ಕರ್ಜಗಿ

ವಿಕಿಪೀಡಿಯ ಇಂದ
Jump to navigation Jump to search
ಕರ್ಜಗಿ
ಗ್ರಾಮ
ದೇಶ ಭಾರತ
ಕರ್ನಾಟಕಕರ್ನಾಟಕ
ಜಿಲ್ಲೆಹಾವೇರಿ
ತಾಲೂಕುಹಾವೇರಿ
Population
 (2001)
 • Total೭,೫೦೮
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯUTC+5:30 (IST)

ಕರ್ಜಗಿ ಹಾವೇರಿ ಜಿಲ್ಲೆಗೆ ಸೇರಿದ ಹಾವೇರಿ ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣಕ್ಕೆ ಈಶಾನ್ಯದಲ್ಲಿ 11.7 ಕಿಮೀ ದೂರದಲ್ಲಿ ವರದಾ ನದಿಯ ತೀರದಲ್ಲಿರುವ ಒಂದು ಊರು. 1905ರವರೆಗೆ ಈ ಊರು ಒಂದು ತಾಲ್ಲೂಕಾಗಿದ್ದು ಕರ್ಜಗಿ ಅದರ ಆಡಳಿತ ಕೇಂದ್ರವಾಗಿತ್ತು. ಮುಂದೆ ತಾಲ್ಲೂಕು ಕೇಂದ್ರ ಹಾವೇರಿಗೆ ವರ್ಗಾಯಿಸಲಾಯಿತು.

ವಿಸ್ತೀರ್ಣ ಮತ್ತು ಜನಸಂಖ್ಯೆ[ಬದಲಾಯಿಸಿ]

ವಿಸ್ತೀರ್ಣ 28.38 ಚ.ಕಿಮೀ ಇತ್ತು. ಜನಸಂಖ್ಯೆ 7508 (2001). ಓದಿಗೆ ಶಾಲಾ ಸೌಲಭ್ಯವಿದೆ. ಊರು ಇತ್ತೀಚೆಗೆ ಇತರೆ ನಾಗರಿಕ ಸೌಲಭ್ಯಗಳನ್ನು ಹೊಂದಿದೆ.

ಸಾಮಾಜಿಕ[ಬದಲಾಯಿಸಿ]

ಇಲ್ಲಿ 32 ದೇವಾಲಯಗಳಿವೆ. ಇವುಗಳಲ್ಲಿ ಬ್ರಹ್ಮದೇವರು, ಮೌನೇಶ್ವರ, ವೀರ ಭದ್ರ ಹಾಗೂ ಪಾಂಡುರಂಗ ದೇವಾಲಯಗಳು ಮುಖ್ಯವಾದವು. ಕಾರ ಹುಣ್ಣಿಮೆಯಂದು ಬ್ರಹ್ಮದೇವರ ಜಾತ್ರೆ ಜರುಗುತ್ತದೆ. ಮೌನೇಶ್ವರ ಜಾತ್ರೆ, ವೀರಭದ್ರ ದೇವರ ಜಾತ್ರೆ, ಪಾಂಡುರಂಗನ ಜಾತ್ರೆ, ಚಮನಶಾವಲಿ ಉರಸುಗಳು ಇತರ ಉತ್ಸವಗಳು. ರೈಲ್ವೆ ನಿಲ್ದಾಣದಿಂದ ಊರಿಗೆ ಬರುವ ಮಾರ್ಗದಲ್ಲಿ ಶ್ರೀ ರಾಘವೇಂದ್ರಯತಿಗಳ ಮಠವಿದೆ.

ಹವಾಮಾನ[ಬದಲಾಯಿಸಿ]

ಇಲ್ಲಿಯ ಹವಾಮಾನ ಸಮ್ಮಿಶ್ರವಾಗಿದ್ದು ಮಳೆ ಸಾಧಾರಣವಾಗಿದೆ.

ವ್ಯವಸಾಯ ಮತ್ತು ಕಸುಬು[ಬದಲಾಯಿಸಿ]

ಹತ್ತಿ, ಜೋಳ, ಸೇಂಗ, ಅಕ್ಕಡಿಕಾಳುಗಳು ಇಲ್ಲಿಯ ಮುಖ್ಯ ಬೆಳೆಗಳು. ಈ ಊರಿಗೆ ಹತ್ತಿರದಲ್ಲಿರುವ ಕರಡಿಗುಡ್ಡದಲ್ಲಿ ಮನೆಕಟ್ಟುವ ಕಲ್ಲುಗಳೂ ಉರುವಲು ಕಟ್ಟಿಗೆಯೂ ದೊರೆಯುತ್ತವೆ. ಬಡಿಗತನ, ಕಮ್ಮಾರಿಕೆ, ನೇಕಾರಿಕೆ ಇಲ್ಲಿಯ ಮುಖ್ಯವಾದ ಕಸಬುಗಳು. ದೋತರ ಮತ್ತು ಸೀರೆಗಳ ನೇಯ್ಗೆ ಮುಖ್ಯವಾದದ್ದು. ಇಲ್ಲಿ ಹತ್ತಿ ಹಿಂಜುವ ಗಿರಣಿಗಳಿವೆ. ಹತ್ತಿ, ಅರಳೆ ಮತ್ತು ಹತ್ತಿಕಾಳುಗಳ ವ್ಯಾಪಾರ ನಡೆಯುತ್ತದೆ

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕರ್ಜಗಿ&oldid=690008" ಇಂದ ಪಡೆಯಲ್ಪಟ್ಟಿದೆ