ವಿಷಯಕ್ಕೆ ಹೋಗು

ಕನ್ಫ್ಯೂಷಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ಫ್ಯೂಷಿಯಸ್ ನ ಭಾವಚಿತ್ರ

ಕನ್ಫ್ಯೂಷಿಯಸ್

ಕನ್ಫ್ಯೂಷಿಯಸ್[೧] ( ಸೆಪ್ಟೆಂಬರ್ ೨೮, ೫೫೧ ಇಂದ ೪೭೯ ಬಿಸಿ) ಚೀನಾ ದೇಶದ ಐತಿಹಾಸಿಕ ಬೋಧಕ, ರಾಜಕಾರಣಿ ಹಾಗು ತತ್ವಜ್ಞಾನಿ.[೨] ಕನ್ಫ್ಯೂಷಿಯಸ್ ಅವರ ತತ್ವಗಳು ವೈಯಕ್ತಿಕ ಹಾಗು ಸಾಮಾಜಿಕ ನೈತಿಕತೆ, ಸೂಕ್ತ ಸಾಮಾಜಿಕ ಸಂಬಂಧಗಳು, ಸಾಮಾಜಿಕ ನ್ಯಾಯ ಮತ್ತು ಪ್ರಾಮಣಿಕತೆ ಬಗ್ಗೆ ಸಾರುತ್ತವೆ. ಅವರ ಅನುಯಾಯಿಗಳು "ಹಂಡ್ರೆಡ್ ಸ್ಕೂಲ್ ಆಫ಼ ತಾಟ್" ಯುಗದಲ್ಲಿ ಇತರೆ ತತ್ವಜ್ಞಾನಿ ಗಳೊಂದಿಗೆ ಕಿನ್ ರಾಜವಂಶದ ಶಾಸನವಾದಿಗಳ ಪರ ವಾದ ಮಂಡಿಸುತ್ತಿದ್ದರು. ಕಿನ್ ರಾಜವಂಶದ ನಂತರ ಚು ರಾಜವಂಶವನ್ನು ಸೋಲಿಸಿ ಗದ್ದುಗೆ ಏರಿದ ಹ್ಯಾನ್ ರಾಜವಂಶ ಕನ್ಫ್ಯೂಷಿಯಸ್ ತತ್ವಗಳನ್ನು ಅಧಿಕೃತ ಗೊಳಿಸಿ, ಕನ್ಫ್ಯೂಷಿಯಸ್ ಸಿದ್ಧಾಂತ ಅಥವಾ ಕನ್ಫ್ಯೂಷಿಯನಿಸಮ್ ಎಂದು ಪ್ರಸಿದ್ಧಗೊಳಿಸಿದರು.

ಚೀನೀ ಭಾಷೆಯ ಹಲವು ಮೇರು ಕೃತಿಗಳನ್ನು ರಚಿಸಿರುವ ಹಾಗು ಸಂಪಾದಿಸಿರುವ ಹೆಗ್ಗಳಿಕೆ ಕನ್ಫ್ಯೂಷಿಯಸ್ ಅವರಿಗೆ ಸಲ್ಲುತ್ತದೆ. ಅವರ ಬೋಧನೆ ಗಳನ್ನು ಅವರ ಮರಣದ ನಂತರ "ಅನಲೆಕ್ಟೆಸ್" ಎಂಬ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.

ಕನ್ಫ್ಯೂಷಿಯಸ್ ತತ್ವಗಳು ಮೂಲತಃ ಚೀನೀ ಸಂಪ್ರದಾಯ ಹಾಗು ನಂಬಿಕೆ ಗಳಿಗೆ ಸೇರಿವೆ. ಅವರ ಬೋಧನೆಗಳು ಕೌಟುಂಬಿಕ ನಿಷ್ಠೆ, ಪೂರ್ವಿಕರ ಆರಾಧನೆ, ಮಕ್ಕಳಿಂದ ತಮ್ಮ ಹಿರಿಯರಿಗೆ ಗೌರವ, ಸತಿಯರಿಗೆ ತಮ್ಮ ಪತಿಯ ಮೇಲೆ ಗೌರವದ ಕುರಿತಾಗಿರುತ್ತಿದವು. ಒಂದು ಒಳ್ಳೆ ಸರ್ಕಾರಕ್ಕೆ ಕುಟುಂಬವೇ ಮೂಲ ಎಂಬ ಅಭಿಪ್ರಾಯ ಉಳ್ಳವರಾಗಿದ್ದರು. "ನಿನಗೆ ಬೇರೆಯವರು ಏನು ಮಾಡಬಾರದೆಂದು ಬಯಸುವೆಯೊ, ಅದನ್ನು ನೀನು ಬೇರೆಯವರಿಗೆ ಮಾಡಬೇಡ" ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಹಾಗು ಇದು ಅವರ ಸುವರ್ಣ ನಿಯಮವು ಹೌದು.

