ಶ್ಲೇಷ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಫ ಇಂದ ಪುನರ್ನಿರ್ದೇಶಿತ)

ಶ್ಲೇಷ್ಮವು ಸಸ್ತನಿಗಳ ಲೋಳೆಪೊರೆಗಳಿಂದ ಸ್ರವಿಸಲ್ಪಟ್ಟ ಒಂದು ದ್ರವ. ಇದರ ವ್ಯಾಖ್ಯಾನವು ಉಸಿರಾಟದ ವ್ಯವಸ್ಥೆಯಿಂದ ಉತ್ಪಾದಿಸಲ್ಪಟ್ಟ ಲೋಳೆಗೆ, ಮತ್ತು ಮೂಗಿನ ನಾಸಿಕ ನಾಳಗಳಿಂದ ಬಂದ ಲೋಳೆಯನ್ನು ಹೊರತುಪಡಿಸಿ, ಮತ್ತು ವಿಶೇಷವಾಗಿ ಕೆಮ್ಮಿನಿಂದ ಹೊರಹಾಕಲ್ಪಟ್ಟ ಲೋಳೆಗೆ ಸೀಮಿತವಾಗಿದೆ. ಶ್ಲೇಷ್ಮವು ಮೂಲಭೂತವಾಗಿ ಜಲ ಆಧಾರಿತ ಜೆಲ್ ಆಗಿದೆ ಮತ್ತು ಗ್ಲೈಕೊಪ್ರೋಟೀನ್‍ಗಳು, ಇಮ್ಯುನೊಗ್ಲಾಬ್ಯುಲಿನ್‍ಗಳು, ಮೇದಸ್ಸು ಮತ್ತು ಇತರ ವಸ್ತುಗಳನ್ನು ಹೊಂದಿರುತ್ತದೆ. ಇದರ ರಚನಾಂಶಗಳು ವಾಯುಗುಣ, ತಳಿಶಾಸ್ತ್ರ ಮತ್ತು ಪ್ರತಿರೋಧಕ ವ್ಯವಸ್ಥೆಯ ಸ್ಥಿತಿಯನ್ನು ಅವಲಂಬಿಸಿ ಬದಲಾಗುತ್ತವೆ. ಘಟಕಗಳ ಮೇಲೆ ಅವಲಂಬಿಸಿ ಇದರ ಬಣ್ಣವು ಪಾರದರ್ಶಕದಿಂದ ತಿಳಿ ಅಥವಾ ಗಾಢ ಹಳದಿ ಮತ್ತು ಹಸಿರಾಗಿ, ತಿಳಿಯಿಂದ ಗಾಢ ಕಂದು ಬಣ್ಣವಾಗಿ, ಮತ್ತು ಗಾಢ ಬೂದು ಬಣ್ಣದವರೆಗೆ ಬದಲಾಗಬಹುದು.

ಶ್ಲೇಷ್ಮವು ಲೋಳೆಗಿಂತ ಹೆಚ್ಚಾಗಿ ರೋಗಕ್ಕೆ ಸಂಬಂಧಿಸಿದೆ ಮತ್ತು ಇದನ್ನು ದೇಹದಿಂದ ಹೊರಹಾಕಲು ವ್ಯಕ್ತಿಗೆ ಕಷ್ಟಕರವಾಗಬಹುದು. ಶ್ಲೇಷ್ಮವು ರೋಗ ಮತ್ತು ಊತದ ಅವಧಿಯಲ್ಲಿ ಗಾಳಿದಾರಿಯಲ್ಲಿನ ರಸದಂಥ ಸ್ರಾವ. ಸಾಮಾನ್ಯವಾಗಿ ಶ್ಲೇಷ್ಮವು ಲೋಳೆಯ ಜೊತೆಗೆ ವೈರಾಣುಗಳು, ಬ್ಯಾಕ್ಟೀರಿಯಾ, ಇತರ ಅವಶೇಷಗಳು ಮತ್ತು ನಿರ್ಜೀವ ಉರಿಯೂತದ ಕೋಶಗಳನ್ನು ಹೊಂದಿರುತ್ತದೆ. ಕೆಮ್ಮಿದಾಗ ಶ್ಲೇಷ್ಮವು ಹೊರಬರುತ್ತದೆ.[೧]

