ಕಯಾಕಿಂಗ್ (ಸಾಲಿಗ್ರಾಮ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಯಾಕಿಂಗ್, ಸಾಲಿಗ್ರಾಮ
ಕಯಾಕಿಂಗ್, ಸಾಲಿಗ್ರಾಮ

ಕಯಾಕಿಂಗ್ (ಸಾಲಿಗ್ರಾಮ) ಕರ್ನಾಟಕದ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಎನ್‍ಎಚ್೬೬ ನಿಂದ ಸುಮಾರು ೨ ಕಿಮೀ ದೂರದಲ್ಲಿರುವ ಪಾರಂಪಳ್ಳಿ ಸೇತುವೆಯ ಬಳಿ ಇದೆ. ಕರ್ನಾಟಕದ ಅತೀ ದಟ್ಟವಾದ ಮ್ಯಾಂಗ್ರೋವ್ ಹೊಂದಿದ ಪ್ರದೇಶ ಇದಾಗಿದೆ. ಸಾಲಿಗ್ರಾಮದ ಪಾರಂಪಳ್ಳಿ ಸೇತುವೆ ಬಳಿಯಿಂದ ಆರಂಭವಾಗುವ ಕಯಾಕಿಂಗ್, ಸೇತುವೆಯ ಕೆಳಗಿನಿಂದ ಹಿನ್ನೀರಿನಲ್ಲಿನ ದಟ್ಟ ಕಾಂಡ್ಲಾ ವನದ ನಡುವೆ ಸಂಚರಿಸಲಿದೆ. ಕಯಾಕಿಂಗ್‍ನಲ್ಲಿ ಕಾಂಡ್ಲಾ ವನಗಳ ನಡುವೆ ಸುಮಾರು ೧ ಗಂಟೆಯ ಕಾಲ ಪ್ರಯಾಣಿಸಬಹುದು.[೧] ಕಾಂಡ್ಲಾ ವನದ ಮಧ್ಯೆದಲ್ಲಿ ಕಯಾಕಿಂಗ್ ಯಾನ ಆರಂಭಿಸಿರುವುದು ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲು. ಪ್ರವಾಸಿಗರು ಇಲ್ಲಿನ ತರಬೇತುದಾರರಿಂದ ೫ ರಿಂದ ೧೦ ನಿಮಿಷದಲ್ಲಿ ಕಯಾಕಿಂಗ್ ನಡೆಸುವ ಕೌಶಲ್ಯಗಳನ್ನು ಕಲಿಯಲು ಅಗತ್ಯ ತರಬೇತಿ ಪಡೆದುಕೊಂಡು ತಾವೇ ಸ್ವತಃ ದೋಣಿಗಳನ್ನು ನಡೆಸಬಹುದು.[೨] ಸಾಯಂಕಾಲದ ಸಮಯದಲ್ಲಿ ಹೊರ ಪ್ರದೇಶದ ವಲಸೆ ಹಕ್ಕಿಗಳ ವೀಕ್ಷಣೆಯೂ ಲಭ್ಯವಿದೆ.

ಹಿನ್ನೆಲೆ[ಬದಲಾಯಿಸಿ]

