ಕಮಲ್ ಸಾಗರ್
ಕಮಲ್ ಸಾಗರ್ | |
---|---|
Born | ೧೬ ಜುಲೈ ೧೯೬೯ |
Nationality | ಭಾರತೀಯ |
Alma mater | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್‌ಪುರ |
Occupation(s) | ನಿರ್ದೇಶಕರು, ಟೋಟಲ್ ಎನ್ವಿರಾನ್ಮೆಂಟ್ |
Spouse | ಶಿಬಾನಿ ಸಾಗರ್ |
ಕಮಲ್ ಸಾಗರ್ (ಜನನ ೧೬ ಜುಲೈ, ೧೯೬೯) ಒಬ್ಬ ಭಾರತೀಯ ವಾಸ್ತುಶಿಲ್ಪಿ, ವಿನ್ಯಾಸಕ, ರಿಯಲ್ ಎಸ್ಟೇಟ್ ಡೆವಲಪರ್, ರೆಸ್ಟೋರೆಂಟ್ ಮತ್ತು ಸಂಗೀತ ಉತ್ಸಾಹಿ. ಭಾರತದ ಬೆಂಗಳೂರು ಮೂಲದ ಅವರು ಟೋಟಲ್ ಎನ್ವಿರಾನ್ಮೆಂಟ್ ಬಿಲ್ಡಿಂಗ್ ಸಿಸ್ಟಮ್ಸ್ ಮತ್ತು ಟೋಟಲ್ ಎನ್ವಿರಾನ್ಮೆಂಟ್ ಹಾಸ್ಪಿಟಾಲಿಟಿ (ವಿಂಡ್‌ಮಿಲ್ಸ್ ಕ್ರಾಫ್ಟ್‌ವರ್ಕ್ಸ್ ಮತ್ತು ಊಟಾ) ದ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.[೧]
ಆರಂಭಿಕ ಜೀವನ
[ಬದಲಾಯಿಸಿ]ಕಮಲ್ ೧೯೯೨ ರಲ್ಲಿ ಐಐಟಿ ಖರಗ್‌ಪುರದಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದರು.[೨] ಅಮೆರಿಕದ ಕೆಂಟುಕಿಯ ಲೆಕ್ಸಿಂಗ್ಟನ್‍ನಲ್ಲಿ ಓಮ್ನಿ ಆರ್ಕಿಟೆಕ್ಟ್ಸ್‌ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ನಂತರ, ಅವರು ಭಾರತಕ್ಕೆ ಮರಳಿದರು. ಯುವ ವಾಸ್ತುಶಿಲ್ಪಿಯಾಗಿ, ಪುಣೆಯ ಹಡಪ್ಸರ್ ಮತ್ತು ಥೂರ್‌ನಲ್ಲಿ ಪೂನಾವಾಲಾ ಸ್ಟಡ್ ಫಾರ್ಮ್‌ಗಳ ವಿನ್ಯಾಸ ಮತ್ತು ನಿರ್ಮಾಣವನ್ನು ಅವರಿಗೆ ವಹಿಸಲಾಯಿತು. ಈ ಯೋಜನೆಗಾಗಿ, ಅವರು ತೆರೆದ ಇಟ್ಟಿಗೆಗಳನ್ನು ವ್ಯಾಪಕವಾಗಿ ಬಳಸಿದರು. ಪ್ರತಿ ವೈಯಕ್ತಿಕ ಇಟ್ಟಿಗೆಯ ಗುಣಲಕ್ಷಣವನ್ನು ಹೊರತರಲು ಉಕ್ಕಿನ ಸ್ಪೇಸರ್‌ಗಳ ಸಹಾಯದಿಂದ, ಅವರ ಪ್ರಮುಖ ವಿನ್ಯಾಸ ತತ್ವಕ್ಕೆ ಅನುಗುಣವಾಗಿ ವಿಶೇಷ ತಂತ್ರವನ್ನು ಅಭಿವೃದ್ಧಿಪಡಿಸಿದರು. ಜನವರಿ ೨೭, ೧೯೯೫ ರಂದು ಏಷ್ಯನ್ ರೇಸಿಂಗ್ ಫೆಡರೇಶನ್ ಆಯೋಜಿಸಿದ್ದ ಏಷ್ಯನ್ ರೇಸಿಂಗ್ ಸಮ್ಮೇಳನದ ಸಮಯದಲ್ಲಿ ಅವರು ಕೇವಲ ೮ ತಿಂಗಳ ಅವಧಿಯಲ್ಲಿ ಇದನ್ನು ನಿರ್ಮಿಸಿದರು.[೩]
ವೃತ್ತಿ
[ಬದಲಾಯಿಸಿ]೧೯೯೫ ರಲ್ಲಿ, ಕಮಲ್ ಬೆಂಗಳೂರಿಗೆ ಸ್ಥಳಾಂತರಗೊಂಡರು. ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ಅಧ್ಯಾಯದ ಆರಂಭವನ್ನು ಗುರುತಿಸಿತು. ಅವರು ತಮ್ಮದೇ ಆದ ವಾಸ್ತುಶಿಲ್ಪ ಅಭ್ಯಾಸವನ್ನು ಪ್ರಾರಂಭಿಸಿದರು. ಮೊದಲಿಗೆ ಅವರ ಸ್ವಂತ ಹೆಸರಿನಲ್ಲಿ, ಮತ್ತು ನಂತರ ಶಿಬಾನಿ & ಕಮಲ್ ಆರ್ಕಿಟೆಕ್ಟ್ಸ್ ಎಂದು ಬದಲಿಸಿದರು. ೧೯೯೬ ರಲ್ಲಿ, ಒಂದು ಮಲಗುವ ಕೋಣೆಯ ಅಪಾರ್ಟ್ಮೆಂಟ್‌ಗಾಗಿ ಹುಡುಕಾಟದಲ್ಲಿ, ದೊಡ್ಡ ಪ್ರಮಾಣದ ವಸತಿ ಯೋಜನೆಗಳ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ಅವರು ಅರಿತುಕೊಂಡರು ಮತ್ತು ಈ ಪ್ರದೇಶದಲ್ಲಿ ವ್ಯತ್ಯಾಸವನ್ನು ಮಾಡಲು ಅಪಾರ ಅವಕಾಶವನ್ನು ಕಂಡುಕೊಂಡರು. ಡೆವಲಪರ್‌ಗಳು ತಮ್ಮ ವಿನ್ಯಾಸ ಕಲ್ಪನೆಗಳನ್ನು ಒಪ್ಪಿಕೊಳ್ಳುವಂತೆ ಮಾಡುವ ಪ್ರಯತ್ನದಲ್ಲಿ ಹಲವಾರು ವಿಫಲ ಪ್ರಯತ್ನಗಳ ನಂತರ, ಅವರು ತಮ್ಮ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ಮಿಸುವ ಕಾರ್ಯವನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಅವರು ತಮ್ಮ ವಿನ್ಯಾಸಗಳನ್ನು ನಿರ್ಮಿಸಲು ಟೋಟಲ್ ಎನ್ವಿರಾನ್ಮೆಂಟ್ ಎಂಬ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿ ಕಂಪನಿಯನ್ನು ಸ್ಥಾಪಿಸಿದರು.