ಕರಗ ಪ್ರತಿಷ್ಠೆ

ವಿಕಿಪೀಡಿಯ ಇಂದ
Jump to navigation Jump to search

ಆಚರಣೆ[ಬದಲಾಯಿಸಿ]

ಮೊದಲು ನದಿ ತೀರದಲ್ಲಿ ಮಣ್ಣು (ಮರಳಲ್ಲಿ) ತಿಟ್ಟೆ ಮಾಡುತ್ತಾರೆ. ಆ ತಿಟ್ಟೆಯ ಮೇಲೆ ಬಿಳಿ ವಸ್ತ್ರ ಹಾಕಿ ಒಂದು ಮಣ್ಣಿನ ಪಾತ್ರೆಯಲ್ಲಿಟ್ಟು ಆಚೆಈಚೆ ಸ್ವಲ್ಪ ಅಗಲದಲ್ಲಿ ಬಲ ಮತ್ತು ಎಡಕ್ಕೆ ಎರಡು ತಾಮ್ರದ ಚೆಂಬು ಇಟ್ಟು ಅದರರೊಳಗೆ ನೀರು ಸ್ವಲ್ಪ ಹೊಯ್ದು ಒಂದು ರೂಪಾಯಿ ನಾಣ್ಯ ಹಾಕಬೇಕು. ಆಮೇಲೆ ಮೂರು ತೆಂಗಿನಕಾಯಿ ಇಟ್ಟು ಅದಕ್ಕೆ ಎರಡು ಅಡಿ ಉದ್ದದ ಮೂರು ಕೋಲು ಇಟ್ಟು ಅದಕ್ಕೆ ಕಹಿ ಬೇವು ಸೊಪ್ಪನ್ನು ಅದರ ಸುತ್ತಕಟ್ಟಿ ಅದಕ್ಕೆ ಹೂವಿನ ಅಲಂಕಾರ ಮಾಡಿ, ಅದರ ತುದಿಗೆ ನಿಂಬೆ ಹಣ್ಣನ್ನು ಇಡಬೇಕು. ಪ್ರತ್ಯೇಕವಾಗಿ ಎರಡು ಮಣ್ಣಿನ ಪಾತ್ರೆಗೆ ಮುಖವಾಡ ಇಟ್ಟು ಅದಕ್ಕೆ ನೂಲು ಕಟ್ಟಿ ಪೂಜೆ ಮಾಡಬೇಕು. ಪೂಜಾರಿಯು ಎಂಟು ಜನ ಹೆಂಗಸರನ್ನು ಪಕ್ಕದಲ್ಲಿ ನಿಲ್ಲಿಸುತ್ತಾರೆ. ಆ ಮೊದಲು ಸ್ತ್ರೀಯರು ನದಿಯಲ್ಲಿ ಹೋಗಿ ಸ್ನಾನ ಮಾಡಿ ಬಂದು ಸಿಧ್ಧ ಮಾಡಿದ ಕರಗದ ಮುಂದೆ ನಿಂತುಕೊಳ್ಳಬೇಕು. ಯಾರಿಗಾದರು ಹೆಂಗಸರಿಗೆ ದರ್ಶನ ಬರಬಹುದು. ಪೂಜಾರಿಗೆ ದರ್ಶನ ಬಂದು ಆ ಮೇಲೆ ಎಂಟು ಜನ ಹೆಂಗಸರನ್ನು ಆಯ್ಕೆ ಮಾಡುತ್ತಾರೆ. ಅವರನ್ನು ಸ್ನಾನ ಮಾಡಲು ಹೇಳಿ ಅವರಿಗೆ ಅರಶಿನದ ಬಟ್ಟೆ ಕೊಟ್ಟು ನಾಲ್ಕು ಜನರಿಗೂ ಕರಗವನ್ನು ಕೊಡುತ್ತಾರೆ.ಒಬ್ಬೊರಿಗೆ ಒಂದೊಂದು ಕರಗ, ಒಂದು ಶಕ್ತಿ ಕರಗ, ಎರಡು ಹೂ ಕರಗ, ಕತ್ತಿ ಕರಗ ಕೊಟ್ಟು ಅವರನ್ನು ಮೂರು ಸುತ್ತು ಬರಿಸಿ ದೇವರಿಗೆ ಪೂಜೆ ಮಾಡಿಸಲಾಗುತ್ತದೆ. ದೇವಿಗೆ ಪೂಜೆ ಮಾಡಿ ಬರುವಾಗ ಅವರೊಂದಿಗೆ ಎಲ್ಲಾ ಜನ ಒಟ್ಟು ಸೇರಿ ಬರುತ್ತಾರೆ. ಹೆಂಗಸರು ಕರಗದ ಹಾಡಿಗೆ ಲಯಬದ್ಧವಾಗಿ ನರ್ತಿಸುತ್ತಾರೆ. ನರ್ತನದ ಬಳಿಕವೂ ಕರಗ ಪ್ರತಿಷ್ಠಾನದಲ್ಲಿಗೆ ಬಂದು ದೇವಿಗೆ ಪೂಜೆಗೆ ಮರಳುತ್ತಾರೆ. ಕರಗ ಆಚರಣೆಯಾದ ನಂತರವೂ ಕರಗವನ್ನು ದೇವಸ್ಥಾನದಲ್ಲಿಟ್ಟು ಆ ದಿನಗಳಲ್ಲೂ ಪೂಜೆ ಮಾಡುತ್ತಾರೆ. ಮುಕ್ತಾಯದ ದಿನ ಸಂಜೆಯ ಹೊತ್ತಿಗೆ ಸ್ತ್ರೀಯರ ಕೈಯಲ್ಲಿ ಒಂದೊಂದು ಕರಗ ಕೊಟ್ಟು ಬಳಿಕೆ ಅವರಿಗೆ ಅರಶಿನದ ನೀರು ಹೊಯ್ಯುತ್ತಾರೆ. ಆ ಬಳಿಕ ಅವರು ದೇವಸ್ಥಾನಕ್ಕೆ ಮೂರು ಸುತ್ತು ಬರುತ್ತಾರೆ. ನಂತರ ಮನೆ ಮನೆಗೂ ಮೆರವಣಿಗೆ ಹೊಗುತ್ತಾರೆ. ಮನೆಗೆ ಕರಗ ಸಹಿತ ಮೆರವಣಿಗೆಯಲ್ಲಿ ಬರುವವರಿಗೆ ಮನೆಯವರು ಅರಶಿನದ ನೀರನ್ನು ಹೊಯ್ಯುತ್ತಾರೆ. ಕುಟುಂಬದವರೂ ಕೂಡ ಕರಗ ತಂದವರಿಗೆ ವಸ್ತ್ರವನ್ನು ಕೊಡುತ್ತಾರೆ. ಆ ನಂತರ ಕರಗ ಹಾಡಿನೊಂದಿಗೆ ನದಿಗೆ ತೆರಳುತ್ತಾರೆ.ಕರಗವನ್ನು ನದಿಗೆ ತೆಗೆದುಕೊಂಡು ಹೋಗಿ ಕರಗವನ್ನು ನೀರಿಗೆ ಬಿಡುವಾಗ ಕರಗದ್ದಲ್ಲಿದ್ದ ಹೂ,ಬೇವು, ಸೊಪ್ಪು ಮೊದಲಾದವುಗಳನ್ನು ನೀರಿಗೆ ಪ್ರತ್ಯೇಕವಾಗಿ ಬಿಡುತ್ತಾರೆ. ನಂತರ ಕರಗ ಹೊತ್ತು ತಂದ ಪುರುಷರು ಹಾಗೂ ಸ್ತ್ರೀಯರು ಸ್ನಾನ ಮಾಡುತ್ತಾರೆ. ಕರಗ ಪ್ರತಿಷ್ಠೆ ಮುಗಿದ ನಂತರ ಅರಶಿನದ ಮಿಶ್ರಿತ ಒಣ ಮೀನಿನಿಂದ ಮಾಡಿದ ಊಟವನ್ನು ಎಲ್ಲರಿಗೂ ಬಾಳೆ ಎಲೆಯಲ್ಲಿ ಹಂಚುತ್ತಾರೆ. ನಂತರ ದೇವಸ್ಥಾನಕ್ಕೆ ಮರಳಿ ಪೂಜೆ ಮಾಡಿ ಮನೆಗೆ ಮರಳುತ್ತಾರೆ. ಹೀಗೆ ಕರಗ ಪ್ರತಿಷ್ಠೆಯು ವರ್ಷಕ್ಕೆ ಒಮ್ಮೆ ನಡೆಯುತ್ತದೆ.[೧][೨]

