ಕತ್ತಿ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Swordfish
Temporal range: 33.9–0 Ma Early Oligocene to Present[೧]
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
Subclass:
ಕೆಳವರ್ಗ:
ಗಣ:
ಕುಟುಂಬ:
Xiphiidae
ಕುಲ:
Xiphias

ಪ್ರಜಾತಿ:
X. gladius
Binomial name
Xiphias gladius

ಕತ್ತಿ ಮೀನು ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ವಾಸಿಸುವ ಮೀನು. ಉದ್ದವಾದ ಕತ್ತಿಯಾಕಾರದ ಮೂತಿಯೂ ಬೆನ್ನಿನ ಮೇಲಿರುವ ಎತ್ತರವಾದ ರೆಕ್ಕೆಯೂ ಹಲ್ಲುಗಳಿಲ್ಲದ ಬಾಯಿಯೂ ಮೈಮೇಲೆ ಹುರುಪೆಗಳಿಲ್ಲದಿರುವುದೂ ಈ ಮೀನಿನ ವಿಶಿಷ್ಟ ಲಕ್ಷಣಗಳು.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಕ್ಸಿಫಿಯಿಡೆ ಕುಟುಂಬದ ಕ್ಸಿಫಿಯಾಸ್ ಗ್ಲೇಡಿಯಸ್ ಎಂಬದು ವೈಜ್ಞಾನಿಕ ಹೆಸರು.

ಲಕ್ಷಣಗಳು[ಬದಲಾಯಿಸಿ]

Swordfish skeleton at the National Museum of Natural History, Washington, DC

ಇದು ಉದ್ದದಲ್ಲಿ ಸು. 4.5 ಮೀ ಇದೆ. ತೂಕ 1,000 ಪೌಂಡ್ ಇರುವುದೂ ಉಂಟು.[೩][೪] ಇದರ ಮೂತಿಯ ಉದ್ದ ಸು. ಕೆಲವೊಮ್ಮೆ ದೇಹದ ಉದ್ದದ ಮೂರನೇ ಒಂದು ಭಾಗ ಇರುತ್ತದೆ. ಬಹು ವೇಗವಾಗಿ ಈಜಬಲ್ಲ ಕತ್ತಿಮೀನು ಇತರ ಸಣ್ಣ ಮೀನುಗಳ ತಂಡದ ಮೇಲೆ ಹಟಾತ್ತನೆ ಧಾಳಿ ಮಾಡಿ ತನ್ನ ಕತ್ತಿಯಂತ ಮೂತಿಯಿಂದ ಅವನ್ನು ಊನಮಾಡಿ ಅನಂತರ ಒಂದೊಂದನ್ನಾಗಿ ನುಂಗುತ್ತದೆ. ನೀರಿನ ಮೇಲ್ಮೈಯಿಂದ ಹಿಡಿದು ಸು. 183 ಮೀ ಗಳಷ್ಟು ಆಳದಲ್ಲೂ ಆಹಾರಕ್ಕಾಗಿ ಬೇಟೆಯಾಡುತ್ತ ಸರಾಗವಾಗಿ ಈಜುತ್ತಿರುತ್ತದೆ. ಕೆಲವೊಮ್ಮೆ ಸಣ್ಣ ಹಡಗುಗಳ ತಳಭಾಗವನ್ನು ಮೂತಿಯಿಂದ ಹೊಡೆದು ಕತ್ತರಿಸುವುದೆಂದು ಹೇಳುತ್ತಾರೆ.

ಆಹಾರವಾಗಿ[ಬದಲಾಯಿಸಿ]

ಕತ್ತಿಮೀನು ಒಳ್ಳೆಯ ಆಹಾರದ ಮೀನೆಂದು ಹೆಸರಾಗಿದೆ. ಇದರ ಮಾಂಸದಲ್ಲಿ ಪ್ರೋಟೀನಿನ ಅಂಶ ಅಧಿಕವಾಗಿರುವುದರಿಂದ ಬಹು ಪುಷ್ಟಿಕರವಾದ ಆಹಾರವೆನಿಸಿದೆ. ಬೆಸ್ತರು ಹಿಡಿಯುವ ಹಲವಾರು ಬಗೆಯ ಮೀನುಗಳಲ್ಲಿ ಇದು ವಾಣಿಜ್ಯ ದೃಷ್ಟಿಯಿಂದ ಮುಖ್ಯವಾದುದು.

ವಲಸೆ[ಬದಲಾಯಿಸಿ]

ಇವು ಬೇಸಿಗೆಯಲ್ಲಿ ಶೀತ ವಲಯದೆಡೆಗೆ ವಲಸೆಹೋಗುತ್ತವೆ ಹಾಗೂ ಛಳಿಗಾಲದಲ್ಲಿ ಮತ್ತೆ ಹಿಂತಿರುಗುತ್ತವೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಇವು ವಸಂತ ಋತುವಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Sepkoski, Jack (2002). "A compendium of fossil marine animal genera". Bulletins of American Paleontology. 364: 560. {{cite journal}}: |access-date= requires |url= (help); Cite has empty unknown parameter: |coauthors= (help)
  2. Collette, B., Acero, A., Amorim, A.F., Bizsel, K., Boustany, A., Canales Ramirez, C., Cardenas, G., Carpenter, K.E., de Oliveira Leite Jr., N., Di Natale, A., Die, D., Fox, W., Fredou, F.L., Graves, J., Guzman-Mora, A., Viera Hazin, F.H., Hinton, M., Juan Jorda, M., Minte Vera, C., Miyabe, N., Montano Cruz, R., Masuti, E., Nelson, R., Oxenford, H., Restrepo, V., Salas, E., Schaefer, K., Schratwieser, J., Serra, R., Sun, C., Teixeira Lessa, R.P., Pires Ferreira Travassos, P.E., Uozumi, Y. & Yanez, E. (2011). "Xiphias gladius". IUCN Red List of Threatened Species. Version 2011.2. International Union for Conservation of Nature. Retrieved 15 December 2011. {{cite web}}: Invalid |ref=harv (help)CS1 maint: multiple names: authors list (link)
  3. ಟೆಂಪ್ಲೇಟು:FishBase species
  4. Gardieff, S. Swordfish. Archived 2015-08-09 ವೇಬ್ಯಾಕ್ ಮೆಷಿನ್ ನಲ್ಲಿ. Florida Museum of Natural History. Accessed 26 December 2011

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: