ವಿಷಯಕ್ಕೆ ಹೋಗು

ಕಣ್ಣುಕುಟಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಣ್ಣುಕುಟಿಕೆಯು ಕಣ್ಣುರೆಪ್ಪೆಯಲ್ಲಿನ ಒಂದು ತೈಲಗ್ರಂಥಿಯ ಬ್ಯಾಕ್ಟೀರಿಯಾ ಜನ್ಯ ಸೋಂಕು (ಸ್ಟ್ಯಾಫಿಲೊಕಾಕಸ್ ಆರಿಯಸ್ ಎಂಬ ಬ್ಯಾಕ್ಟೀರಿಯಾ).[೧] ಇದರಿಂದ ಕಣ್ಣುರೆಪ್ಪೆಯ ಅಂಚಿನಲ್ಲಿ ಕೆಂಪು ಬಣ್ಣದ ಮೃದು ಬಾವು ಉಂಟಾಗುತ್ತದೆ. ಕಣ್ಣುರೆಪ್ಪೆಯ ಹೊರಭಾಗ ಅಥವಾ ಒಳಭಾಗವು ಬಾಧಿತವಾಗಬಹುದು. ಒಳಗಿನವುಗಳು ಮೇಯ್ಬೋಮಿಯನ್ ಗ್ರಂಥಿಯ ಸೋಂಕಿನ ಕಾರಣದಿಂದ ಉಂಟಾಗುತ್ತವೆ, ಮತ್ತು ಹೊರಗಿನವು ಜ಼ೀಸ್ ಗ್ರಂಥಿಯ ಸೋಂಕಿನ ಕಾರಣದಿಂದ ಉಂಟಾಗುತ್ತವೆ. ಹಲವುವೇಳೆ ಕಣ್ಣುಕುಟಿಕೆಯು ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲದೆಯೇ ಕೆಲವು ದಿನಗಳು ಅಥವಾ ವಾರಗಳಲ್ಲಿ ಹೋಗಿಬಿಡುತ್ತದೆ. ವೇಗದ ಸುಧಾರಣೆಯಾಗಲು ಮಾಡಲಾದ ಶಿಫಾರಸುಗಳಲ್ಲಿ ಬೆಚ್ಚಗಿನ ಒತ್ತುಕಟ್ಟುಗಳು ಸೇರಿವೆ. ಈ ಕ್ರಮಗಳನ್ನು ಹಲವುವೇಳೆ ಶಿಫಾರಸು ಮಾಡಲಾಗುತ್ತದೆಯಾದರೂ, ಅವುಗಳನ್ನು ಬೆಂಬಲಿಸಲು ಇರುವ ಸಾಕ್ಷ್ಯಾಧಾರ ಉತ್ತಮವಾಗಿಲ್ಲ. ಕಣ್ಣುಕುಟಿಕೆಗಳು ಆಗುವ ಆವರ್ತನ ಅಸ್ಪಷ್ಟವಾಗಿದೆ. ಅವು ಯಾವುದೇ ವಯಸ್ಸಿನಲ್ಲಿ ಉಂಟಾಗಬಹುದು.