ಹೆಸರುಗಳು[ಬದಲಾಯಿಸಿ]

ಕನ್ಫ್ಯೂಷಿಯಸ್ ರವರ ಕೌಟುಂಬಿಕ ಹಾಗು ವೈಯಕ್ತಿಕ ಹೆಸರು ಕೊಂಗ್ ಕಿಯು. ಇದಕ್ಕೆ ಪೂರಕವಾದ ಹೆಸರೆಂದರೆ ಜ್ಹೊಂಗ್ನಿ. ಚೀನೀಸ್ ಭಾಷೆಯಲ್ಲಿ ಖೊಂಗ್ಶಿ, ಅರ್ಥ ಮಾಸ್ಟರ್ ಕೊಂಗ್ ಎಂದು. ಕೊಂಗ್ ಫ಼ುಜ಼ಿ ಅರ್ಥ ಗ್ರಾಂಡ್ ಮಾಸ್ಟರ್ ಕೊಂಗ್ ಎಂದೂ ಕರೆಯಲಾಗುವುದು. ರೋಮನೀಕರಣದ ವೇಡ್ ಗೈಲ್ಸ್ ವ್ಯವಸ್ಥೆಯಲ್ಲಿ ಇವರ ಹೆಸರನ್ನು ಕುಂಗ್ ಫ಼ುಟ್ಸು ಎಂದು ನಿರೂಪಿಸಲಾಗಿದೆ. ಲ್ಯಾಟಿನ್ ಹೆಸರಾದ "ಕನ್ಫ್ಯೂಷಿಯಸ್", "ಕೊಂಗ್ ಫ಼ುಜ಼ಿ" ಎಂಬ ಹೆಸರಿನಿಂದ ಹುಟ್ಟಿಕೊಂಡಿದೆ. ಈ ಹೆಸರನ್ನು ಮೊದಲನೆಯ ಬಾರಿಗೆ ಮ್ಯಟ್ಟಿಯೊ ರಿಕ್ಕಿ ಎಂಬ ೧೬ ನೇ ಶತಮಾನದ ಕ್ರೈಸ್ತ ಪಾದ್ರಿ ಬಳಸಿದರು.

ಅನಲೆಕ್ಟೆಸ್ ಪುಸ್ತಕದಲ್ಲಿ, ಕನ್ಫ್ಯೂಷಿಯಸ್ ರವರನ್ನು "ದಿ ಮಾಸ್ಟರ್" ಎಂದು ನಮೂದಿಸಲಾಗಿದೆ. ಕ್ರಿ.ಶ. ೧ ರಲ್ಲಿಅವರಿಗೆ "ಲೌಡೆಬ್ಲಿ ಡೆಕ್ಲಾರಬಲ್ ಲಾರ್ಡ್ ನಿ" ಎಂದು ಮೊದಲನೆಯ ಮರಣೋತ್ತರ ಹೆಸರು ನೀಡಲಾಯಿತು. ೧೫೩೦ ರಲ್ಲಿ ಅವರನ್ನು "ಎಕ್ಸ್ಟೀಮ್ಲ್ಯ್ ಸೇಜ್ ಡಿಪಾರ್ಟೆಡ್ ಟೀಚರ್" ಎಂದು ಘೋಷಿಸಲಾಯಿತು. ಇದನ್ನು ಹೊರೆತು ಪಡಿಸಿ ಅವರನ್ನು ಮಹಾನ್ ಋಷಿ, ಮೊದಲನೆಯ ಗುರು ಹಾಗು ಹತ್ತು ಸಾವಿರ ಕಾಲಾಂತರಕ್ಕೆ ಮಾದರಿ ಗುರು ಎಂದೂ ಕರೆಯಲಾಗುತ್ತದೆ.

