ಕಮಲಪ್ರೀತ್ ಕೌರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕಮಲಪ್ರೀತ್ ಕೌರ್ ಬಾಲ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತ
ಜನನ (1996-03-04) ೪ ಮಾರ್ಚ್ ೧೯೯೬ (ವಯಸ್ಸು ೨೮)
ಕಬರ್ ವಾಲಾ, ಶ್ರೀ ಮುಕ್ತಸರ್ ಸಾಹಿಬ್, ಪಂಜಾಬ್, ಭಾರತ[೧]
Sport
ದೇಶ ಭಾರತ
ಕ್ರೀಡೆಟ್ರ್ಯಾಕ್ ಅಂಡ್ ಫೀಲ್ಡ್
ಸ್ಪರ್ಧೆಗಳು(ಗಳು)ಗುಂಡು ಎಸೆತ
ತರಬೇತುದಾರರುರಾಖಿ ತ್ಯಾಗಿ[೨]
Achievements and titles
ವೈಯಕ್ತಿಕ ಪರಮಶ್ರೇಷ್ಠ೬೬.೫೯ ಮೀ (೨೦೨೧) ಎನ್‌ಆರ್

ಕಮಲಪ್ರೀತ್ ಕೌರ್ (ಜನನ ೪ ಮಾರ್ಚ್ ೧೯೯೬) ಇವರು ಪಂಜಾಬ್‌ ಮೂಲದ ಭಾರತೀಯ ಅಥ್ಲೀಟ್. ಚಕ್ರ ಎಸೆತದಲ್ಲಿ ೬೫ ಮೀಟರ್ ದೂರದ ಗೆರೆಯನ್ನು ದಾಟಿಸಿದ ಮೊದಲ ಭಾರತೀಯ ಮಹಿಳೆ. ರಾಹುಲ್ ದ್ರಾವಿಡ್ ಅಥ್ಲೀಟ್ ಮೆಂಟರ್‌ಶಿಪ್ ಕಾರ್ಯಕ್ರಮದ ಮೂಲಕ ಇವರನ್ನು ಗೋಸ್ಪೋರ್ಟ್ಸ್ ಫೌಂಡೇಶನ್ [೩] [೪] ಬೆಂಬಲಿಸುತ್ತದೆ. ಇವರು ಟೋಕಿಯೋ ೨೦೨೦ ರಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಚಕ್ರ ಎಸೆತದಲ್ಲಿ ೬ ನೇ ಸ್ಥಾನ ಗಳಿಸಿದರು.

ಕೌರ್ ಅವರು ಚಕ್ರ ಎಸೆತದಲ್ಲಿ ೬೫.೦೬ ಮೀ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಈ ಮೂಲಕ ಟೋಕಿಯೊದಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. [೫] [೬] [೭] [೮] [೯] ೨೧ ಜೂನ್ ೨೦೨೧ ರಂದು ಪಟಿಯಾಲದ ಎನ್‌ಐ‌ಎಸ್ ನಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-೪ ನಲ್ಲಿ ಅವರು ತಮ್ಮ ದಾಖಲೆಯನ್ನು ೬೬.೫೯ ಮೀ ಗೆ ವಿಸ್ತರಿಸಿದರು.[೧೦]

ಡೋಪಿಂಗ್ ನಿಯಮ ಉಲ್ಲಂಘನೆಗಾಗಿ ಎ‌ಐ‌ಯುಯು ಇವರನ್ನು ೧೨ ನೇ ಅಕ್ಟೋಬರ್ ೨೦೨೨ ರಂದು ಮೂರು ವರ್ಷಗಳ ಅವಧಿಗೆ ಕ್ರಿಡೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಯಿತು. [೧೧]

ಬಾಲ್ಯ ಮತ್ತು ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ಕಮಲ್‌ಪ್ರೀತ್ ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಮಾಲೌಟ್ ಎಂಬ ಹಳ್ಳಿಯ ಕಬರ್ ವಾಲಾದಿಂದ ಬಂದವರು. ಇವರು ತಮ್ಮ ದೈಹಿಕ ಶಿಕ್ಷಣ ತರಬೇತುದಾರನ ಒತ್ತಾಯದ ಮೇರೆಗೆ ೨೦೧೨ ರಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದರು ಮತ್ತು ಮೊದಲ ರಾಜ್ಯ ಕೂಟದಲ್ಲಿ ಇವರು ನಾಲ್ಕನೇ ಸ್ಥಾನ ಪಡೆದರು. ಕೌರ್ ಅವರು ೨೦೧೪ ರಲ್ಲಿ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದರು. ತಮ್ಮ ಹಳ್ಳಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಕೇಂದ್ರದಲ್ಲಿ ಆರಂಭಿಕ ತರಬೇತಿಯನ್ನು ಪಡೆಯಲು ಪ್ರಾರಂಭಿಸಿದರು. ಅವರ ಕಠಿಣ ಅಭ್ಯಾಸ ಮತ್ತು ನೈಸರ್ಗಿಕ ಸಾಮರ್ಥ್ಯವು ಶೀಘ್ರದಲ್ಲೇ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿತು. ಇದರಿಂದ ಇವರು ೨೦೧೬ ರಲ್ಲಿ ಅಂಡರ್ - ೧೮ ಮತ್ತು ಅಂಡರ್ - ೨೦ ಯ ರಾಷ್ಟ್ರೀಯ ಚಾಂಪಿಯನ್ ಆದರು. ನಂತರ ೨೦೧೭ ರಲ್ಲಿ ಇವರು ೨೯ ನೇ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಆರನೇ ಸ್ಥಾನ ಪಡೆದರು.