[೪][೫] ಟೋಟಲ್ ಎನ್ವಿರಾನ್ಮೆಂಟ್ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಾದ್ಯಂತ ೪.೫ ಮಿಲಿಯನ್ ಚದರ ಅಡಿಗಳಿಗಿಂತ ಹೆಚ್ಚು ವೈಯಕ್ತಿಕವಾಗಿ ಕಸ್ಟಮೈಸ್ ಮಾಡಿದ ಮತ್ತು ಸುಸಜ್ಜಿತ ಸ್ಥಳವನ್ನು, ಹಾಗೂ ಮನೆಗಳನ್ನು ನಿರ್ಮಿಸಿದೆ. ಯುಎಸ್‍ನ ಡಲ್ಲಾಸ್-ಫೋರ್ಟ್ ವರ್ತ್ ಮೆಟ್ರೋ ಪ್ರದೇಶದ ಫ್ರಿಸ್ಕೋದಲ್ಲಿರುವ ಟೇಪ್ಸ್ಟ್ರಿ ೫೬ ಎಕರೆ, ೧೨೧ ಮನೆ ಇರುವ ವಸತಿ ಸಮುದಾಯವಾಗಿದೆ - ಇದು ಕಂಪನಿಯ ಮೊದಲ ಅಂತರರಾಷ್ಟ್ರೀಯ ಪ್ರಯತ್ನವಾಗಿದೆ.[೬][೭]
ಕಮಲ್ ಅವರ ಕೆಲಸವು ಯಾವಾಗಲೂ ಸಂಗೀತ, ಕಲೆ ಮತ್ತು ಪ್ರಕೃತಿಯಿಂದ ಸ್ಫೂರ್ತಿ ಪಡೆದಿದೆ. ಅವರ ವಾಸ್ತುಶಿಲ್ಪದ ಸ್ಫೂರ್ತಿಗಳಲ್ಲಿ ಫ್ರಾಂಕ್ ಲಾಯ್ಡ್ ರೈಟ್, ಬಾರ್ಟ್ ಪ್ರಿನ್ಸ್, ಬ್ರೂಸ್ ಗೋಫ್, ಅಲ್ವಾರ್ ಆಲ್ಟೊ, ಮೀಸ್ ವ್ಯಾನ್ ಡಿ ರೋಹೆ ಮತ್ತು ತಡಾವೊ ಆಂಡೊ ಸೇರಿದ್ದಾರೆ. ಅವರು ಎನಿಡ್ ಬ್ಲೈಟನ್, ಅಲೆಕ್ಸಾಂಡರ್ ಡುಮಾಸ್, ಪಿಂಕ್ ಫ್ಲಾಯ್ಡ್, ಅಹ್ಮದ್ ಜಮಾಲ್, ಬೆನ್ನಿ ಗುಡ್ಮನ್, ಸ್ಟಾನ್ ಗೆಟ್ಜ್, ಲಾಸ್ ಪರಾಗ್ವೆಯೋಸ್ ಮುಂತಾದ ವೈವಿಧ್ಯಮಯ ಮೂಲಗಳಿಂದ ಸ್ಫೂರ್ತಿ ಪಡೆಯುತ್ತಾರೆ.[೮][೯][೧೦]
೨೦೧೨ ರಲ್ಲಿ, ಅವರು ವಿಂಡ್‌ಮಿಲ್ಸ್ ಕ್ರಾಫ್ಟ್‌ವರ್ಕ್ಸ್ ಎಂಬ ಜಾಝ್ ಥಿಯೇಟರ್,[೧೧][೧೨][೧೩] ಮೈಕ್ರೋಬ್ರೂವರಿ ಮತ್ತು ರೆಸ್ಟೋರೆಂಟ್ ಅನ್ನು ಸ್ಥಾಪಿಸಿದರು. ಅಲ್ಲಿ ಪ್ರೇಕ್ಷಕರು ಪ್ರಪಂಚದಾದ್ಯಂತದ ಪ್ರತಿಭೆಗಳನ್ನು ಹತ್ತಿರದಿಂದ ಅನುಭವಿಸುತ್ತಾರೆ. ಬಿಯರ್ ಮತ್ತು ಆಹಾರದ ಸೆಟ್ಟಿಂಗ್‍ನಲ್ಲಿ ಉತ್ತಮ ಧ್ವನಿಯ ಗುಣಮಟ್ಟವನ್ನು ಪಡೆಯುತ್ತಾರೆ. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ವಿಂಡ್‌ಮಿಲ್ಸ್ ಕ್ರಾಫ್ಟ್‌ವರ್ಕ್ಸ್ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಲೈವ್ ಮ್ಯೂಸಿಕ್ ಸ್ಥಳವಾಗಿ ತನ್ನನ್ನು ಸ್ಥಾಪಿಸಿಕೊಂಡಿತು.[೧೪] ಇದು ಜಾಝ್, ಬ್ಲೂಸ್, ರಾಕ್, ಜಾನಪದ, ಬ್ಲೂಗ್ರಾಸ್, ಭಾರತೀಯ ಶಾಸ್ತ್ರೀಯ ಸಂಗೀತ, ಭಾರತೀಯ ಜಾನಪದ ಸಂಗೀತ ಮತ್ತು ಲ್ಯಾಟಿನ್‍ವರೆಗೆ ವೈವಿಧ್ಯಮಯ ಸಂಗೀತವನ್ನು ತಂದಿತು.[೧೫][೧][೧೬]
ಕೆಲಸ
[ಬದಲಾಯಿಸಿ]ವಿನ್ಯಾಸ ತತ್ವಶಾಸ್ತ್ರ
[ಬದಲಾಯಿಸಿ]ಕಮಲ್ ಅವರ ಕೆಲಸವು ಪ್ರಕೃತಿಯನ್ನು ಅಪ್ಪಿಕೊಳ್ಳುವ ಕರಕುಶಲ ಮನೆಗಳ ಮೂಲಕ ಬೆಚ್ಚಗಿನ ಜೀವನ ಸ್ಥಳಗಳನ್ನು ರಚಿಸಲು ನೈಸರ್ಗಿಕ ವಸ್ತುಗಳನ್ನು ಬಳಸುವುದರ ಮೇಲೆ ಕೇಂದ್ರೀಕರಿಸಿದೆ.[೧೭] ಅವರ ಜನ-ಕೇಂದ್ರಿತ ವಿನ್ಯಾಸ ತತ್ವಶಾಸ್ತ್ರ ಮತ್ತು ಪ್ರತಿ ಮನೆಯೊಂದಿಗೆ ಉದ್ಯಾನವನ್ನು ಒದಗಿಸುವ ಕಲ್ಪನೆಯು ಟೋಟಲ್ ಎನ್ವಿರಾನ್ಮೆಂಟ್‍ನ ಉತ್ಪನ್ನ ಕೊಡುಗೆಗಳನ್ನು ವ್ಯಾಖ್ಯಾನಿಸಿದೆ.[೧೮] ಇತ್ತೀಚಿನ ವರ್ಷಗಳಲ್ಲಿ, ಅವರು ಈ ಉದ್ಯಾನಗಳಿಗೆ ವಿವಿಧ ಸ್ವರೂಪಗಳನ್ನು ಒದಗಿಸಲು ಪ್ರಯತ್ನಿಸಿದರು, ಹೆಚ್ಚಿನ ಕೋಣೆಗಳು ಈ ಉದ್ಯಾನಗಳಿಗೆ ದೃಶ್ಯ ಪ್ರವೇಶವನ್ನು ಹೊಂದಿವೆ.[೪]
"ನಾವು ನಮ್ಮ ವಿನ್ಯಾಸ ಕೌಶಲ್ಯಗಳನ್ನು ಅತ್ಯುತ್ತಮ ಕರಕುಶಲತೆಯೊಂದಿಗೆ ಸಂಯೋಜಿಸಿ ಅತ್ಯುನ್ನತ ಗುಣಮಟ್ಟದ ಮನೆಗಳನ್ನು ನಿರ್ಮಿಸುತ್ತೇವೆ, ವಿಶ್ವದ ಅತ್ಯಂತ ಸುಂದರವಾದ ಮನೆಗಳನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಯಾವಾಗಲೂ ಶ್ರಮಿಸುತ್ತೇವೆ" ಎಂದು ಕಮಲ್ ಸಾಗರ್ ಹೇಳುತ್ತಾರೆ.[೬]