ಕೌಟುಂಬಿಕ ಹಿನ್ನಲೆ[ಬದಲಾಯಿಸಿ]

(ಮೂಲ ಲೇಖನ: " ಫ್ಯಾಮಿಲಿ ಟ್ರೀ ಆಫ್ ಕನ್ಫ್ಯೂಷಿಯಸ್ ಇನ್ ದ ಮೇನ್ ಲೈನ್ ಆಫ್ ಡೆಸೆಂಟ್")

ಸಂಪ್ರದಾಯದ ಪ್ರಕಾರ, ಕನ್ಫ್ಯೂಷಿಯಸ್ ರವರ ಮೂರು ತಲೆಮಾರು ಹಿಂದಿನವರು ಲು ಸ್ಟೇಟ್ ಇಂದ ವಲಸೆ ಬಂದಿದ್ದರು. ಅವರು ಡ್ಯೂಕ್ಸ್ ಆಫ್ ಸಾಂಗ್ ಮೂಲಕ ಶಾಂಗ್ ರಾಜವಂಶಸ್ಥರಾಗಿದ್ದರು.

ಜೀವನಚರಿತ್ರೆ[ಬದಲಾಯಿಸಿ]

ಆರಂಭಿಕ ಜೀವನ[ಬದಲಾಯಿಸಿ]

ಕನ್ಫ್ಯೂಷಿಯಸ್ ಅವರು ಸೆಪ್ಟೆಂಬರ್ ೨೮ ೫೫೧ ಕ್ರಿ.ಪೂ. ದಲ್ಲಿ ಜನಿಸಿರುವುದಾಗಿ ನಂಬಲಾಗಿದೆ. ಲು ರಾಜ್ಯದ ಜ಼ೊವು ( ಇಂದಿನ ಕುಫು, ಶಾಂಡೊಂಗ್ ಪ್ರಾಂತ್ಯ) ಅವರ ಜನ್ಮಸ್ಥಾನ. ಅವರ ತಂದೆಯ ಹೆಸರು ಕೊಂಗ್ ಹೆ, ಅವರನ್ನು ಶೂಲಿಯಾಂಗ್ ಹೆ ಎಂದೂ ಕರೆಯಲಾಗುತಿತ್ತು. ಲು ಸೇನೆ ಯಲ್ಲಿ ಕಾರ್ಯನಿರ್ವಹಿಸುತಿದ್ದರು. ಕನ್ಫ್ಯೂಷಿಯಸ್ ತಮ್ಮ ಮೂರನೇಯ ವಯಸ್ಸಿನಲ್ಲಿ, ಅವರ ತಂದೆ ಕೊಂಗ್ ಹೆ ಮರಣ ಹೊಂದಿದರು. ನಂತರ ತಾಯಿ ಯಾನ್ ಜ಼ೆಂಗ್ ಜ಼ೈ ಮಗನನ್ನು ಬಡತನದಲ್ಲಿ ಬೆಳೆಸಬೇಕಾಯಿತು. ಅವರ ತಾಯಿ ನಲವತ್ತಕ್ಕು ಕಮ್ಮಿ ವಯಸ್ಸಿನಲ್ಲೆ ಮರಣ ಹೊಂದಿದರು. ಕನ್ಫ್ಯೂಷಿಯಸ್ ತಮ್ಮ ೧೯ ನೇ ವಯಸ್ಸಿನಲ್ಲಿ ಕಿಗುವಾನ್ ಎಂಬ ಉಪನಾಮ ಹೊಂದಿರುವವರನ್ನು ವರಿಸುತ್ತಾರೆ. ಒಂದು ವರ್ಷದ ಬಳಿಕ ಕೊಂಗ್ ಲಿ ಎನ್ನುವ ಮಗುವನ್ನು ಪಡೆಯುತ್ತಾರೆ. ನಂತರ ಆ ಮಗು "ಬೊಯು" ಎಂದರೆ ಚೀನಿ ಭಾಷೆಯಲ್ಲಿ "ಅತ್ಯುತ್ತಮ ಮೀನು" ಎಂದು ಪ್ರಸಿದ್ಧಿ ಹೊಂದುತ್ತದೆ. ನಂತರ ಕನ್ಫ್ಯೂಷಿಯಸ್ ಮತ್ತು ಕಿಗುವಾನ್ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ, ಅದರಲ್ಲಿ ಒಂದು ಮಗು ಆರಂಭಿಕ ಜೀವನದಲ್ಲೆ ಮರಣಕ್ಕೆ ಗುರಿಯಾಗುತ್ತದೆ. ಕನ್ಫ್ಯೂಷಿಯಸ್ ಸಾಮಾನ್ಯರಿಗೆಂದೆ ಇದ್ದ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದರು. ಆರು ಕಲೆಗಳಲ್ಲಿ ಪರಿಣಿತಿ ಯನ್ನು ಗಳಿಸುತ್ತಾರೆ.

