ಕದಂಬ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕದಂಬ ಮರ
Tree in ಕೊಲ್ಕತ್ತ, West Bengal, India.
ಹೂವಿನ ಸಮೀಪ ನೋಟ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
N. cadamba
Binomial name
Neolamarckia cadamba
Synonyms[೨]
 • Nauclea cadamba Roxb.
 • Anthocephalus cadamba (Roxb.) Miq.
 • Anthocephalus chinensis auct., non Anthocephalus chinensis (Lam.) A.Rich. ex Walp.[೧]
 • Anthocephalus indicus var. glabrescens H.L.Li
 • Anthocephalus morindifolius Korth.
 • Nauclea megaphylla S.Moore
 • Neonauclea megaphylla (S.Moore) S.Moore
 • Samama cadamba (Roxb.) Kuntze
 • Sarcocephalus cadamba (Roxb.) Kurz

ಕದಂಬ : ರೂಬಿಯೇಸೀ ಕುಟುಂಬಕ್ಕೆ ಸೇರಿದ ಸುಂದರವಾದ ಹೂ ಬಿಡುವ ಮರ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಆಂಥೊಸೆಫಾಲಸ್ ಕದಂಬ ಇದರ ವೈಜ್ಞಾನಿಕ ನಾಮ. ಕಡವಳಮರ ಪರ್ಯಾಯನಾಮ.

ಹರಡುವಿಕೆ[ಬದಲಾಯಿಸಿ]

ಭಾರತದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಈ ಮರವನ್ನು ಇದರ ಸುಂದರವಾದ ಹೂಗಳಿಗಾಗಿ ಉದ್ಯಾನವನಗಳಲ್ಲಿ, ರಸ್ತೆಗಳ ಪಕ್ಕಗಳಲ್ಲಿ ಬೆಳೆಸುತ್ತಾರೆ.

ಲಕ್ಷಣಗಳು[ಬದಲಾಯಿಸಿ]

ಎರಡು ಅರ್ಧದಷ್ಟು ಪೂರ್ಣ ಕಡಮ್
ಕದಂಬ ಮರದ ಕೆಳಭಾಗದ ಕಾಂಡ

ಇದು ಸು. 9 ಮೀ ಎತ್ತರ ಬೆಳೆಯುವ ಮಧ್ಯಮ ಗಾತ್ರದ ಮರ. ತೊಗಟೆ ಬೂದು ಬಣ್ಣದ್ದಾಗಿದ್ದು ನಯವಾಗಿದೆ. ತೊಗಟೆಯ ಒಳಭಾಗದ ಬಣ್ಣ ಹಳದಿ ಮಿಶ್ರಿತ ಕಂದು. ವಯಸ್ಸಾದ ಮರದ ತೊಗಟೆ ಉದ್ದವಾಗಿ ಸೀಳಿ ಚಚ್ಚೌಕ ಬಿಲ್ಲೆಗಳಾಗಿ ಉದುರುತ್ತದೆ. ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ, ಅಂಚು ನಯ ಮತ್ತು ತುದಿ ಮೊನಚು. ಹೂಗೊಂಚಲು ಮಧ್ಯಾರಂಭಿ (ಸೈಮೋಸ್) ಮಾದರಿಯದು. ಚೆಂಡಿನಂತೆ ಆಕಾರ ಹೂಗಳು ಕಿತ್ತಳೆ ಬಣ್ಣದವು. ಸುಗಂಧಪುರಿತವೂ ಹೌದು. ಕ್ರಮೇಣ ಹೂಗಳು ಚಿನ್ನದ ಬಣ್ಣ ತಾಳುತ್ತವೆ. ಫಲ ಸಣ್ಣ ಸಣ್ಣ ಬೀಜಗಳನ್ನೊಳಗೊಂಡ ಸಂಪುಟ ಮಾದರಿಯದು. ಕದಂಬ ಮರವನ್ನು ಬೀಜಗಳಿಂದ ಸುಲಭವಾಗಿ ವೃದ್ಧಿ ಮಾಡಬಹುದು.

ಉಪಯೋಗಗಳು[ಬದಲಾಯಿಸಿ]

ಇದರ ಹಣ್ಣುಗಳು ರುಚಿಯಾಗಿರುವುದರಿಂದ ಮನುಷ್ಯರೂ ಪ್ರಾಣಿ ಪಕ್ಷಿಗಳೂ ತಿನ್ನುವುದುಂಟು. ಕೆನೆ ಅಥವಾ ಮಾಸಲು ಬಿಳಿ ಬಣ್ಣದ ಇದರ ಚೌಬೀನೆ ಅಷ್ಟಾಗಿ ಬಾಳಿಕೆ ಬರುವುದಿಲ್ಲ. ಆದರೆ ಅದನ್ನು ಸುಲಭವಾಗಿ ಕೊಯ್ಯಬಹುದು, ಹದಮಾಡಬಹುದು. ಮೆದುವಾಗಿರುವುದರಿಂದ ಬೆಂಕಿಪೆಟ್ಟಿಗೆ, ಸಾಗಾಣಿಕೆ ಪೆಟ್ಟಿಗೆ ಮಾಡಲು ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು[ಬದಲಾಯಿಸಿ]

ಇದರ ತೊಗಟೆಯನ್ನು ಕಣ್ಣುನೋವಿನ ನಿವಾರಣೆಗೂ ಬಾಯಿಹುಣ್ಣಿಗೂ ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

 1. USDA, ARS, National Genetic Resources Program (8 January 2007). "Anthocephalus chinensis". Germplasm Resources Information Network - (GRIN). National Germplasm Resources Laboratory, Beltsville, Maryland. Retrieved 31 August 2013.{{cite web}}: CS1 maint: multiple names: authors list (link)
 2. "Neolamarckia cadamba". World Checklist of Selected Plant Families. Royal Botanic Gardens, Kew. Retrieved 2013-09-01.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕದಂಬ_ಮರ&oldid=1084644" ಇಂದ ಪಡೆಯಲ್ಪಟ್ಟಿದೆ