ಕನ್ನಡ ಬಳಗ ಲಂಡನ್, ಯು.ಕೆ.ಎ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಬಳಗ ಯುಕೆ,ಲಂಡನ್,ಎ,[೧] ಬ್ರಿಟನ್ನಿನ ಪ್ರಪ್ರಥಮ ಮತ್ತು ಅತಿಹಳೆಯ ಕನ್ನಡ ಸಂಘವೆನಿಸಿರುವ ಸಂಸ್ಥೆಯಾಗಿದೆ. ಈಗ ಇದು, '೩೦ ನೆಯ ವಾರ್ಷಿಕೋತ್ಸವದ ಸಂಭ್ರಮ'ದಲ್ಲಿದೆ. ಸನ್.೨೦೧೩ ರ ಮೇ. ೨೫-೨೬ ರಂದು ಇಂಗ್ಲೆಂಡ್ ನ 'ಸ್ಟಾಕ್ ಆನ್ ಟ್ರೆಂಟ್' ನಗರದಲ್ಲಿ ಜರುಗಲಿರುವ ಈ ಹಬ್ಬಕ್ಕೆ ವಿಶ್ವದ ಕನ್ನಡ ಪ್ರಿಯರೆಲ್ಲಾ ಬರುತ್ತಾರೆ.[೨] ಯುಗಾದಿ ಹಬ್ಬದ ಆಚರಣೆಯ ಜೊತೆ ನಿಕಟ ಸಂಬಂಧ ಹೊಂದಿರುವ ಸಮಾರಂಭಕ್ಕೆ 'ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ,' ಕನ್ನಡದ ಖ್ಯಾತಸಾಹಿತಿ ಡಾ.ಎಸ್.ಎಲ್.ಭ್ಯರಪ್ಪನವರು ಪ್ರಮುಖ ಅತಿಥಿ ಭಾಷಣಕಾರರಾಗಿ ಆಹ್ವಾನಿಸಲ್ಪಟ್ಟಿದ್ದಾರೆ. ಹಲವಾರು ಶ್ರೇಷ್ಠ ಕಲಾವಿದರು, ಸಾಹಿತಿಗಳು, ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ಅವರಲ್ಲಿ ಪ್ರಮುಖರು : ಪ್ರೊ.ಕೃಷ್ಣೇಗೌಡ,ಪ್ರೊ.ಲಕ್ಷ್ಮೀಚಂದ್ರಶೇಖರ್, ಶ್ರೀನಿವಾಸ ಉಡುಪ, ಅರ್ಚನಾ ಉಡುಪ, ಮುಖ್ಯಮಂತ್ರಿ ಚಂದ್ರು, ಪ್ರವೀಣ್ ಡಿ.ರಾವ್, ಅಕ್ಕಿಕಾಳು ವೆಂಕಟೇಶ್, ಮೊದಲಾದವರು. ಹಂಪಿಯ ಬಗ್ಗೆ ಭಾಷಣ ಮಂಡಿಸುವವರು, ಪ್ರೊ.ವಲೈರಿ ಸ್ಟೋಕರ್,(ಯು.ಎಸ್.ಎ.) ಹಿರೇಮಠ್, ಮತ್ತು ಸಂಗಡಿಗರು,ಜನಪದ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಕನ್ನಡ ಬಳಗ ಯು.ಕೆ, ಸಾಗರದಾಚೆ ಕನ್ನಡ ತನವನ್ನು ಉಳಿಸಿ ಬೆಳೆಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ.

ಬಳಗ ಶುರುವಾದಾಗ[ಬದಲಾಯಿಸಿ]

ಕೇವಲ ೬೦ ಸದಸ್ಯರಿಂದ ಆರಂಭವಾದ ಕನ್ನಡ ಬಳಗ, ಸುಮಾರು ೫೦೦ ಕನ್ನಡ ಕುಟುಂಬಗಳು ಒಟ್ಟಿಗೆಸೇರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾರಂಭಿಸಿದರು. ಇಂದು ೪ ಸಾವಿರಕ್ಕೂ ಮಿಗಿಲಾದ ಕನ್ನಡ ಕುಟುಂಬಗಳು ಸಕ್ರಿಯವಾಗಿ ಭಾಗವಹಿಸಿ, ಪ್ರತಿಷ್ಥಿತ ಕನ್ನಡ ಬಳಗವೆಂದು ಗುರುತಿಸಲ್ಪಡುತ್ತಿದೆ. ಈ ಸಂಸ್ಥೆಯ ಸದಸ್ಯರು, 'ಕನ್ನಡ ಕಲಿ ತರಗತಿ'ಗಳನ್ನು ಸುವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಪ್ರಮುಖ ಹೆಜ್ಜೆ 'ಸ್ಮರಣ ಸಂಚಿಕೆ'ಯನ್ನು ಪ್ರಕಟಿಸಲಾಗುತ್ತಿದೆ. ಹಿಂದೆ, ಈಗಾಗಲೇ ಬಳಗದ ಹಲವಾರು ಕಾರ್ಯಕ್ರಮಗಳಿಗೆ, ಡಾ.ಶಿವರಾಮ ಕಾರಂತ, ಡಿ.ಶಂಕರ ನಾಗ್ ಮೊದಲಾದ ಸಾಹಿತಿ, ಹಾಗೂ ಸಿನಿ ಕಲಾವಿದರು ಪಾಲ್ಗೊಂಡಿದ್ದಾರೆ. ಮತ್ತಿತರ ಕಿರಿಯ ಕಲಾವಿದರಿಗೆ ಇದು ಅಂತಾರಾಷ್ಟ್ರೀಯ ವೇದಿಕೆಯಾಗಿ ಅವರ ಕಲಾಜೀವನವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ನೆರವಾಗಿದೆ. ಮೊದಲು ಹೆಚ್ಚಾಗಿ ವೈದ್ಯರೇ ಇದ್ದ ಈ ಸಂಸ್ಥೆ ಈಗ 'ಸಾಫ್ಟ್ ವೇರ್ ಇಂಜಿನಿಯರ್' ಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬಳಗದ ಹಲವು ಸದಸ್ಯರು ರಾಜ್ಯೋತ್ಸವ ಪ್ರಶಸ್ತಿಗಳಿಸಿದ್ದಾರೆ. ಕೆಲವು ಭಾರತೀಯರು ಬ್ರಿಟಿಷ್ ಸರಕಾರದ O.B.E. ಮತ್ತು M.B.E ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಬಳಗ, ದೀಪಾವಳಿ ಮತ್ತು ಯುಗಾದಿ ಅತ್ಯಂತ ಸಂಭ್ರಮದಿಂದ ನಡೆಸಿಕೊಂಡುಬರುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]

  1. "ಕನ್ನಡ ಬಳಗ,ಯು.ಕೆ". Archived from the original on 2017-04-03. Retrieved 2017-04-14.
  2. kannada-balaga-uk-30th-anniversary