ಕನ್ಫ್ಯೂಷಿಯಸ್, ಶ್ರೀಮಂತ ಮತ್ತು ಸಾಮಾನ್ಯ ಜನರ ನಡುವಿನ ವರ್ಗವಾಗಿದ್ದ ಶೀ ವರ್ಗದಲ್ಲಿ ಜನಿಸಿದ್ದರು. ಅವರ ಆರಂಭಿಕ ೨೦ ವರ್ಷಗಳಲ್ಲಿ ಹಲವಾರು ಸರ್ಕಾರಿ ಕೆಲಸಗಳನ್ನು ನಿರ್ವಹಿಸಿದ್ದರು. ತಮ್ಮ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಲು, ಲೆಕ್ಕಪುಸ್ತಕ ಬರೆಯುವವನಾಗಿಯು ಹಾಗು ಕುರಿ, ಕುದುರೆಗಳ ಪಾಲನೆಯನ್ನು ಮಾಡುವವನಾಗಿಯು ಸೇವೆ ಸಲ್ಲಿಸಿದ್ದರು. ೨೩ ವಯಸ್ಸಿನ ಕನ್ಫ್ಯೂಷಿಯಸ್ ಅವರ ತಾಯಿಯ ಮರಣದ ಬಳಿಕ ಸಂಪ್ರದಾಯದ ಅನುಗುಣವಾಗಿ ಮೂರು ವರ್ಷ ಶೋಕಾಚರಣೆ ಯನ್ನು ಮಾಡಿದ್ದರು.

ರಾಜಕೀಯ ಬದುಕು:[ಬದಲಾಯಿಸಿ]