ಸ್ಥಳೀಯ ಕೋಡಿಯವರಾದ ಮಿಥುನ್ ಕುಮಾರ್ ಮೆಂಡನ್ ಮತ್ತು ಲೋಕೇಶ್ ಮೆಂಡನ್ ಎಂಬವರು ಸಾಲಿಗ್ರಾಮದ ಪಾರಂಪಳ್ಳಿ ಸೇತುವೆ ಬಳಿ, ಸೀತಾನದಿಯ ಹಿನ್ನೀರಿನ ಕಾಂಡ್ಲಾ ವನದಲ್ಲಿ ಕಯಾಕಿಂಗ್ ಚಟುವಟಿಕೆಗಳನ್ನು ಆರಂಭಿದರು.[೩] ಪ್ರವಾಸೋದ್ಯಮ ಇದರ ಮುಖ್ಯ ಉದ್ದೇಶವಾಗಿತ್ತು. ೭ ಲಕ್ಷ ರೂಪಾಯಿ ಹೂಡಿಕೆ ಮಾಡಿ ಎಂಟು ಕಯಾಕ್ಸ್ ಅನ್ನು ಕೊಳ್ಳುವುದರೊಂದಿಗೆ ಇದು ಪ್ರಾರಂಭಗೊಂಡಿತು. 'ಸೈಲ್ಸ್ ಮತ್ತು ಮೋರ್ ಅಡ್ವೆಂಚರ್ಸ್' ಎಂದ ಬ್ರಾಂಡ್ ನೇಮ್ ಅನ್ನು ಇದಕ್ಕೆ ಇಡಲಾಗಿದೆ.[೪] ಮಿಥುನ್ ಅವರು, "ಆಸಕ್ತರು ಈಗಾಗಲೇ ರಾಜ್ಯಗಳಲ್ಲಿ ಅನೇಕ ಕಯಾಕಿಂಗ್ ತಾಣಗಳನ್ನು ಸ್ಥಾಪಿಸಿದ್ದಾರೆ, ಆದರೆ ಎರಡೂ ಬದಿಯಲ್ಲಿ ಮ್ಯಾಂಗ್ರೋವ್‌ಗಳಿರುವ ಈ ವಿಸ್ತರಣೆಯು ವಿಶಿಷ್ಟವಾಗಿದೆ. ಸೂರ್ಯನ ಕಿರಣಗಳು ಮ್ಯಾಂಗ್ರೋವ್‌ಗಳ ಮೂಲಕ ತೂರಿಕೊಂಡಾಗ ನೋಡಲು ಅದ್ಭುತವಾಗಿರುತ್ತದೆ ಮತ್ತು ಪಕ್ಷಿಗಳ ಚಿಲಿಪಿಲಿಯ ಅನುಭವ ಸ್ಮರಣೀಯವಾಗಿದೆ. ಕಯಾಕಿಂಗ್ ಮಾಡಲು ಪರಿಣತರಾಗಲು ಮೊದಲ ೧೫ ನಿಮಿಷಗಳ ಕಾಲ ನೀಡಲಾದ ಸೂಚನೆಗಳನ್ನು ಅನುಸರಿಸುವ ಅಗತ್ಯವಿದೆ, ಹಿಂದಿರುಗುವ ಹೊತ್ತಿಗೆ ಅನೇಕರು ಕಯಾಕಿಂಗ್‍ನ ತಂತ್ರವನ್ನು ಕರಗತ ಮಾಡಿಕೊಳ್ಳುತ್ತಾರೆ ಎಂದು ನಾವು ಗಮನಿಸಿದ್ದೇವೆ. ಎಲ್ಲಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ ಮತ್ತು ಲೈಫ್ ಜಾಕೆಟ್ ಧರಿಸುವುದು ಕಡ್ಡಾಯವಾಗಿದೆ" ಎಂದು ಅವರು ಹೇಳಿದರು.[೫]

ದರ ಹಾಗೂ ವ್ಯವಸ್ಥೆ[ಬದಲಾಯಿಸಿ]

ದರ ಪ್ರತಿ ವ್ಯಕ್ತಿಗೆ ೩೦೦ ರೂಪಾಯಿಗಳು(೨೦೨೨ರ ಸಮಯದಲ್ಲಿ). 'ಒಂದು ಗಂಟೆಗೆ ೩೦೦ ರೂಪಾಯಿಯ ಬದಲು ಅರ್ಧ ಗಂಟೆಗೆ ೧೫೦ ರೂಪಾಯಿಗಳನ್ನಿಟ್ಟರೆ ಆಗದೇ' ಎಂಬ ಪ್ರವಾಸಿಗರೊಬ್ಬರ ಪ್ರಶ್ನೆಗೆ, ಅಲ್ಲಿನ ತರಬೇತುದಾರನ ಉತ್ತರ 'ಮ್ಯಾಂಗ್ರೋವ್ ಪ್ರದೇಶವು ಸ್ವಲ್ಪ ದೂರದಲ್ಲಿದೆ, ತಲುಪಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಪ್ರತಿ ಗುಂಪಿನೊಂದಿಗೆ ಬೋಧಕರನ್ನು ಕಳುಹಿಸಬೇಕಾಗಿರುವುದರಿಂದ ಸಣ್ಣ ಸವಾರಿಗಳು ಕಾರ್ಯಸಾಧ್ಯವಲ್ಲ' ಎಂಬುದಾಗಿದೆ[೬]. ಹತ್ತು ವರ್ಷದ ಒಳಗಿನವರಿಗೆ ಪ್ರಯಾಣ ಉಚಿತವಾಗಿರುತ್ತದೆ. ಬಟ್ಟೆ ಬದಲಾಯಿಸಲು, ಕಾಲುಗಳನ್ನು ತೊಳೆಯಲು ಅಥವಾ ಕಯಾಕಿಂಗ್‌ಗೆ ಹೋದಾಗ ತಮ್ಮ ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ತಾತ್ಕಾಲಿಕವಾದ ಶೆಡ್‍ನ ವ್ಯವಸ್ಥೆ ಇದೆ.