ಗಂಟಲು ಅಥವಾ ಗಂಟಲಗೂಡಿನಲ್ಲಿ ಶ್ಲೇಷ್ಮದ ಆಧಿಕ್ಯಕ್ಕೆ ಕೊಡುಗೆ ನೀಡಬಹುದಾದ ಬಹು ಅಂಶಗಳಿವೆ. ಧ್ವನಿತಂತು ದುರುಪಯೋಗವೆಂದರೆ ಅನಾರೋಗ್ಯಕಾರಿ ಶೈಲಿಯಲ್ಲಿ ಧ್ವನಿಯ ದುರುಪಯೋಗ ಅಥವಾ ಅತಿ ಉಪಯೋಗ ಉದಾಹರಣೆಗೆ ಗಂಟಲು ಸ್ವಚ್ಛಮಾಡಿಕೊಳ್ಳುವುದು, ಕೂಗಾಡುವುದು, ಕಿರಿಚುವುದು, ಜೋರಾಗಿ ಮಾತನಾಡುವುದು ಅಥವಾ ತಪ್ಪಾಗಿ ಹಾಡುವುದು. ಹೊಗೆಯು ಧ್ವನಿತಂತುಗಳನ್ನು ಒಣಗಿಸುವ ಬಿಸಿ, ಒಣ, ಮಲಿನ ಗಾಳಿಯಾಗಿದೆ. ಹೊಗೆತುಂಬಿದ ಪ್ರತಿ ಉಸಿರಿನಿಂದ, ಗಂಟಲಗೂಡು ವಿಷಗಳಿಂದ ಮಲಿನಗೊಳ್ಳುತ್ತದೆ. ಇವು ಸುಮಾರು ೩ ಗಂಟೆಗಳ ಕಾಲ ಗಂಟಲುಗೂಡು ಪುನರ್ಜಲೀಕರಣಗೊಳ್ಳದಂತೆ ತಡೆಯೊಡ್ಡುತ್ತವೆ. ಧ್ವನಿತಂತುಗಳಿಗೆ ಸ್ವಲ್ಪ ಪ್ರಮಾಣದ ಜಾರುವಿಕೆ ಬೇಕಾಗುತ್ತದೆ ಮತ್ತು ಇದು ಸಾಕಷ್ಟು ಪ್ರಮಾಣದಲ್ಲಿಲ್ಲದಾಗ ಉರಿಯೂತದಿಂದ ಊದಿಕೊಳ್ಳುತ್ತವೆ. ಧ್ವನಿತಂತುಗಳು ಊದಿಕೊಂಡಾಗ, ಶುಷ್ಕತೆಯನ್ನು ಸರಾಗಗೊಳಿಸುವ ಪ್ರಯತ್ನವಾಗಿ ಹಲವುವೇಳೆ ಶ್ಲೇಷ್ಮವು ಸೃಷ್ಟಿಗೊಳ್ಳುತ್ತದೆ. ನೆಗಡಿ, ಜ್ವರ ಮತ್ತು ನ್ಯುಮೋನಿಯಾದಂತಹ ಕಾಯಿಲೆಯ ಅವಧಿಯಲ್ಲಿ, ದೇಹದೊಳಗಿನ ಬ್ಯಾಕ್ಟೀರಿಯಾ ಮತ್ತು ವೈರಾಣು ಕಣಗಳನ್ನು ತೊಲಗಿಸುವ ಪ್ರಯತ್ನವಾಗಿ ಶ್ಲೇಷ್ಮವು ಹೆಚ್ಚು ಅಧಿಕವಾಗುತ್ತದೆ. ಅಧಿಕ ಶ್ಲೇಷ್ಮದೊಂದಿಗೆ ಸಂಬಂಧಿತವಾದ ಒಂದು ಪ್ರಮುಖ ಕಾಯಿಲೆಯೆಂದರೆ ತೀವ್ರ ಬ್ರಾಂಕೈಟಿಸ್.

ಉಲ್ಲೇಖಗಳು[ಬದಲಾಯಿಸಿ]

  1. Rubin, Bruce K. (23 November 2009). "The Role of Mucus in Cough Research". Lung. 188 (Suppl 1): S69–72. doi:10.1007/s00408-009-9198-7. PMID 19936981.
"https://kn.wikipedia.org/w/index.php?title=ಶ್ಲೇಷ್ಮ&oldid=873464" ಇಂದ ಪಡೆಯಲ್ಪಟ್ಟಿದೆ