ಲು ರಾಜ್ಯವು ಆಡಳಿತ ಸಭೆ ಇಂದ ಆಳಲ್ಪಟ್ಟಿತ್ತು. ಇದರ ಅಡಿಯಲ್ಲಿ ವಿಸ್ಕೌಂಟ್ ಪಟ್ಟ ಹೊಂದಿದ್ದ ಮೂರು ಶ್ರೀಮಂತ ಕುಟುಂಬಗಳಿದ್ದವು. ಅವರು ಪಿತ್ರಾರ್ಜಿತವಾಗಿ ಲು ರಾಜ್ಯದ ಆಡಳಿತಶಾಹಿಗಳ ಪೀಠವನ್ನು ಅಲಂಕರಿಸುತ್ತಿದ್ದರು. ಜಿ ಕುಟುಂಬ ಜನರ ಸಚಿವ ಸ್ಥಾನ ಹಾಗು ಪ್ರಧಾನ ಮಂತ್ರಿ ಸ್ಥಾನಗಳನ್ನು, ಮೆಂಗ್ ಕುಟುಂಬ ವಿವಿಧ ಕಾರ್ಯಗಳ ಸಚಿವ ಸ್ಥಾನ ಮತ್ತು ಶು ಕುಟುಂಬ ಯುದ್ಧ ಸಚಿವ ಸ್ಥಾನಗಳನ್ನು ಅಲಂಕರಿಸುತ್ತಿದ್ದವು. ೫೦೫ ಕ್ರಿ.ಪೂ.ದ ಚಳಿಗಾಲದಲ್ಲಿ ಜಿ ಕುಟುಂಬಕ್ಕೆ ಸೇರಿದ ಯಾಂಗ್ ಹುವ ಬಂಡಾಯ ಎದ್ದು, ಜಿ ಕುಟುಂಬದ ಸಂಪೂರ್ಣ ಆಡಳಿತವನ್ನು ವಶಪಡಿಸಿಕೊಳ್ಳುತ್ತಾನೆ. ಆದರೆ ೫೦೧ ಕ್ರಿ.ಪೂ.ದ ಬೇಸಿಗೆ ಕಾಲದೊಳಗೆ ಮೂರು ಆಡಳಿತಶಾಹಿ ಕುಟುಂಬಗಳು ಒಗ್ಗೂಡಿ ಯಾಂಗ್ ಹುವ ನನ್ನು ಯಶಸ್ವಿಯಾಗಿ ಲು ರಾಜ್ಯದಿಂದ ಹೊರ ಹಾಕುತ್ತಾರೆ. ಅಷ್ಟರಲ್ಲಿ ಕನ್ಫ್ಯೂಷಿಯಸ್ ತಮ್ಮ ಭೋಧನೆಗಳ ಮೂಲಕ ಗಣನೀಯ ಖ್ಯಾತಿಯನ್ನು ಪಡೆದಿದ್ದರು. ಈ ಮೂರು ಆಡಳಿತಶಾಹಿ ಕುಟುಂಬಗಳು ಕಾನೂನುಬದ್ಧ ಸರ್ಕಾರಕ್ಕೆ ನಿಷ್ಠೆಯಿಂದಿರಲು, ಸನ್ನಡತೆಯ ಪ್ರಾಮುಕ್ಯತೆ ಮತ್ತು ಸದಾಚಾರವನ್ನು ಅರಿಯಲು ಕನ್ಫ್ಯೂಷಿಯಸ್ ರವರನ್ನು ಸಂಪರ್ಕಿಸುತ್ತಿದ್ದರು. ಆದ್ದರಿಂದ ಆ ವರ್ಷ (೫೦೧ ಕ್ರಿ.ಪೂ.) ಕನ್ಫ್ಯೂಷಿಯಸ್ ರವರನ್ನು ಒಂದು ಪಟ್ಟಣದ ಗವರ್ನರ್ ಆಗಿ ನೇಮಿಸಲಾಯಿತು. ದಿನಗಳುರುಳಿದಂತೆ ಕನ್ಫ್ಯೂಷಿಯಸ್ ಅಪರಾಧ ಸಚಿವರಾಗಿ ಹೊರಹೊಮ್ಮಿದರು.

