ಕರ್ಫ್ಯೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕರ್ಫ್ಯೂ, ಕೆಲವು ಅಥವಾ ಎಲ್ಲಾ ಜನರು ನಿರ್ದಿಷ್ಟ ಸಮಯದ ನಡುವೆ ರಸ್ತೆಯನ್ನು ತೊರೆದು ಮನೆ ಸೇರಬೇಕೆಂಬ ನಿಬಂಧನೆ. ಸಾಮಾನ್ಯವಾಗಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಆರಕ್ಷಕ ಪಡೆ,ಸೈನ್ಯೆ ಅಥವಾ ಇನ್ನಿತರ ಆಡಳಿತ ಪ್ರಸಾಶನಗಳು ಸಮನ್ಯವಾಗಿ ಗಲಭೆ, ಘರ್ಷಣೆ,ಯುದ್ಧ ಮತ್ತು ದುರಂತಕಾಲದಲ್ಲಿ ಕರ್ಫ್ಯೂ ಜಾರಿಗೊಳಿಸುವವು. ಕರ್ಫ್ಯೂ ಮುರಿಯುವುದು ಸಾಮನ್ಯವಾಗಿ ಕಾನೂನಿನ ದೃಷ್ಟಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಮೂಲತಃ ಫ್ರೆಂಚ್ ಪದವಾದ ಕರ್ಫ್ಯೂ ಮಧ್ಯ ಕಾಲದಲ್ಲಿಯೆ ಆಂಗ್ಲ ಭಾಷೆಯ ಭಾಗವಾಯಿತು. ಈ ಪದವನ್ನು ಹಿಂದೆ ಮರದ ಮನೆಗಳಲ್ಲಿಂದ ಆವೃತ್ತವಾದ ಯುರೋಪಿನ ನಗರಗಳಲ್ಲಿ ಮಲಗುವ ಮುನ್ನ ಬೆಂಕಿ ಮತ್ತು ದೀಪಗಳನ್ನು ಆರಿಸಲು ನೀಡುತ್ತಿದ್ದ ಮುಂಜಾಗ್ರತ ಸೂಚನೆಗಳಲ್ಲಿ ಬಳಸುತ್ತಿದ್ದರು. ಆಂಗ್ಲರ ಮೂಲಕ ಈ ಪದ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಬಳಕೆಗೆ ಬಂತು.

"https://kn.wikipedia.org/w/index.php?title=ಕರ್ಫ್ಯೂ&oldid=1048866" ಇಂದ ಪಡೆಯಲ್ಪಟ್ಟಿದೆ