ಗ್ರಾಕಕರಿಗೆ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಿದ ಮನೆಗಳನ್ನು ಉತ್ತಮ ಪ್ರಮಾಣದಲ್ಲಿ ತಲುಪಿಸಲು ಟೋಟಲ್ ಎನ್ವಿರಾನ್ಮೆಂಟ್ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಅವರ ಮಾಲೀಕತ್ವದ ಪ್ಲಾಟ್‍ಫಾರ್ಮ್ "ಇಡಿಸೈನ್" ಮನೆ ಖರೀದಿದಾರರಿಗೆ ತಮ್ಮ ಫ್ಲೋರ್ ಪ್ಲಾನ್ ಮತ್ತು ಪೀಠೋಪಕರಣ ಲೇಔಟ್‍ಗಳು, ವೈಶಿಷ್ಟ್ಯ ವರ್ಧನೆಗಳು, ವಿನ್ಯಾಸ ಸ್ಟುಡಿಯೋ, ಕ್ರಿಯಾತ್ಮಕ ಯೋಜನೆ ಮತ್ತು ಹೆಚ್ಚಿನದನ್ನು ಆನ್‍ಲೈನ್, 3 ಡಿ ಸ್ವರೂಪದಲ್ಲಿ ಕಸ್ಟಮೈಸ್ ಮಾಡಲು ಆಯ್ಕೆಗಳನ್ನು ನೀಡುತ್ತದೆ.[೧೯][೫]
ಯೋಜನೆಗಳು
[ಬದಲಾಯಿಸಿ]- ೧೯೯೫ ಪೂನವಾಲ್ಲಾ ಸ್ಟಡ್ ಫಾರ್ಮ್ಸ್, ಹಡಪ್ಸರ್, ಪುಣೆ, ಭಾರತ.
- ೧೯೯೯ ಅಯಾನ್ ಐಡಿಯಾ ಕಾರ್ಪೊರೇಟ್ ಕ್ಯಾಂಪಸ್,[೨೦] ವೈಟ್‌ಫೀಲ್ಡ್, ಬೆಂಗಳೂರು, ಭಾರತ.
- ೨೦೦೦ ಬೌಗೆನ್ವಿಲ್ಲಾ, ವಿಭೂತಿಪುರ, ಬೆಂಗಳೂರು, ಭಾರತ.
- ೨೦೦೦ ಗ್ರೀನ್ ಈಸ್ ದಿ ಕಲರ್, ಬಿಟಿಎಂ ಲೇಔಟ್, ಬೆಂಗಳೂರು, ಭಾರತ.
- ೨೦೦೧ ದಿ ಗುಡ್ ಅರ್ಥ್,[೨೧] ಹಲಸೂರು, ಬೆಂಗಳೂರು, ಭಾರತ.
- ೨೦೦೧ ವೆಬ್ ಇಂಡಿಯಾ ಲಿಮಿಟೆಡ್ - ಕಾರ್ಪೊರೇಟ್ ಕಚೇರಿ ಮತ್ತು ಕಾರ್ಯಾಗಾರಗಳು,[೪] ಬೊಮ್ಮಸಂದ್ರ, ಬೆಂಗಳೂರು, ಭಾರತ.
- ೨೦೦೪ ಶೈನ್ ಆನ್, ರಹತ್ ಬಾಗ್, ಬೆಂಗಳೂರು, ಭಾರತ.
- ೨೦೦೪ ಟೈಮ್, ಇಂದಿರಾನಗರ, ಬೆಂಗಳೂರು, ಭಾರತ.
- ೨೦೦೬ ಫೂಟ್‍ಪ್ರಿಂಟ್ಸ್, ಇಂದಿರಾನಗರ, ಬೆಂಗಳೂರು, ಭಾರತ.
