ಕಣ್ಣಾ ಮುಚ್ಚಾಲೆ ಆಟ
ಕಣ್ಣಾ ಮುಚ್ಚಾಲೆ
ಆಡಲು ಬೇಕಾಗುವ ವಸ್ತುಗಳು – ವಸ್ತುಗಳ ಅಗತ್ಯವಿಲ್ಲ
ಆಟದ ವಿವರಣೆ –
ಅಡಗುವ ಮತ್ತು ಅಡಗಿರುವವರನ್ನು ಹುಡುಕುವ ಆಟವೇ ಕಣ್ಣ ಮುಚ್ಚಾಲೆ ಆಟ. ಈ ಆಟವನ್ನು ಹಲವಾರು ರೀತಿಯಲ್ಲಿ ಆಡುತ್ತಿದ್ದು ಮಕ್ಕಳಿಗೆ ಪ್ರಿಯವಾದ ಆಟವಾಗಿದೆ ಹಾಗೂ ತುಂಬಾ ಹಳೆಯ ಸಾಂಪ್ರದಾಯಿಕ ಆಟವಾಗಿದೆ.ಆಡಲು ಕೆಲವರು “ಕಣ್ಣಾ ಮುಚ್ಚೆ “ ಹಾಡನ್ನು ಬಳಸಿದರೆ ಇನ್ನು ಕೆಲವರು ಸಂಖ್ಯೆಗಳನ್ನು ಹೇಳುತ್ತಾ ಆಡುತ್ತಾರೆ.[೧]
ಆಡುವ ವಿಧಾನ
· ಈ ಆಟವನ್ನಾಡಲು ಕನಿಷ್ಟ ೩ ಜನರು ಬೇಕು ಆಟಗಾರರ ಸಂಖ್ಯೆ ಜಾಸ್ತಿ ಆದಂತೆ ಆಟ ಮಜವಾಗಿರುತ್ತದೆ.
· ಒಬ್ಬ ಆಟಗಾರನನ್ನು ಆಯ್ಕೆ ಮಾಡಿ ಆತನ ಕಣ್ಣನ್ನು ಇನ್ನೊಬ್ಬಾತ ಮುಚ್ಚಿ ಹಿಡಿದು “ಕಣ್ಣಾ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳೆ ಹೋಯ್ತು ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ ಕೂ ನಾ” ಎಂದು ಹಾಡುತ್ತಾರೆ.
· ಈ ಸಮಯದಲ್ಲಿ ಉಳಿದ ಆಟಗಾರರು ಅಡಗಿ ಕುಳಿತುಕೊಳ್ಳಬೇಕು.
· ಕಣ್ಣು ಮುಚ್ಚಿಸಿಕೊಂಡಾತ ಅಡಗಿದವರನ್ನುಹುಡುಕಿ ಕಣ್ಣು ಮುಚ್ಚಿದ ಸ್ಥಳಕ್ಕೆ ಕರೆದುಕೊಂಡು ಬರಬೇಕು.
· ಕೊನೆಯದಾಗಿ ಸಿಕ್ಕಿದವರು ಮತ್ತೆ ಕಣ್ಣು ಮುಚ್ಚಿಸಿಕೊಳ್ಳುತ್ತಾರೆ. ಹೀಗೆ ಆಟ ಮುಂದುವರಿಯುತ್ತದೆ.
· ಹಾಡನ್ನು ಹೇಳದೆ ಕಣ್ಣು ಮುಚ್ಚುವಾತ ಸಂಖ್ಯೆಗಳನ್ನು ಹೇಳುತ್ತಾ ಕೂಡ ಆಡುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ http://kanaja.in/?p=103278[ಶಾಶ್ವತವಾಗಿ ಮಡಿದ ಕೊಂಡಿ]