ಸಮುದಾಯ[ಬದಲಾಯಿಸಿ]

  • ತಮಿಳರು

ಬಳಕೆ ವಸ್ತುಗಳು[ಬದಲಾಯಿಸಿ]

ಬಿಳಿ ವಸ್ತ್ರ, ಮಣ್ಣಿನ ಪಾತ್ರೆ, ತಾಮ್ರದ ಪಾತ್ರೆ, ಒಂದು ರೂಪಾಯಿ,ಎರಡು ಅಡಿ ಉದ್ದದ ಮೂರು ಕೋಲು, ಕಹಿ ಬೇವು ಸೊಪ್ಪು,ನಿಂಬೆ ಹಣ್ಣು, ತೆಂಗಿನಕಾಯಿ.[೩]

ಉಲ್ಲೇಖಗಳು[ಬದಲಾಯಿಸಿ]

  1. ಪುಸ್ತಕದ ಹೆಸರು-ಸತ್ಯ ಜಾನಪದ, ಜನಪದ ಬದುಕು ಮತ್ತು ಸ್ಥಳೀಯ ಆಚರಣೆಗಳು-೨೦೧೭ ಪುಟ ಸಂಖ್ಯೆ:೧೦೬-೧೦೮ ಸಂಪಾದಕರು:ಪೂವಪ್ಪ ಕಾಣಿಯೂರು ಪ್ರಕಾಶಕರು:ಕನ್ನಡ ಸಂಘ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ
  2. ಕರ್ನಾಟಕ ಜನಪದ ಕಲೆಗಳು;ಕೋ.ಚೆನ್ನಬಸಪ್ಪ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
  3. https://www.karnataka.com/festivals/karaga-festival/