ಕಬ್ಬಿಣ ಯುಗದ ಭಾರತ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಕಬ್ಬಿಣ ಯುಗದ ಭಾರತ ಭಾರತೀಯ ಉಪಖಂಡದಲ್ಲಿನ ಕಬ್ಬಿಣ ಯುಗ, ಮತ್ತು ಇದು, ಸಿಂಧೂ ಕಣಿವೆಯ ಸಂಪ್ರದಾಯದ ಕೊನೆಯ ಹಂತ ಎಂದು ಪರಿಚಿತವಾಗಿರುವ, ಉತ್ತರಾರ್ಧದ ಹರಪ್ಪನ್ (ಸ್ಮಶಾನ ಎಚ್) ಸಂಸ್ಕೃತಿಯ ನಂತರ ಬರುತ್ತದೆ. ಬೂದುಬಣ್ಣದ ಸಾಮಾನುಗಳ ಸಂಸ್ಕೃತಿ (ಕ್ರಿ.ಪೂ ೧೧೦೦ ರಿಂದ ೩೫೦) ಮತ್ತು ಉತ್ತರ ಕಪ್ಪು ನಯಗೊಳಿಸಿದ ಸಾಮಾನುಗಳು (ಕ್ರಿ.ಪೂ ೭೦೦ ರಿಂದ ೨೦೦) ಕಬ್ಬಿಣ ಯುಗದ ಮುಖ್ಯ ಪುರಾತತ್ವ ಸಂಸ್ಕೃತಿಗಳು. ಸುಮಾರು ಕ್ರಿ.ಪೂ. ೧೦೦೦ರ ಹಲ್ಲೂರ್, ಕರ್ನಾಟಕ ಮತ್ತು ಆದಿಚನಲ್ಲೂರು, ತಮಿಳುನಾಡು ದಕ್ಷಿಣ ಭಾರತದಲ್ಲಿನ ಅತ್ಯಂತ ಮುಂಚಿನ ಕಬ್ಬಿಣ ಯುಗದ ಸ್ಥಳಗಳಾಗಿವೆ.