ಕರೆಂಪುಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರೆಂಪುಡಿ
CountryIndia
Stateಆಂಧ್ರ ಪ್ರದೇಶ
DistrictGuntur
MandalKarempudi
Population
 (2015)
 • Total೩೦,೦೦೦
Languages
 • Officialತೆಲುಗು
Time zoneUTC+5:30 (IST)
PIN
522614
Telephone code+91–8649
Lok Sabha constituencyNarasaraopet
Andhra Pradesh Legislature constituencyMacherla


ಕರೆಂಪುಡಿ: ಆಂಧ್ರಪ್ರದೇಶದಲ್ಲಿ ನಾಗಾರ್ಜುನಕೊಂಡದ ಆಗ್ನೇಯಕ್ಕೆ ಸು. ೫೨ ಕಿಮೀ ದೂರದಲ್ಲಿ ನಾಗುಲೇರು ನದಿಯ ದಡದಲ್ಲಿರುವ ನೆಲೆ.

ಐತಿಹಾಸಿಕ ನೆಲೆ[ಬದಲಾಯಿಸಿ]

ಆದಿಶಿಲಾಯುಗಕ್ಕೆ ಸೇರಿದ ಕಲ್ಲಿನಾಯುಧಗಳು ಇಲ್ಲಿ ದೊರಕಿವೆ. ಆಫ್ರಿಕದ ಓಲ್ಡೋವನ್ ಆಯುಧಗಳನ್ನು ಹೋಲುವ ಉಂಡೆಕಲ್ಲಿನಾಯುಧಗಳು ಇಲ್ಲಿ ಹೇರಳವಾಗಿದ್ದು ಅನಂತರದ ಕಾಲಕ್ಕೆ ಸೇರುವ ಅಬೆವಿಲಿಯೆನ್ ಮತ್ತು ಅಷ್ಯೂಲಿಯನ್ ಹಂತದ ಕೈಕೊಡಲಿಗಳೂ ಕ್ಲಾಕ್ಟೋನಿಯನ್ ಮತ್ತು ಲೆವಾಲ್ವಾಸಿಯನ್ ಸಂಸ್ಕೃತಿಗಳಿಗೆ ಸೇರುವ ಕಲ್ಲುಚಕ್ಕೆಗಳೂ ಅಲ್ಪಪ್ರಮಾಣದಲ್ಲಿವೆ. ನದೀಮಟ್ಟದಲ್ಲಿ ಕಂಡುಬರುವ ಪದರಗಳಲ್ಲಿ ಸಿಕ್ಕಿರುವ ಆಯುಧಗಳನ್ನು ಮಧ್ಯ ಪ್ಲಿಸ್ಟೊಸೀನ್ ಯುಗಕ್ಕೆ ನಿರ್ದೇಶಿಸಲು ಸಾಧ್ಯವಾಗುತ್ತದೆ. ಸೌಂದರರಾಜನ್ರ ಅಭಿಪ್ರಾಯದಂತೆ ಇಲ್ಲಿಯ ಒಂದು ನೆಲೆಯಲ್ಲಿ ಮಾತ್ರ ಉಂಡೆ ಕಲ್ಲಿನಾಯುಧಗಳು ಅಧಿಕ ಪ್ರಮಾಣದಲ್ಲಿದ್ದು ಕ್ರಮೇಣ ಕೈಗೊಡಲಿ ಹಂತದೆಡೆಗೆ ಸಾಗುತ್ತಿದ್ದುದರ ಸೂಚನೆ ಕಂಡುಬರುತ್ತದೆ. ಆದುದರಿಂದ ಒಂದು ಪ್ರದೇಶದಲ್ಲಿ ಈ ಸಂಸ್ಕೃತಿ ಹುಟ್ಟಿ , ಅದು ಸುಧಾರಣೆಗೊಂಡ ಮೇಲೆ ಇತರ ಪ್ರದೇಶಗಳಿಗೆ ಹಬ್ಬಿರ ಬೇಕೆಂದು ವಾದಿಸಲಾಗಿದೆ. ಎಂದರೆ ಆದಿಶಿಲಾಯುಗ ಮಾನವ ಒಂದೇ ಎಡೆಯಲ್ಲಿ ವಾಸಿಸುತ್ತಿದ್ದು ಅನಂತರ ನದೀದಂಡೆಗೆ ತನ್ನ ಕಾರ್ಯರಂಗವನ್ನು ವಿಸ್ತರಿಸಿದನೆಂದೂ ವಾದಿಸಿದಂತಾಗುತ್ತದೆ. ಆದರೆ ಈ ವಾದದಲ್ಲಿ ಹುರುಳಿಲ್ಲ. *