ಹೆಚ್ಚಿನ ವಿವರಗಳು[ಬದಲಾಯಿಸಿ]

ಅಗತ್ಯವಿದ್ದರೆ ಕಯಾಕಿಂಗ್ ಮಾಡುವಾಗ ದೋಣಿಯಲ್ಲಿ ತರಬೇತುದಾರರು ಜೊತೆಗಿರುತ್ತಾರೆ.ಪ್ರತಿದಿನ ಬೆಳಗ್ಗೆ ೭ ರಿಂದ ಸಂಜೆ ೭ ರವರೆಗೆ ಕಯಾಕಿಂಗ್ ಚಟುವಟಿಕೆ ನಡೆಯಲಿದೆ. ಇಲ್ಲಿನ ಹಿನ್ನೀರಿನಲ್ಲಿ ಅಪಾಯಕಾರಿಯಾಗುವಷ್ಟು ಆಳ ಇಲ್ಲದಿರುವುರಿಂದ ಎಲ್ಲಾ ವಯೋಮಾನದವರು ಕಯಾಕಿಂಗ್ ಮಾಡಬಹುದಾಗಿದೆ.[೭] ಎಲ್ಲಾ ರೀತಿಯ ಸುರಕ್ಷಾ ಕ್ರಮಗಳು, ಲೈಫ್ ಜಾಕೆಟ್‍ಗಳು ಹಾಗೂ ನುರಿತ ತರಬೇತುದಾರರು ಜೊತೆಯಲ್ಲಿರುತ್ತಾರೆ. ಹಿರಿಯರಿಗೆ ಅನುಕೂಲವಾಗುವಂತೆ ದೊಡ್ಡ ದೋಣಿಗಳ ವ್ಯವಸ್ಥೆಯೂ ಇದೆ.[೮][೯]


ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಕಯಾಕಿಂಗ್ ಅನುಭವವನ್ನು ಯೋಜಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು[ಬದಲಾಯಿಸಿ]

ಹೆಚ್ಚಿನ ಉಬ್ಬರವಿಳಿತ ಮತ್ತು ಕಡಿಮೆ ಉಬ್ಬರವಿಳಿತ[ಬದಲಾಯಿಸಿ]

ಹೆಚ್ಚಿನ ಉಬ್ಬರವಿಳಿತದ ಸಮಯದಲ್ಲಿ ಮಾತ್ರ ನೀರು ಮ್ಯಾಂಗ್ರೋವ್ ಒಳಗೆ ತಲುಪಲು ಸಾಧ್ಯವಾಗುತ್ತದೆ. ಹೆಚ್ಚಿನ ಉಬ್ಬರವಿಳಿತದ ಸಮಯದಲ್ಲಿ ಕಾರ್ಯಗತಗೊಳಿಸಿದರೆ ಸವಾರನ ಸವಾರಿ ಉತ್ತಮವಾಗಿರುತ್ತದೆ. ಉಬ್ಬರವಿಳಿತದ ಸಮಯಗಳು ಕಾಲಕಾಲಕ್ಕೆ ಬದಲಾಗುತ್ತವೆ ಮತ್ತು ಊಹಿಸಲು ಮತ್ತು ಯೋಜಿಸಲು ಸ್ಥಳೀಯರ ಹೊರತಾಗಿ, ಇತರರಿಗೆ ಕಷ್ಟವಾಗಬಹುದು.[೧೦] ಉತ್ತಮ ಅನುಭವಕ್ಕಾಗಿ ಆಪರೇಟರ್‌ನನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಒಬ್ಬರು ಅಥವಾ ಇಬ್ಬರು[ಬದಲಾಯಿಸಿ]