ಕನ್ಫ್ಯೂಷಿಯಸ್ ಮೂರು ಆಡಳಿತಶಾಹಿ ಕುಟುಂಬಗಳಿಗೆ ಸೇರಿದ ಭದ್ರ ಕೋಟೆಗಳನ್ನು ಕೆಡವಿ, ಅಧಿಕಾರವನ್ನು ಸಂಪೂರ್ಣವಾಗಿ ಆಡಳಿತ ಸಭೆಗೆ ಹಿಂದಿರುಗಿಸಲು ಇಚ್ಛಿಸಿದರು. ಆದರೆ ಕನ್ಫ್ಯೂಷಿಯಸ್ ಸಂಪೂರ್ಣ ರಾಜತಂತ್ರದ ಮೇಲೆ ಅವಲಂಬಿಸಿದ್ದರು. ಅವರಿಗೆ ಯಾವುದೇ ಸೈನ್ಯದ ಸಹಕಾರವಿರಲಿಲ್ಲ. ಕ್ರಿ.ಪೂ. ೫೦೦ ದಲ್ಲಿ ಹೋ ಪಟ್ಟಣದ ಗವರ್ನರ್ ಆಗಿದ್ದ ಹೋ ಫಾನ್ ಅವನ ಮೇಲಾಡಳಿತವಾಗಿದ್ದ ಶು ರಾಜವಂಶದ ವಿರುದ್ಧವಾಗಿ ಧಂಗೆ ಏಳುತ್ತಾನೆ. ಮೆಂಗ್ ಮತ್ತು ಶು ರಾಜವಂಶಗಳು ಹೋ ನನ್ನು ಮುತ್ತಿಗೆ ಹಾಕಿದರೂ ಯಶಸ್ವಿಯಾಗಲಿಲ್ಲ. ಒಬ್ಬಾ ನಿಷ್ಠಾವಂತ ಸರ್ಕಾರಿ ಅಧಿಕಾರಿ ಜನರೊಂದಿಗೆ ಮಧ್ಯ ಪ್ರವೇಶಿಸಿ ಹೋ ಫಾನ್ ಕೀ ರಾಜ್ಯಕ್ಕೆ ಹೋಗುವಂತೆ ಮಾಡುತ್ತಾರೆ. ಈ ಸಂದರ್ಭವು ಕನ್ಫ್ಯೂಷಿಯಸ್ ಮತ್ತು ಅವರ ಅನುಯಾಯಿಗಳಿಗೆ ಲಾಭದಾಯಕವಾಗಿತ್ತು. ಈಗ ಅವರು ಆಡಳಿತಶಾಹಿ ಕುಟುಂಬಗಳಿಗೆ ತಮ್ಮ ಭದ್ರ ಕೋಟೆಗಳನ್ನು ಕೆಡವಿ, ಉದಾರ ಆಡಳಿತದೊಂದಿಗೆ ಜನರ ಹಿತಾಸಕ್ತಿಗೆ ಶ್ರಮಿಸಲು ಸಲಹೆ ನೀಡುತ್ತಾರೆ. ಒಂದು ವರ್ಷದ ಬಳಿಕ ಕನ್ಫ್ಯೂಷಿಯಸ್ ಮತ್ತು ಅವರ ಅನುಯಾಯಿಗಳು ಆಡಳಿತಶಾಹಿ ಕುಟುಂಬಗಳಿಗೆ, ಇತರರು ನಿರ್ಮಿಸಿದ ಗೋಡೆಗಳನ್ನು ನೆಲಸಮಗೊಳಿಸುವಂತೆ ಮನವೊಲಿಸಿದರು. ಇದರ ಪ್ರಕಾರ ಹೋ ನಿರ್ಮಿಸಿದ ಗೋಡೆಯನ್ನು ಶು ಕುಟುಂಬ, ಬೈ ನಿರ್ಮಿಸಿದ ಗೋಡೆಯನ್ನು ಜಿ ಕುಟುಂಬ, ಚೆಂಗ್ ನಿರ್ಮಿಸಿದ ಗೋಡೆಯನ್ನು ಮೆಂಗ್ ಕುಟುಂಬ ನೆಲಸಮಗೊಳಿಸಿತು. ಮೊದಲನೆಯದಾಗಿ ಶು ಕುಟುಂಬವು ತನ್ನ ಸೇನೆಯನ್ನು ಹೋ ಪಟ್ಟಣಕ್ಕೆ ಕಳಿಸುವುದರ ಮುಖಾಂತರ ಅದನ್ನು ನಾಶಪಡಿಸಿತು. ಇದಾದ ಬಳಿಕ ಜಿ ಕುಟುಂಬದ ಧಾರಕನಾಗಿದ್ದ ಗೊಂಗ್ ಶಾನ್ ಫುರೊ, ಬೈ ಕುಟುಂಬದ ಮೇಲೆ ಧಂಗೆ ಏಳುವುದರ ಮೂಲಕ ಅದನ್ನು ತನ್ನ ವಶಕ್ಕೆ ಪಡೆಯುತ್ತಾನೆ. ಬೇಗ ಒಂದು ದಾಳಿಯನ್ನು ರೂಪಿಸಿ, ರಾಜಧಾನಿ ಲು ಅನ್ನು ಪ್ರವೇಶಿಸುತ್ತಾನೆ

ಉಲ್ಲೇಖಗಳು[ಬದಲಾಯಿಸಿ]

  1. https://books.google.co.in/books?id=1R9MAQAAQBAJ&pg=PA4&lpg=PA4&dq=confucius+age+19+marry+qiguan&source=bl&ots=xlKmoo6xBZ&sig=iIVdL5M3fvp42ZqQUaXb4XwpMFE&hl=en&sa=X&redir_esc=y#v=onepage&q=confucius%20age%2019%20marry%20qiguan&f=false
  2. https://books.google.co.in/books?id=ZHvyCQAAQBAJ&pg=PA587&lpg=PA587&dq=confucius+great+sage+first+teacher&source=bl&ots=N-2mD_4M9f&sig=N9oQjur1tulRnUpVmY-BrCMa4yc&hl=en&sa=X&redir_esc=y#v=onepage&q=confucius%20great%20sage%20first%20teacher&f=false