- ೨೦೦೬, ನವೀನ್ ಧನಂಜಯ್ ನಿವಾಸ, ಹೆನ್ನೂರ್ ರಸ್ತೆ, ಬೆಂಗಳೂರು, ಭಾರತ.
- ೨೦೦೮ ರೈನ್‍ಡ್ರಾಪ್ಸ್ ಕೀಪ್ ಫಾಲಿಂಗ್ ಆನ್ ಮೈ ಹೆಡ್, ಸರ್ಜಾಪುರ ರಸ್ತೆ, ಬೆಂಗಳೂರು, ಭಾರತ.
- ೨೦೦೯ ಆರೆಂಜ್ ಬ್ಲಾಸಮ್ ಸ್ಪೆಷಲ್, ಉದಯ್ ಬಾಗ್, ಪುಣೆ, ಭಾರತ.
- ೨೦೧೦ ಗ್ರೀನ್‍ಸ್ಲೀವ್ಸ್, ಸಿಂಗಸಂದ್ರ, ಬೆಂಗಳೂರು, ಭಾರತ.
- ೨೦೧೫, ವಿಂಡ್‌ಮಿಲ್ಸ್ ಆಫ್ ಯುವರ್ ಮೈಂಡ್,[೨೨] ವೈಟ್‌ಫೀಲ್ಡ್, ಬೆಂಗಳೂರು, ಭಾರತ.
- ೨೦೧೫ ದಿ ಮ್ಯಾಜಿಕ್ ಫಾರ್‌ಅವೇ ಟ್ರೀ, ಹಂತ ೧, ಕನಕಪುರ ರಸ್ತೆ, ಬೆಂಗಳೂರು, ಭಾರತ.
ಪ್ರಶಸ್ತಿಗಳು ಮತ್ತು ಮನ್ನಣೆ
[ಬದಲಾಯಿಸಿ]ಕಮಲ್ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ವಾಸ್ತುಶಿಲ್ಪ ವಿನ್ಯಾಸ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಹಲವಾರು ಯೋಜನೆಗಳು ವಿಶ್ವ ವಾಸ್ತುಶಿಲ್ಪ ಉತ್ಸವದಲ್ಲಿ ಅಂತಿಮ ಹಂತವನ್ನು ತಲುಪಿತ್ತು.
ಕ್ರಮ ಸಂಖ್ಯೆ | ಪ್ರಶಸ್ತಿ | ಸಂಸ್ಥೆ | ವರ್ಷ | ಯೋಜನೆ |
---|---|---|---|---|
೧ | ಅತ್ಯುತ್ತಮ ವಸತಿ ವಾಸ್ತುಶಿಲ್ಪ | ಜೆಕೆ ಸಿಮೆಂಟ್ಸ್ - ವರ್ಷದ ವಾಸ್ತುಶಿಲ್ಪಿ ಪ್ರಶಸ್ತಿಗಳು | ೨೦೦೩ | ದಿ ಗುಡ್ ಅರ್ಥ್, ಬೆಂಗಳೂರು |
೨ | ಅಪಾರ್ಟ್ಮೆಂಟ್ ಯೋಜನೆಗಾಗಿ ಹ್ಯಾಬಿಟಾಟ್ ಪ್ರಶಸ್ತಿ | ಆರ್ಕಿಟೆಕ್ಚರ್+ಡಿಸೈನ್ ಸ್ಪೆಕ್ಟ್ರಮ್ ಫೌಂಡೇಶನ್ | ೨೦೦೩ | ದಿ ಗುಡ್ ಅರ್ಥ್, ಬೆಂಗಳೂರು |
೩ | ಅಪಾರ್ಟ್ಮೆಂಟ್ ಯೋಜನೆಗಾಗಿ ಹ್ಯಾಬಿಟಾಟ್ ಪ್ರಶಸ್ತಿ | ಆರ್ಕಿಟೆಕ್ಚರ್+ಡಿಸೈನ್ ಸ್ಪೆಕ್ಟ್ರಮ್ ಫೌಂಡೇಶನ್ | ೨೦೦೫ | ಟೈಮ್, ಬೆಂಗಳೂರು |
೪ | ಅತ್ಯುತ್ತಮ ವಸತಿ ಅಭಿವೃದ್ಧಿ | ಸಿಎನ್‍ಬಿಸಿ ಅರೇಬಿಯಾ | ೨೦೦೯ | ವಿಂಡ್‌ಮಿಲ್ಸ್ ಆಫ್ ಯುವರ್ ಮೈಂಡ್, ಬೆಂಗಳೂರು |
೫ | ಅತ್ಯುತ್ತಮ ವಸತಿ ವಾಸ್ತುಶಿಲ್ಪ | ಸಿಎನ್‍ಬಿಸಿ ಅರೇಬಿಯಾ | ೨೦೦೯ | ವಿಂಡ್‌ಮಿಲ್ಸ್ ಆಫ್ ಯುವರ್ ಮೈಂಡ್, ಬೆಂಗಳೂರು |
೬ | ಅತ್ಯುತ್ತಮ ನವೀನ ವಿನ್ಯಾಸ | ಕ್ರೆಡಾಯ್ ಬೆಂಗಳೂರು | ೨೦೧೩ | ವಿಂಡ್‌ಮಿಲ್ಸ್ ಆಫ್ ಯುವರ್ ಮೈಂಡ್, ಬೆಂಗಳೂರು |
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Drink, Listen, Browse". Rohin Dharmakumar, Forbes India. forbesindia.com. 26 October 2012. Archived from the original on 20 June 2015. Retrieved 22 July 2015.
- ↑ "Total Architecture: Different Kind of Builders". Rohin Dharmakumar, Forbes India. forbesindia.com. 29 April 2011. Archived from the original on 2 March 2019. Retrieved 22 July 2015.