ಪಂದ್ಯಾವಳಿ ಮತ್ತು ಪದಕಗಳು[ಬದಲಾಯಿಸಿ]

೨೦೧೯ ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇವರು ಐದನೇ ಸ್ಥಾನ ಪಡೆದರು. ೨೦೧೯ ರ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ [೧೨] ೬೦.೨೫ ಮೀ ಎಸೆಯುವ ಮೂಲಕ ಚಿನ್ನವನ್ನು ಪಡೆದರು. ೨೪ ನೇ ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಕ್ರ ಎಸೆತದಲ್ಲಿ ೬೫ ಮೀ ದೂರ ಎಸೆಯುವ ಮೂಲಕ ದಾಖಲೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಟಿಯಾಲದಲ್ಲಿ ನಡೆದ ೨೪ ನೇ ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ೬೫.೦೬ ಮೀ ದೂರ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಮುರಿದು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. [೧೩]

ವೈಯಕ್ತಿಕ ಜೀವನ[ಬದಲಾಯಿಸಿ]

ಕಮಲಪ್ರೀತ್ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರು ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಓದಿದ್ದರು. ಇವರು ಸೀಮಾ ಪೂನಿಯಾಳನ್ನು ತನ್ನ ಆರಾಧ್ಯ ದೈವವಾಗಿ ನೋಡುತ್ತಾರೆ ಮತ್ತು ಪ್ರಸ್ತುತ ರಾಖಿ ತ್ಯಾಗಿ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಾರೆ. ತಾನು ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ ಮತ್ತು ಭವಿಷ್ಯದಲ್ಲಿ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಭಾಗವಹಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. [೧೪]

ಅಂತರಾಷ್ಟ್ರೀಯ ಸ್ಪರ್ಧೆಗಳು[ಬದಲಾಯಿಸಿ]

ವರ್ಷ ಪಂದ್ಯ ಸ್ಥಳ ಸ್ಥಾನ ಫಲಿತಾಂಶ ಶರಾ
Representing  ಭಾರತ
೨೦೨೧ ೨೦೨೦ ಬೇಸಿಗೆ ಒಲಿಂಪಿಕ್ಸ್ ಜಪಾನ್ ರಾಷ್ಟ್ರೀಯ ಕ್ರೀಡಾಂಗಣ, ಜಪಾನ್ ೬ ನೇ ಚಕ್ರ ಎಸೆತ ೬೪.೦೦[೧೫]

ಉಲ್ಲೇಖಗಳು[ಬದಲಾಯಿಸಿ]

  1. "Kamalpreet Kaur". Olympics. Retrieved 1 August 2021.
  2. Tridib Baparnash (20 July 2021). "Coach yet to get accreditation, Kamalpreet eyes 69m in Tokyo". The Times of India. Retrieved 31 July 2021.
  3. "Kamalpreet sets sights on Tokyo". Hindustan Times (in ಇಂಗ್ಲಿಷ್). 2021-05-06. Retrieved 2021-07-31.
  4. Gupta, Amit. "Interview: Discus thrower Kamalpreet Kaur on her journey to Olympics, dream to play cricket and more". Scroll.in (in ಅಮೆರಿಕನ್ ಇಂಗ್ಲಿಷ್). Retrieved 2021-07-31.
  5. "Kamalpreet Kaur breaks national record in women's discus throw to seal Tokyo Olympics berth". India Today (in ಇಂಗ್ಲಿಷ್). March 19, 2021. Retrieved 2021-07-29.
  6. "Kamalpreet Kaur qualifies for Tokyo Olympics, breaks national record in women's discus throw". The Times of India. 19 May 2021. Retrieved 28 May 2021.
  7. "Who Is Kamalpreet Kaur? - India's Latest Discus Throw Sensation". Samrat Chakraborty. Olympics.com. 20 March 2021. Retrieved 28 May 2021.
  8. Amsan, Andrew (20 March 2021). "Kamalpreet Kaur lights up final day with record-breaking discus throw". The Indian Express. Retrieved 28 May 2021.
  9. "Kamalpreet Kaur". World Athletics. Retrieved 2021-05-29.
  10. "Discus Thrower Kamalpreet Kaur Breaks Her Own National Record at Indian Grand Prix IV". June 21, 2021. Retrieved July 29, 2021.
  11. "Kamalpreet Kaur banned for three years - Explained". ESPN (in ಇಂಗ್ಲಿಷ್). 2022-10-12. Retrieved 2022-10-12.
  12. Pratyush Raj (Mar 15, 2019). "Federation Cup: Kamalpreet overcomes back pain to win gold | More sports News - Times of India". The Times of India (in ಇಂಗ್ಲಿಷ್). Retrieved 2021-07-31.
  13. "Kamalpreet Kaur breaks national record in women's discus throw to seal Tokyo Olympics berth". India Today (in ಇಂಗ್ಲಿಷ್). March 19, 2021. Retrieved 2021-07-31.
  14. Jaspreet Sahni (1 August 2021). "Tokyo Olympics: When Kamalpreet was throwing the discus to enter the final, Rakhi Tyagi was coaching her from Patiala". The Times of India. Retrieved 1 August 2021.
  15. "Kamalpreet Kaur First Indian To Qualify For Finals In Discus Throw". abcFRY (in ಇಂಗ್ಲಿಷ್). Archived from the original on 2023-02-14. Retrieved 2023-10-15.