ಕರೆನಿ ರಾಜ್ಯ
Kayah (Karenni )State ကယားပြည်နယ် | |
---|---|
Myanma transcription(s) | |
• Burmese | ka. ya: prany nai |
![]() Location of Kayah State in Myanmar | |
Country | ![]() |
Region | Southeast |
Capital | Loikaw |
ಸರ್ಕಾರ | |
• Chief Minister | Khin Maung Oo (Bu Yei)[೧] (USDP) |
• Legislature | Kayah State Hluttaw |
ಕ್ಷೇತ್ರಫಲ | |
• ಒಟ್ಟು | ೧೧,೭೩೧.೫ km೨ (೪,೫೨೯.೬ sq mi) |
ಜನಸಂಖ್ಯೆ | |
• ಒಟ್ಟು | ೨೮೬,೬೨೭ |
• ಸಾಂದ್ರತೆ | ೨೪/km೨ (೬೩/sq mi) |
Demographics | |
• Ethnicities | Kayah, Kayin, Padaung, Bamar, Shan, Pa-O |
• Religions | ಬೌದ್ಧ ಧರ್ಮ, Christianity, animism |
ಸಮಯ ವಲಯ | ಯುಟಿಸಿ+06:30 (MST) |
ಜಾಲತಾಣ | www |
ಕರೆನಿ ರಾಜ್ಯ: ಮಯನ್ಮಾರಿನ ಕಂತರವಾಡಿ, ಕೈಬೋಗ್ಯಿ ಮತ್ತು ಬಲಾಕ ರಾಜ್ಯಗಳಿಗಿದ್ದ ಒಟ್ಟು ಹೆಸರು. ಮಯನ್ಮಾರ್ ಬ್ರಿಟಿಷ್ ಭಾರತದ ಭಾಗವಾಗಿದ್ದಾಗ ಇವು ಷಾನ್ ರಾಜ್ಯಗಳ ಒಕ್ಕೂಟಕ್ಕೆ ದಕ್ಷಿಣದಲ್ಲಿ, ಬರ್ಮದ ಪುರ್ವಕ್ಕೆ, ಇದ್ದುವು. ೧೯೨೨ರಿಂದ ಇವು ಷಾನ್ ಒಕ್ಕೂಟದ ಕಮಿಷನರ ಆಡಳಿತಕ್ಕೆ ಒಳಪಟ್ಟಿದ್ದುವು.೧೯೪೭ರಲ್ಲಿ ಜಾರಿಗೆ ಬಂದ ಬರ್ಮೀ ಸಂವಿಧಾನದಲ್ಲಿ ಈ ಮೂರು ರಾಜ್ಯಗಳನ್ನು ಸೇರಿಸಿ ಕರೆನಿ ರಾಜ್ಯ ರಚಿಸಬೇಕೆಂದು ಘೋಷಿಸಲಾಯಿತು.೧೯೫೨ರಲ್ಲಿ ಮಾಂಗ್ ಪೈಯನ್ನೂ ಸೇರಿಸಿ ಈ ರಾಜ್ಯವನ್ನು ನಿರ್ಮಿಸಲಾಯಿತು. ಕಾಯಾ ರಾಜ್ಯವೆಂಬುದು ಇದರ ನೂತನ ನಾಮಧೇಯ. ರಾಜ್ಯದ ವಿಸ್ತೀರ್ಣ ೧೧,೬೭೦ ಚ.ಕಿಮೀ ಜನಸಂಖ್ಯೆ ಸುಮಾರು ೨,೫೯,೦೦೦ (೨೦೦೦). ಇದರ ರಾಜಧಾನಿ ಲೊಯ್ಕೊ. ಇಲ್ಲಿಯ ಮೌಚಿ ಎಂಬಲ್ಲಿ ಟಂಗ್ಸ್ಟನ್ (ವುಲ್ಫ್ರಾಂ) ಮತ್ತು ಸತು ದೊರಕುತ್ತವೆ. ಬತ್ತ, ಕಾಳುಗಳು, ತರಕಾರಿ, ಮೆಕ್ಕೆ ಜೋಳ ಮುಖ್ಯ ಬೆಳೆಗಳು. ಅರಗು ಹೇರಳವಾಗಿದೆ. ತೇಗದ ಮರದ ಕಾಡುಗಳೂ ಇವೆ. ಬರ್ಮೀ ಸಂಸತ್ತಿನಲ್ಲಿ ಇದರ ಚುನಾಯಿತ ಪ್ರತಿನಿಧಿಗಳಿದ್ದಾರೆ. ಈ ರಾಜ್ಯದ ಒಬ್ಬ ಮಂತ್ರಿಯೂ ಇದ್ದಾನೆ. ಇದರದು ಸ್ವಯಂ ಆಡಳಿತ ವ್ಯವಸ್ಥೆ.
ಉಲ್ಲೇಖಗಳು[ಬದಲಾಯಿಸಿ]
- ↑ "Division and State Administrations". Alternative Asean Network on Burma. 8 July 2011. Archived from the original on 25 ಡಿಸೆಂಬರ್ 2018. Retrieved 21 August 2011.
- ↑ Census Report. The 2014 Myanmar Population and Housing Census. Vol. 2. Naypyitaw: Ministry of Immigration and Population. May 2015. p. 17.