ಕರಿಘಟ್ಟ
ಗೋಚರ
ಕರಿಘಟ್ಟ
Karigiri | |
---|---|
Temple | |
ದೇಶ | India |
ರಾಜ್ಯ | ಕರ್ನಾಟಕ |
ಜಿಲ್ಲೆ | ಮಂಡ್ಯ |
ಹತ್ತಿರದ ನಗರ | ಮೈಸೂರು |
ಕರಿಘಟ್ಟ ಒಂದು ಪ್ರೇಕ್ಷಣೀಯ ಸ್ಥಳ. ಬೆಟ್ಟದ ಮೇಲೆ ವೈಷ್ಣವ ದೇವಾಲಯವಿದೆ. ಇದು ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಶ್ರೀರಂಗಪಟ್ಟಣ ಆದ ನಂತರ ಸುಮಾರು ಮೂರು ಕಿ.ಮೀ. ದೂರದಲ್ಲಿ ಬಲಬದಿಗೆ ಇದೆ. ಇದೊಂದು ಸುಮಾರು ೩೦೦ ಅಡಿ ಎತ್ತರದ ಬೆಟ್ಟ. ಇದರಲ್ಲಿ ದರ್ಭೆ ಹುಲ್ಲು ತುಂಬ ಬೆಳೆಯುತ್ತದೆ. ಈ ಬೆಟ್ಟದ ತುದಿಯಲ್ಲಿ ಶ್ರೀನಿವಾಸ ದೇವರ ಒಂದು ಗುಡಿ ಇದೆ. ಇದರ ರಥ್ಸೋವವು ಫಾಲ್ಗುಣ ಶುಕ್ಮ ಹುಣ್ಣಿಮೆಯಂದು ನಡೆಯುತ್ತದೆ. ನಾಗರಹಾವು ಚಲನಚಿತ್ರದ ಬಾರೆ ಬಾರೆ ಚಂದದ ಚಲುವಿನ ತಾರೆ...... ಹಾಡಿನ ಚಿತ್ರೀಕರಣ ಅರ್ಧ ಇಲ್ಲಿಯೇ ಮಾಡಿರುತ್ತಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |