ವಿಷಯಕ್ಕೆ ಹೋಗು

ಆದಿಚನಲ್ಲೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅದಿಚನಲ್ಲೂರು ತಮಿಳು ನಾಡು ರಾಜ್ಯದ ಟುಟಿಕೋರಿನ್ ಜಿಲ್ಲೆಯ ಒಂದು ಪಟ್ಟಣ. ಇದು ಒಂದು ಪುರಾತತ್ವ ಕೇಂದ್ರ. ಇದು ತಾಮ್ರಪರ್ಣಿ ನದಿಯ ದಡದಲ್ಲಿದೆ. ಇಲ್ಲಿ ೧೮೯೯ ರಲ್ಲಿ ಪುರಾತತ್ವ ಇಲಾಖೆಯ ರೇ ಎಂಬವರು ನಡೆಸಿದ ಉತ್ಖನನದಲ್ಲಿ ಹಾಗೂ ನಂತರದ ಉತ್ಖನನದಲ್ಲಿ ಇತಿಹಾಸಪೂರ್ವ ಕಾಲದ ಅಂದರೆ ಸುಮಾರು ೩೮೦೦ ವರ್ಷಗಳಷ್ಟು ಹಳೆಯದಾದ ಅಸ್ಥಿಪಂಜರಗಳು ದೊರೆತಿವೆ.ಇದರೊಂದಿಗೆ ಕತ್ತಿ, ಗುರಾಣಿ,ಚೂರಿ, ಸುತ್ತಿಗೆ ಮುಂತಾದ ಕಬ್ಬಿಣದ ವಸ್ತುಗಳೂ, ಚಿನ್ನದ,ಹಿತ್ತಾಳೆ]ಯ ವಸ್ತುಗಳೂ ದೊರೆತಿವೆ. ರೇ ಅವರ ಅಭಿಪ್ರಾಯದಂತೆ ಈ ಪ್ರದೇಶ ಪಾಂಡ್ಯರ ಕಾಲದ ಒಂದು ಪಟ್ಟಣವಾಗಿತ್ತು.

ಪುರಾತತ್ವ ಉತ್ಖನನಗಳು

[ಬದಲಾಯಿಸಿ]

೨೦೦೪ರಲ್ಲಿ, ಸುಮಾರು ೩೮೦೦ ವರ್ಷಗಳ ಹಳೆಯದಾದ ಹಲವು ಅಸ್ಥಿಪಂಜರಗಳು ಸಮಾಧಿಯಲ್ಲಿ ಕಂಡುಬಂದಿದ್ದವು.ಇಲ್ಲಿ ೧೬೦ಕ್ಕೂ ಹೆಚ್ಚು ಸಮಾಧಿಗಳು ಕಂಡುಬಂದಿದ್ದವು.ಆ ಸಮಾಧಿಗಳ ಮೇಲೆ ಕೆಲ ಬರವಣಿಗೆಯು ಇತ್ತು ಎಂದು ಪುರಾತತ್ತ್ವಜ್ಞರು ಹೇಳಲಾಗಿದೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]