ಕದಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕದಿರಿ

కదిరి
ಪಟ್ಟಣ
Country ಭಾರತ
Stateಆಂಧ್ರಪ್ರದೇಶ
District ಅನಂತಪುರ
Elevation
೫೦೪ m (೧,೬೫೪ ft)
ಜನಸಂಖ್ಯೆ
 (2012)
 • ಒಟ್ಟು೧,೦೨,೩೩೧
Languages
 • Officialತೆಲುಗು
ಸಮಯ ವಲಯಯುಟಿಸಿ+5:30 (IST)
PIN
515 591
ವಾಹನ ನೋಂದಣಿAP 02 RTA HINDUPUR

ಕದಿರಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಪಟ್ಟಣ ಮತ್ತು ತಾಲೂಕು ಕೇಂದ್ರ. ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಆಂಧ್ರದ ಪ್ರಸಿದ್ಧ ದೇವಾಲಯಗಳಲ್ಲೊಂದು. ’ತಿಮ್ಮಮ್ಮ ಮರ್ರಿಮಾನು’ ಎಂದು ಕರೆಯಲ್ಪಡುವ ಪ್ರಪಂಚದ ಅತಿದೊಡ್ಡ ಆಲದ ಮರವು ಕದಿರಿಯ ಸಮೀಪದಲ್ಲಿದೆ. ೧೧ ಎಕ್ರೆಗಳಲ್ಲಿ ಹರಡಿರುವ ಈ ಆಲದ ಮರದ ಒಟ್ಟೂ ವಿಸ್ತೀರ್ಣ ೧೯,೧೦೭ ಚದರ ಮೀಟರ್. ೧೯೮೯ರಲ್ಲಿ ಈ ಆಲದ ಮರವು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡನ್ನು ಸೇರಿತು.

ಇತಿಹಾಸ[ಬದಲಾಯಿಸಿ]

ವಿಷ್ಣು ನರಸಿಂಹಾವತಾರದಲ್ಲಿ ಹಿರಣ್ಯಕಶಿಪುವನ್ನು ಕೊಂದು ಇಲ್ಲಿನ ಬೆಟ್ಟದ ಮೇಲೆ ನೆಲೆಸಿದನೆಂಬ ನಂಬಿಕೆಯಿದೆ. ’ಖ’ ಎಂದರೆ ಪಾದ. ಆದ್ರಿ - ಬೆಟ್ಟ. ನರಸಿಂಹನ ಪಾದದ ಚಿಹ್ನೆ ಇರುವ ಬೆಟ್ಟವಾದ್ದರಿಂದ ಊರಿಗೆ ಖದ್ರಿ>ಕದ್ರಿ> ಕದಿರಿ ಎಂಬ ಹೆಸರು ಬಂದಿತು. ಅಷ್ಟಭುಜ ನರಸಿಂಹ ಮೂರ್ತಿಯಿರುವ ಈ ದೇವಾಲಯ ತ್ರೇತಾಯುಗದ ಕಾಲದಷ್ಟು ಹಳೆಯದು.


References[ಬದಲಾಯಿಸಿ]

"https://kn.wikipedia.org/w/index.php?title=ಕದಿರಿ&oldid=1084588" ಇಂದ ಪಡೆಯಲ್ಪಟ್ಟಿದೆ