ಕಡಬ ತಾಲೂಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡಬ ತಾಲೂಕು ನಕ್ಷೆ

ಕಡಬ ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ತಾಲ್ಲೂಕು ಕೇಂದ್ರ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 272 ಕಿ.ಮೀ ದೂರದಲ್ಲಿದೆ. ಕಡಬವು ಪಶ್ಚಿಮಕ್ಕೆ, ಬೆಳ್ತಂಗಡಿ ತಾಲೂಕು ಉತ್ತರಕ್ಕೆ, ಸುಳ್ಯ ಸಕಲೇಶಪುರ ಮತ್ತು ತಾಲೂಕಿನ ಪೂರ್ವಕ್ಕೆ. ಕುಕ್ಕ ಸುಬ್ರಹ್ಮಣ್ಯ, ಧರ್ಮಸ್ಥಳ, ಮಡಿಕೇರಿ ಅಥವಾ ಕೊಡಗು ನಂತಹ ಪ್ರವಾಸೋದ್ಯಮ ಮತ್ತು ತೀರ್ಥಕ್ಷೇತ್ರಗಳು ಕಡಬದಿಂದ ಸುಲಭವಾಗಿ ತಲುಪಬಹುದು. ಕಡಬದ ರಸ್ತೆ ಅಥವಾ ರೈಲು ಮಾರ್ಗವಾಗಿ ತಲುಪಬಹುದು, ಹತ್ತಿರದ ರೈಲು ನಿಲ್ದಾಣ ಕೊಡಿಂಬಾಳ[೧]

ಹಿನ್ನೆಲೆ[ಬದಲಾಯಿಸಿ]

ಕಡಬ ಹಿಂದೆ ಕದಂಬರ ರಾಜ್ಯದ ಒಂದು ಪ್ರಮುಖ ಕೇಂದ್ರವಾಗಿತ್ತು.  ಹಿಂದೆ ಇಲ್ಲಿಗೆ ಆದಿಶಂಕರರು ಭೇಟಿ ಕೊಟ್ಟಿದ್ದರೆಂಬ ಉಲ್ಲೇಖವಿದೆ. ಕಡಬ ಗ್ರಾಮ ಪಂಚಾಯತಿಯು ದ.ಕ ಜಿಲ್ಲೆಯ ಕಡಬ ತಾಲೂಕಿನಲ್ಲಿದೆ. ಈ ಪಂಚಾಯತಿಯು ಕಡಬ ಮತ್ತು ಕೋಡಿಂಬಾಳ ಗ್ರಾಮಗಳನ್ನೊಳಗೊಂಡಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಈ ಪಂಚಾಯತಿಯು ಉಪ್ಪಿನಂಗಡಿಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ, ಸುಬ್ರಹ್ಮಣ್ಯದಿಂದ ಸುಮಾರು 23 ಕಿ.ಮೀ ದೂರದಲ್ಲಿದೆ.

ರಾಜಕೀಯ ಹಿನ್ನೆಲೆ[ಬದಲಾಯಿಸಿ]

ಕಡಬ ಪಂಚಾಯತ್ ವ್ಯಾಪ್ತಿಯಲ್ಲಿ 2 ಗ್ರಾಮ ಮತ್ತು 8 ವಾರ್ಡ್ ಗಳು ಇರುತ್ತವೆ. ಮಂಗಳೂರು ಲೋಕಸಭಾ ಕ್ಷೇತ್ರ , ಸುಳ್ಯ ವಿಧಾನ ಸಭಾ ಕ್ಷೇತ್ರ , ಪುತ್ತೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಈ ಪಂಚಾಯತ್ ಬರುತ್ತದೆ. 1994ರ ಮುಂಚೆ ಇದು ಮಂಡಲ ಪಂಚಾಯತಿಯಾಗಿದ್ದು, 1994ರ ನಂತರ ಗ್ರಾಮ ಪಂಚಾಯತ್ ಆಗಿ ಪರಿವರ್ತನೆ ಆಗಿದೆ.  ಸದ್ಯ ಈಗ ಇಲ್ಲಿ 8 ವಾರ್ಡ್ ಗಳಿಂದ 24 ಜನ ಚುನಾಯಿತ ಸದಸ್ಯರನ್ನು ಒಳಗೊಂಡು ಉತ್ತಮ ಆಡಳಿತ ನಡೆಯುತ್ತದೆ.

