ವಿಷಯಕ್ಕೆ ಹೋಗು

ಕಣ್ಣಾ ಮುಚ್ಚಾಲೆ ಆಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಣ್ಣಾ ಮುಚ್ಚಾಲೆ

ಆಡಲು ಬೇಕಾಗುವ ವಸ್ತುಗಳು – ವಸ್ತುಗಳ ಅಗತ್ಯವಿಲ್ಲ

ಆಟದ ವಿವರಣೆ –

ಅಡಗುವ ಮತ್ತು ಅಡಗಿರುವವರನ್ನು ಹುಡುಕುವ ಆಟವೇ ಕಣ್ಣ ಮುಚ್ಚಾಲೆ ಆಟ. ಈ ಆಟವನ್ನು ಹಲವಾರು ರೀತಿಯಲ್ಲಿ ಆಡುತ್ತಿದ್ದು ಮಕ್ಕಳಿಗೆ ಪ್ರಿಯವಾದ ಆಟವಾಗಿದೆ ಹಾಗೂ ತುಂಬಾ ಹಳೆಯ ಸಾಂಪ್ರದಾಯಿಕ ಆಟವಾಗಿದೆ.ಆಡಲು ಕೆಲವರು “ಕಣ್ಣಾ ಮುಚ್ಚೆ “ ಹಾಡನ್ನು ಬಳಸಿದರೆ ಇನ್ನು ಕೆಲವರು ಸಂಖ್ಯೆಗಳನ್ನು ಹೇಳುತ್ತಾ ಆಡುತ್ತಾರೆ.[]

ಆಡುವ ವಿಧಾನ

·        ಈ ಆಟವನ್ನಾಡಲು ಕನಿಷ್ಟ ೩ ಜನರು ಬೇಕು ಆಟಗಾರರ ಸಂಖ್ಯೆ ಜಾಸ್ತಿ ಆದಂತೆ ಆಟ ಮಜವಾಗಿರುತ್ತದೆ.

·        ಒಬ್ಬ ಆಟಗಾರನನ್ನು ಆಯ್ಕೆ ಮಾಡಿ ಆತನ ಕಣ್ಣನ್ನು ಇನ್ನೊಬ್ಬಾತ ಮುಚ್ಚಿ ಹಿಡಿದು “ಕಣ್ಣಾ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳೆ ಹೋಯ್ತು ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ ಕೂ ನಾ” ಎಂದು ಹಾಡುತ್ತಾರೆ.

·        ಈ ಸಮಯದಲ್ಲಿ ಉಳಿದ  ಆಟಗಾರರು ಅಡಗಿ ಕುಳಿತುಕೊಳ್ಳಬೇಕು.

·        ಕಣ್ಣು ಮುಚ್ಚಿಸಿಕೊಂಡಾತ ಅಡಗಿದವರನ್ನುಹುಡುಕಿ ಕಣ್ಣು ಮುಚ್ಚಿದ ಸ್ಥಳಕ್ಕೆ ಕರೆದುಕೊಂಡು ಬರಬೇಕು.

·        ಕೊನೆಯದಾಗಿ ಸಿಕ್ಕಿದವರು ಮತ್ತೆ ಕಣ್ಣು ಮುಚ್ಚಿಸಿಕೊಳ್ಳುತ್ತಾರೆ. ಹೀಗೆ ಆಟ ಮುಂದುವರಿಯುತ್ತದೆ.

·        ಹಾಡನ್ನು ಹೇಳದೆ ಕಣ್ಣು ಮುಚ್ಚುವಾತ ಸಂಖ್ಯೆಗಳನ್ನು ಹೇಳುತ್ತಾ ಕೂಡ ಆಡುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. http://kanaja.in/?p=103278[ಶಾಶ್ವತವಾಗಿ ಮಡಿದ ಕೊಂಡಿ]