- ↑ "Total Focus, Absolute Intent". Subroto Bagchi. forbesindia.com. 10 October 2009. Archived from the original on 1 June 2015. Retrieved 22 July 2015.
- ↑ ೪.೦ ೪.೧ ೪.೨ "Bringing Nature Home" (PDF). Apurva Bose Dutta. apurvabose.com. 2 April 2012. Archived (PDF) from the original on 15 December 2017. Retrieved 22 July 2015.
- ↑ ೫.೦ ೫.೧ Dharmakumar, Rohin (July 24, 2020). "The Interview: Total Environment's Kamal Sagar on his 25-year mission to build the Apple of real estate". The Ken.
- ↑ ೬.೦ ೬.೧ "Total Environment, World's Largest Builder of Custom-designed Homes, Launches $250 Million Project 'Tapestry' at Frisco, Texas". www.businesswire.com (in ಇಂಗ್ಲಿಷ್). 2024-05-17. Retrieved 2024-05-19.
- ↑ "Tapestry in Frisco: art, community and green living are behind this luxury development". Local Profile (in ಇಂಗ್ಲಿಷ್). 2021-10-25. Retrieved 2024-05-15.
- ↑ "Playing across genre lines". The Hindu. thehindu.com. 11 December 2014. Archived from the original on 13 December 2019. Retrieved 22 July 2015.
- ↑ "Hamlet: Method and madness". TIMES NEWS NETWORK. timesofindia.com. 17 October 2015. Archived from the original on 30 November 2018. Retrieved 18 October 2015.
- ↑ "LIVE STREAMING PLANNED - City Becomes a Stage for Bard's Globe Theatre". Divya Shekhar, The Economic Times. timesofindia.com. 15 October 2015. Archived from the original on 5 March 2016. Retrieved 18 October 2015.
- ↑ "A devoted fan, a legendary pianist and all that jazz". Khushali P Madhwani, Bangalore Mirror Bureau. bangaloremirror.com. 5 July 2014. Archived from the original on 28 October 2016. Retrieved 22 July 2015.