ಕಣ್ಣುಕುಟಿಕೆಯ ಮೊದಲ ಚಿಹ್ನೆಯೆಂದರೆ ಬಾವಿನ ಕೇಂದ್ರಭಾಗದಲ್ಲಿ ಸಣ್ಣ, ಹಳದಿಬಣ್ಣದ ಚುಕ್ಕೆ ಮತ್ತು ಇದು ಕೀವಾಗಿ ಬೆಳೆದು ಆ ಪ್ರದೇಶದಲ್ಲಿ ವಿಸ್ತರಿಸುತ್ತದೆ. ಕಣ್ಣುಕುಟಿಕೆಯ ಇತರ ಲಕ್ಷಣಗಳೆಂದರೆ ಮೇಲಿನ ಅಥವಾ ಕೆಳಗಿನ ಕಣ್ಣುರೆಪ್ಪೆಯ ಮೇಲೆ ಬಾವು, ಕಣ್ಣುರೆಪ್ಪೆಯ ಸ್ಥಳೀಯ ಊತ, ಸ್ಥಳೀಕೃತವಾದ ನೋವು, ಕೆಂಪಾಗಿರುವಿಕೆ, ಮೃದುತ್ವ, ಕಣ್ಣುರೆಪ್ಪೆಯ ಅಂಚುಗಳು ಗಟ್ಟಿಯಾಗಿ ರೂಪಗೊಳ್ಳುವುದು, ಕಣ್ಣಿನಲ್ಲಿ ಉರಿ, ಕಣ್ಣುರೆಪ್ಪೆ ಜೋಲುವುದು, ಕಣ್ಣುಗುಡ್ಡೆ ಮೇಲೆ ಕೆರೆತದ ಸಂವೇದನೆ (ನವೆ), ಮಂದ ದೃಷ್ಟಿ, ಕಣ್ಣಿನಲ್ಲಿ ಲೋಳೆ ವಿಸರ್ಜನೆ, ಕಣ್ಣಿನಲ್ಲಿ ಕಿರಿಕಿರಿ, ಬೆಳಕಿಗೆ ಸೂಕ್ಷ್ಮವಾಗುವುದು, ಕಣ್ಣೀರು ಬರುವುದು, ಕಣ್ಣು ಮಿಟುಕಿಸುವಾಗ ಅಸೌಖ್ಯ, ಕಣ್ಣಿನಲ್ಲಿ ಬಾಹ್ಯ ಕಾಯದ ಸಂವೇದನೆ.

ಕಣ್ಣುರೆಪ್ಪೆಯ ತಳದಲ್ಲಿ ಒಂದು ತೈಲಗ್ರಂಥಿಗೆ ಅಡಚಣೆಯಾಗಿರುವುದರಿಂದ ಕಣ್ಣುಕುಟಿಕೆಗಳು ಅತಿ ಸಾಮಾನ್ಯವಾಗಿ ಉಂಟಾಗುತ್ತವೆ. ಎಲ್ಲ ವಯಸ್ಸಿನ ಜನರು ಕಣ್ಣುಕುಟಿಕೆಗಳನ್ನು ಅನುಭವಿಸುತ್ತಾರೆ. ಕಣ್ಣುಕುಟಿಕೆಗಳು ಕಳಪೆ ಪೋಷಣೆ, ನಿದ್ದೆಯ ಅಭಾವ, ನೈರ್ಮಲ್ಯದ ಕೊರತೆ, ನೀರಿನ ಅಭಾವ ಮತ್ತು ಕಣ್ಣುಗಳನ್ನು ತಿಕ್ಕಿಕೊಳ್ಳುವುದರಿಂದ ಪ್ರಚೋದಿತವಾಗಬಹುದು. ಕಣ್ಣುಕುಟಿಕೆಗಳು ಹಲವುವೇಳೆ ಕಣ್ಣಿನಲ್ಲಿ ಸ್ಟ್ಯಾಫ಼ಿಲೊಕಾಕಲ್ ಸೋಂಕಿನಿಂದ ಉಂಟಾಗುತ್ತವೆ, ಮತ್ತು ಬ್ಲೆಫ಼ರೈಟಿಸ್‍ಗೆ ಗೌಣವಾಗಿರಬಹುದು ಅಥವಾ ಇಮ್ಯುನೊಗ್ಲಾಬ್ಯಲಿನ್‍ನಲ್ಲಿನ ಕೊರತೆಯಿಂದ ಉಂಟಾಗಬಹುದು. ವ್ಯಕ್ತಿಗಳ ನಡುವೆ ಸೋಂಕು ಹರಡದಂತೆ ತಡೆಯಲು ತೊಳೆಬಟ್ಟೆಗಳು ಅಥವಾ ಮುಖದ ಟವಲ್‍ಗಳನ್ನು ಹಂಚಿಕೊಳ್ಳುವುದನ್ನು ಕಡಿಮೆ ಮಾಡಬೇಕು.

ಉಲ್ಲೇಖಗಳು[ಬದಲಾಯಿಸಿ]

  1. "Eyelid Disorders Chalazion & Stye". NEI. 4 May 2010. Archived from the original on 18 October 2016. Retrieved 14 October 2016. {{cite web}}: Unknown parameter |deadurl= ignored (help)