ವಿಷಯಕ್ಕೆ ಹೋಗು

ಕರೆಂಟ್ ಇವೆಂಟ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರೆಂಟ್ ಇವೆಂಟ್ಸ್ : ಡೆಹ್ರಾ ಡೂನಿನಿಂದ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ ಮಾಸಪತ್ರಿಕೆ. ಸ್ಥಾಪನೆ: 1955 ಮೇಜರ್ ಜನರಲ್ ಡಿ.ಕೆ.ಪಾಲಿಟ್ ಪ್ರಧಾನ ಸಂಪಾದಕ, ದೇವದತ್ ಸಂಪಾದಕ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಾಜಕೀಯ ಘಟನೆಗಳ ಸುದ್ದಿಗಳೇ ಅಲ್ಲದೆ ರಕ್ಷಣೆ, ವಿಜ್ಞಾನ, ಕಲೆ, ಕಾನೂನು, ವಾಣಿಜ್ಯ, ಚಿತ್ರ ಪ್ರಪಂಚ, ಕ್ರೀಡೆ, ಪುಸ್ತಕ ಪ್ರಪಂಚ ಮುಂತಾದ ವನ್ನು ಕುರಿತ ಪ್ರಚಲಿತ ವಿಚಾರಗಳಿಗೂ ಈ ಪತ್ರಿಕೆ ಮೀಸಲಾಗಿದೆ. ಸೇನಾ ಸಿಬ್ಬಂದಿಯ ಜನರಲ್ಲಿ ಈ ಪತ್ರಿಕೆಗೆ ಬಹಳ ಬೇಡಿಕೆಯುಂಟು. ಅಷ್ಟೇ ಅಲ್ಲ; ಆಡಳಿತಗಾರರು, ವಿಶಿಷ್ಟ ಉದ್ಯೋಗಾಕಾಂಕ್ಷಿಗಳು, ಬುದ್ಧಿಜೀವಿಗಳು-ಮುಂತಾದ ಎಲ್ಲರ ಅವಶ್ಯಕತೆಗಳನ್ನೂ ಇದು ಪುರೈಸುತ್ತದೆ. ಬಹುಶ್ರುತತ್ವವನ್ನು ಬೆಳಸಿಕೊಳ್ಳ ಲಿಚ್ಚಿಸುವವರಿಗೂ ನಾನಾ ಸ್ಪರ್ಧಾ ಪರೀಕ್ಷೆಗಳಿಗೆ ಅಭ್ಯರ್ಥಿಗಳಾಗುವವರಿಗೂ ಈ ಪತ್ರಿಕೆ ವಿಪುಲವಾದ ಸಾಮಗ್ರಿ ಯನ್ನೊದಗಿಸುತ್ತದೆ. [](ಎಚ್.ಎಸ್.ಎಚ್.)

ಉಲ್ಲೇಖಗಳು

[ಬದಲಾಯಿಸಿ]