಲ್ಲಿನ ಇತರದೇವಾಲಯಗಳು. ರಾಮಲಿಂಗ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸಲಾಗಿದೆ. ಇಲ್ಲಿರುವ ಇನ್ನೊಂದು ಶಾಸನ ೩೦೦ ಕಮ್ಮ ಭೂಮಿಯನ್ನು ಕುಮ್ಮುದವಾಡದ ದೇವಾಲಯಕ್ಕೆ ದಾನ ಕೊಟ್ಟ ವಿಚಾರವನ್ನು ದಾಖಲಿಸಿದೆ. ಕಲ್ಮೇಶ್ವರ ದೇವಾಲಯವೂ ಇತ್ತೀಚೆಗೆ ಜೀರ್ಣೋದ್ಧಾರಗೊಂಡಿದ್ದು ಶಿವ-ಪಾರ್ವತಿಯರ ಮೂರ್ತಿಗಳನ್ನೊಳಗೊಂಡಿದೆ. ಇಲ್ಲಿರುವ ಮತ್ತೊಂದು ಶಾಸನ ೧೨ನೆಯ ಶತಮಾನದ ಮತಿಮಾಳಪಂಡಿತ, ಅವನ ಶಿಷ್ಯ ತೇಜೋರಸಿ ಪಂಡಿತ, ನಾಗೇಶ್ವರ ದೇವರು ಮತ್ತು ಅಣ್ಣಿಗೇರಿಗಳ ಬಗ್ಗೆ ಮಾಹಿತಿ ಒದಗಿಸುವುದು. ಈ ದೇವಾಲಯದ ಎದುರು ೪ ವೀರಗಲ್ಲುಗಳಿವೆ. (ಆರ್.ಐ.)

"https://kn.wikipedia.org/w/index.php?title=ಕಲಾಬಾವಿ&oldid=615524" ಇಂದ ಪಡೆಯಲ್ಪಟ್ಟಿದೆ