ವಿಷಯಕ್ಕೆ ಹೋಗು

ಕನ್ನೇಲಿ ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನೇಲಿ ಶಿಲಾಸನ
ಕನ್ನೇಲಿ ಶಿಲಾಶಾಸನದ ಸಮೀಪದ ಚಿತ್ರ
ಸ್ಥಳಕನ್ನೇಲಿಯ ಚೆನ್ನಿಗರಾಯ ದೇವಾಲಯ (ಕೆಂಗೇಲಿ ಸಮೀಪ)
ಎತ್ತರ4.6 feet (1.4 m)
ನಿರ್ಮಾಣCE1408
Map
ಕನ್ನೇಲಿ ಶಿಲಾಶಾಸನ
ಶಿಲಾಶಾಸನ ಸ್ಥಳದ ದೃಶ್ಯ

ಕನ್ನೇಲಿ ಶಿಲಾಶಾಸನವು ಬೆಂಗಳೂರಿನ ಕೆಂಗೇರಿಯ ಸಮೀಪದ ಚೆನ್ನಿಗರಾಯ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೪೦೮ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 4’ 6” x 2’. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಕನ್ನೇಲಿ ಊರಿನ ಅಧಿಕಾರಿ ಹಯಕಾಸ ದೇವರಾದ ತಿರುಮಲನಾಥನಿಗೆ ದಾನವಾಗಿ ಕೊಟ್ಟ ಮಗ್ಗದ ಬಗ್ಗೆ ಬರವಣಿಗೆಯಲ್ಲಿ ತಿಳಿಸಲಾಗಿದೆ.

ಶಾಸನ ಪಠ್ಯ

[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN122 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. []

ಅದೇ ಹೋಬಳಿ ಕನ್ನೆಲ್ಲಿ ಗ್ರಾಮದ ಚನ್ನಿಗರಾಯ ದೇವಾಲಯದ ಮುಂದೆ ನೆಟ್ಟ ಕಲ್ಲಿನಲ್ಲಿ.

1ಸ್ವಸ್ತಿಶ್ರೀಸಕವೆರುಸಂ
2ಗಳ1330ನೆಯಸವ್ರ್ಯಧಾರಿ
3ಸಂವತ್ಸರದಚೈತ್ರಶು5ಶೂ
4ಲುಶ್ರೀಮಂನ್ಮಹಾರಾಜಾಧಿ
5ರಾಜರಾಜಪರಮೇಶ್ವರಶ್ರೀ
6ವೀರದೇವರಾಯಮಹಾರಾಯ
7ರುಪ್ರಿಥ್ವೀರಾಜ್ಯಂಗೆಯಿಉತ್ತಿರ
8ಲು ಅಧಿಕಾರಿಹಯಕನವರು
9ಕುಕ್ಕಲನಾಡಕಂನ್ನೆಲ್ಲಿಯತಿರು
10ಮಲೆನಾಥದೇವರಿಗೆನಂಮ
11ದೇವರಿಗೆಆಕಂನ್ನೆಲ್ಲಿಯಲುಯೆರ
12ಡುಮಗ್ಗವನುಸುಂಕಮಾನ್ಯ
13ವಾಗಿಆಚಂದ್ರಾಕ್ರ್ಕಸ್ಥಾಯಿಯಾ
14ಗಿಕೊಟ್ಟಧಮ್ರ್ಮಶಾಸನ
--ಹಿಂಭಾಗ--
15ದಾನಪಾಲನಯೋಮ್ರ್ಮ
16ಯೇದಾನಾಛ್ರೇಯೋನುಪಾ
17ಲನಂದಾನಾತ್ಸ್ಯಗ್ರ್ಗ
18ಮವಾವ್ನೋತಿಪಾಲ
19ನಾದಚ್ಯುತಂಪದಂ||
20ಸ್ಯದತ್ತಾದ್ದ್ಯಿಗುಣಂಪು
21ಣ್ಯಂಪರದತ್ತಾನುಪಾಲ
22ನಂ | ಪರದತ್ತಾಸಹಾ
23ರೇಣಸ್ಯದತ್ತಂನಿಷ್ಪಲಂ
24ಭವೇತ್ ||

The inscription records the donation of two looms to the god Thirumalenatha by an officer named Hayakasa in the town of Kanneli within the province of Kukkala-nad.

ಉಲ್ಲೇಖಗಳು

[ಬದಲಾಯಿಸಿ]
  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಕೊಂಡಿಗಳು

[ಬದಲಾಯಿಸಿ]