- ↑ "How Jazz Legend Ahmad Jamal Wowed Bengaluru". Sunil Sampat, Rolling Stone India. rollingstoneindia.com. 6 July 2014. Archived from the original on 27 May 2015. Retrieved 22 July 2015.
- ↑ "Jamal comes to town". Susanna Chandy, Rolling Stone India. The New Indian Express. 4 July 2014. Archived from the original on 23 July 2015. Retrieved 22 July 2015.
- ↑ "How Bengaluru Architect Kamal Sagar Convinced Jazz Legend Ahmad Jamal To Perform In India". Lalitha Suhasini, Rolling Stone India. rollingstoneindia.com. 26 June 2014. Archived from the original on 27 May 2015. Retrieved 22 July 2015.
- ↑ "Have a jazzy time at the Total Environment Jazz Festival". Times News Network. timesofindia.indiatimes.com. 25 November 2014. Archived from the original on 21 December 2014. Retrieved 22 July 2015.
- ↑ "Sway to crossover jazz tunes". TIMES NEWS NETWORK. timesofindia.com. 30 December 2015. Archived from the original on 16 January 2016. Retrieved 30 December 2015.
- ↑ "Personalise Your Space". Deepika Mital, Times of India. timesofindia.com. 27 March 2010. Retrieved 14 July 2015.
- ↑ Dharmakumar, Rohin (February 2, 2023). "Picking principles over convenience | Podcast". The Ken.
- ↑ "Customizing Homes". Sujit John. Times of India. 7 September 2011. Archived from the original on 25 April 2024. Retrieved 24 July 2015.
- ↑ "How to bend it like Beckham in work space design". Utkal Mohanty. DNA. 5 February 2011. Archived from the original on 23 July 2015. Retrieved 23 July 2015.
- ↑ "Total Elegance Intent". Shrabonti Bagchi. telegraphindia.com. 24 August 2008. Archived from the original on 17 November 2009. Retrieved 22 July 2015.
- ↑ "The million buck home in Bangalore". Gargi Gupta. rediff.com. 16 June 2007. Archived from the original on 24 September 2015. Retrieved 23 July 2015.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಟೋಟಲ್ ಎನ್ವಿರಾನ್ಮೆಂಟ್ ಜಾಝ್ ಫೆಸ್ಟಿವಲ್
- ಪ್ರಕೃತಿಯೊಂದಿಗೆ ಕಮಲ್ ಸಾಗರ್ Archived 2015-09-23 ವೇಬ್ಯಾಕ್ ಮೆಷಿನ್ ನಲ್ಲಿ.
- ಸಂದರ್ಶನ: ಕಮಲ್ ಸಾಗರ್, ಟೋಟಲ್ ಎನ್ವಿರಾನ್ಮೆಂಟ್, ೨೦೧೩
- ಕಾರ್ಯಕಾರಿ ಮಂಡಳಿ: ಕ್ರೆಡಾಯ್ ಬೆಂಗಳೂರು
- ಭಾರತದ ಕೈಗೆಟುಕುವ ನಗರಗಳಲ್ಲಿ ನೆಸ್ಲೆ
- ಕಮಲ್ ಸಾಗರ್, ಟೋಟಲ್ ಎನ್ವಿರಾನ್ಮೆಂಟ್
- ನಾನು ಮೆಟ್ರೋ ಮಾರ್ಗಗಳನ್ನು ನೆಲಸಮಗೊಳಿಸುತ್ತೇನೆ ಮತ್ತು ಅವುಗಳನ್ನು ಸ್ಮಾರ್ಟ್ ವಿನ್ಯಾಸದೊಂದಿಗೆ ಪುನರ್ನಿರ್ಮಿಸುತ್ತೇನೆ - ಕಮಲ್ ಸಾಗರ್, ಟೋಟಲ್ ಎನ್ವಿರಾನ್ಮೆಂಟ್ ಬಿಲ್ಡಿಂಗ್ ಸಿಸ್ಟಮ್ಸ್ ಸಿಇಒ