ಜನ ಜೀವನ ಮತ್ತು ಆರ್ಥಿಕ ಹಿನ್ನೆಲೆ[ಬದಲಾಯಿಸಿ]

ಈ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಜಾತಿಯ ಜನರು ವಾಸವಾಗಿದ್ದು, ಪೂಜಾರಿ,ಗೌಡರು, ಮರಾಠಿ ನಾಯ್ಕ, ಪ.ಜಾ ಮತ್ತು ಪಂಗಡ, ಬ್ರಾಹ್ಮಣ, ಬಂಟ, ಮುಸಲ್ಮಾನ ಮತ್ತು ಕ್ರಿಶ್ಚಿಯನ್ ಮೊದಲಾದ ಜಾತಿಗಳ ಜನರು ವಾಸಿಸುತ್ತಾರೆ ಮತ್ತು ಇವರು ತಮ್ಮ ಜಾತಿಗಳ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ರೂಢಿ ಮತ್ತು ಸಂಪ್ರದಾಯಗಳನ್ನು ಆಚರಿಸುತ್ತಾರೆ. ಈ ಪಂಚಾಯತ್ ವ್ಯಾಪ್ತಿಯಲ್ಲಿ ಶೇ 90 ರಷ್ಟು ಜನ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಯಿಂದ ಜೀವಿಸುತ್ತಿದ್ದಾರೆ. ಇಲ್ಲಿನ ಜನರು ಭತ್ತ, ಅಡಿಕೆ, ತೆಂಗು, ಕೊಕ್ಕೋ, ರಬ್ಬರ್ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಪಶು ಸಂಗೋಪನೆ ಕೂಡ ಇಲ್ಲಿನ ಜನರ ಮುಖ್ಯ ಕಸುಬಾಗಿದೆ. ಕೆಲ ಜನರು ವಲಸೆ ಹೋಗಿ ಜೀವನಕ್ಕೆ ಕೂಲಿ ಮಾಡುತ್ತಿದ್ದಾರೆ.ಕೃಷಿಕರು ಬೇಸಾಯದ ಜೊತೆಗೆ ಹೈನುಗಾರಿಕೆ ಸ್ವಲ್ಪ ಪ್ರಮಾಣದಲ್ಲಿ ಹೊಂದಿರುತ್ತಾರೆ

ಕಡಬ ವಾಪ್ತಿಗೆ ಸೇರಿದ ಹೊಸ ಗ್ರಾಮಗಳು[ಬದಲಾಯಿಸಿ]

ಕೊಯಿಲ, ಹಳೆನೇರೆಂಕಿ, ಆಲಂಕಾರು, ಪೆರಾಬೆ,ಬಲ್ಯ, ಕುಂತೂರು, ಕುಟ್ರಾಪ್ಪಾಡಿ, ಕಡಬ, 102ನೇ ನೆಕ್ಕಿಲಾಡಿ, ಕೋಡಿಂಬಾಳ, ಬಂಟ್ರ,  ರೆಂಜಿಲಾಡಿ, ನೂಜಿಬಾಳ್ತಿಲ, ಐತ್ತೂರು, ಕೊಂಬಾರು, ಬಿಳಿನೆಲೆ, ದೋಳ್ಪಾಡಿ, ಶಿರಿಬಾಗಿಲು, ಕೊಣಾಜೆ, ಬಜತ್ತೂರು, ಗೋಳಿತೊಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಹತ್ಯಡ್ಕ, ರೆಖ್ಯ, ಶಿಬಾಜೆ, ಶಿಶಿಲ, ಸುಳ್ಯ ತಾಲೂಕಿನ ಎಡಮಂಗಲ, ಎಣ್ಮೂರು, ಐವತ್ತೂಕ್ಲು, ಕೇನ್ಯ, ಬಳ್ಪ, ಪಂಬೆತ್ತಾಡಿ, ಕೂತುRಂಜ, ಏನೆಕಲ್ಲು, ಸುಬ್ರಹ್ಮಣ್ಯ ಹಾಗೂ ಐನೆಕಿದು.

ಶಾಲಾ ಕಾಲೇಜುಗಳು[ಬದಲಾಯಿಸಿ]

ಸರಕಾರಿ,ಹಿರಿಯ,ಪ್ರಾಥಮಿಕ,ಮಾದರಿ ಶಾಲೆ ಕಡಬ ಸರಸ್ವತಿ ವಿದ್ಯಾಲಯ ವಿದ್ಯಾ ನಗರ ಕಡಬ ಮತ್ತು ಹನುಮಾನ್ ನಗರ ಸರಕಾರಿ ಪದವಿಪೂರ್ವ ಕಾಲೇಜು ಕಡಬ ಸಂತ ಜೋಕಿಮರ ಪದವಿಪೂರ್ವ ಕಾಲೇಜು ಕಡಬ ಸೈಂಟ್ ಅನ್ಸ್ ಇಂಗ್ಲಿಷ್ ಮಿಡಿಯಾಮ್ ಸ್ಕೂಲ್ ಕಾನ್ನಯ ಜ್ಯೋತಿ ಅಂಗ್ಲ ಮಾದ್ಯಮ ಶಾಲೆ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜುಗಳು ನೂಜಿಬಾಳ್ತಿಲ ಮತ್ತು ನೆಲ್ಯಾಡಿ ಎಮ್ಸ್ ಕಾಲೇಜು ಕಡಬ

ಉಲ್ಲೇಖಗಳು[ಬದಲಾಯಿಸಿ]

  1. "Kadaba, Moodbidri declared taluks for second time; Udupi will now have three taluks". www.thehindu.com, 20 September 2017.

ಬಾಹ್ಯ ಕೊಂಡಿಗಳು[ಬದಲಾಯಿಸಿ]