ಕನಿಕೆ ನದಿ
ಗೋಚರ
ಕನಿಕೆ ನದಿಯು ಕೊಡಗಿನ ಬ್ರಹ್ಮಗಿರಿ ಘಟ್ಟಸಾಲಿನಲ್ಲಿ ಹುಟ್ಟುವ ನದಿ. ಇದು ಹರಿದು ಬರುವಾಗ ಭಾಗಮಂಡಲದಲ್ಲಿ ಕಾವೇರಿ ನದಿಯನ್ನು ಕೂಡುತ್ತದೆ. ಕಾವೇರಿಯು ತಲಕಾವೇರಿಯಲ್ಲಿ ಉಗಮವಾಗಿ, ಬೆಟ್ಟವಿಳಿಯುವಾಗ ನೆಲದಡಿಯಲ್ಲಿ ಸಾಗಿ ತಪ್ಪಲಲ್ಲಿರುವ ಭಾಗಮಂಡಲದಲ್ಲಿ ಹೊರಬಂದಾಗ ಕನಿಕೆಯು ಬಂದು ಸೇರುತ್ತದೆ. ಇವೆರಡು ನದಿಗಳಲ್ಲದೆ ಭಾಗಮಂಡಲದಲ್ಲಿ ಸುಜ್ಯೋತಿ ಎಂಬ ಅದೃಶ್ಯ ರೂಪದ ನದಿಯೂ ಸಂಗಮಿಸುತ್ತದೆಯೆಂದು ಪ್ರತೀತಿ. ಹಾಗಾಗಿ ಈ ಕ್ಷೇತ್ರವನ್ನು ತ್ರಿವೇಣೀ ಸಂಗಮವೆಂದು ಕರೆಯುತ್ತಾರೆ.
ಆಧಾರ
ಕೊಡವರ ಜಾನಪದ ಹಾಡುಗಬ್ಬ - 'ಕಾವೇರಮ್ಮೆರ ಪಾಟ್ಟ್'.