ಒಬ್ಬ ವ್ಯಕ್ತಿಯನ್ನು ಕೂರಿಸುವ ಕಯಾಕ್‍ಗಳಿವೆ ಮತ್ತು ಇಬ್ಬರು ಜನರನ್ನು ಕೂರಿಸುವ ಕಯಾಕ್ಸ್‌ಗಳಿವೆ. ಸಂಪೂರ್ಣ ನಿಯಂತ್ರಣ ಮತ್ತು ಅನುಭವವನ್ನು ಹೊಂದಿದ್ದರೆ ಸೋಲೋ ಕಯಾಕ್ ಅನ್ನು ಬಳಸಬಹುದು. ಇಲ್ಲದಿದ್ದರೆ ಡಬಲ್ ಕಯಾಕ್‌ ಬಳಸಬಹುದು, ಅಲ್ಲಿ ಇನ್ನೊಬ್ಬ ವ್ಯಕ್ತಿ ಅಥವಾ ಬೋಧಕರೊಂದಿಗೆ ಸಂಚಾರ ಮಾಡಬೇಕಾಗುತ್ತದೆ.[೧೧] ಆದರೆ ಏಕವ್ಯಕ್ತಿಯಲ್ಲಿ ಸವಾರ ಸಂಪೂರ್ಣ ಜವಾಬ್ದಾರರಾಗಿರುತ್ತಾನೆ ಮತ್ತು ಹೆಚ್ಚು ಕಯಾಕ್ ಮಾಡಬೇಕಾಗುತ್ತದೆ.[೧೨]

ವಾಹನ ನಿಲುಗಡೆ[ಬದಲಾಯಿಸಿ]

ಸಾಲಿಗ್ರಾಮ ಕಯಾಕಿಂಗ್ ಪ್ರಾರಂಭದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಇಲ್ಲಿ ಕಾರುಗಳು ಮತ್ತು ಮೋಟಾರ್ ಸೈಕಲ್‌ಗಳನ್ನು ನಿಲ್ಲಿಸಬಹುದು.


ಉಲ್ಲೇಖಗಳು[ಬದಲಾಯಿಸಿ]

  1. https://kannada.travel/article-about-saligrama-sita-river-backwater-kayaking/
  2. https://www.prajavani.net/video/prajavani-special/kayaking-in-udupi-saligrama-special-in-backwater-tourism-story-905045.html
  3. https://www.newindianexpress.com/good-news/2022/jan/23/on-a-kayakin-the-middleof-nature-in-karnatakas-udupi-2410272.html
  4. "ಆರ್ಕೈವ್ ನಕಲು". Archived from the original on 2023-04-08. Retrieved 2023-04-08.
  5. https://timesofindia.indiatimes.com/city/mangaluru/kayaking-in-mangroves-introduced-at-saligrama/articleshow/88530017.cms
  6. https://www.enidhi.net/2022/02/kayaking-under-mangroves-in-saligrama.html
  7. https://kannada.news18.com/news/lifestyle/try-some-kayaking-in-the-thick-mangroves-in-parampalli-ssd-699503.html
  8. https://www.deccanherald.com/state/mangaluru/kayaking-amid-thick-mangroves-in-parampalli-1069972.html
  9. https://www.thehindu.com/news/national/karnataka/backwater-kayaking-amid-mangroves-beckon-tourists-near-saligrama/article38023649.ece
  10. https://www.youtube.com/watch?v=mxMQSCiS0So
  11. https://www.daijiworld.com/news/newsDisplay?newsID=905791
  12. "ಆರ್ಕೈವ್ ನಕಲು". Archived from the original on 2023-03-25. Retrieved 2023-03-25.